ಕಾರವಾರದ ಅಮದಳ್ಳಿ ಹಾಗೂ ಶಿರಸಿಯ ಬನವಾಸಿಯಲ್ಲಿ ಗುಣಾತ್ಮಕ ಶಿಕ್ಷಣದ ಮೂಲಕ ಮನೆ ಮಾತಾಗಿರುವ ಎಜುಕೇರ್ ಆಂಗ್ಲ ಮಾಧ್ಯಮ ಶಾಲೆ ಮತ್ತೊಂದು ಶಾಖೆ ತೆರೆದಿದೆ.
ಕೋಡಿಭಾಗದ ವಿವೇಕಾನಂದ ವಿದ್ಯಾಸಂಸ್ಥೆಯ ಆಶ್ರಯದಲ್ಲಿ ನಡೆಯುತ್ತಿರುವ ಸ್ವಾಮಿ ವಿವೇಕಾನಂದ ವಿದ್ಯಾಸಂಸ್ಥೆಯ ಜೊತೆ ಎಜುಕೇರ್ ಆಂಗ್ಲ ಮಾಧ್ಯಮ ಶಾಲೆ ಒಡಂಬಡಿಕೆ ಮಾಡಿಕೊಂಡಿದೆ. ಹೀಗಾಗಿ ಮುಂದಿನ ಶೈಕ್ಷಣಿಕ ವರ್ಷದಿಂದ ಕಾರವಾರ ನಗರದಲ್ಲಿಯೂ ಎಜುಕೇರ್ ಆಂಗ್ಲ ಮಾಧ್ಯಮ ಶಾಲೆಯ ಕಾರ್ಯಕ್ಷೇತ್ರ ವಿಸ್ತರಣೆ ಆಗಲಿದೆ.
ಕಳೆದ 20 ವರ್ಷಗಳಿಂದ ಎಜುಕೇರ್ ಆಂಗ್ಲ ಮಾಧ್ಯಮ ಶಾಲೆ ಮೌಲ್ಯಾಧಾರಿತ ಶಿಕ್ಷಣ ನೀಡುತ್ತಿದೆ. ಶಿಕ್ಷಣದ ಜೊತೆ ಮಕ್ಕಳಿಗೆ ಅಗತ್ಯವಿರುವ ಸ್ಪರ್ಧಾತ್ಮಕ ಪರೀಕ್ಷೆಗಳ ಬಗ್ಗೆಯೂ ಅರಿವು ಮೂಡಿಸುತ್ತಿದೆ. ಈ ಹಿನ್ನಲೆ ಸ್ವಾಮಿ ವಿವೇಕಾನಂದ ವಿದ್ಯಾ ಸಂಸ್ಥೆಯ ಆಡಳಿತ ಮಂಡಳಿಯ ಅಧ್ಯಕ್ಷರಾದ ದೀಪಕ್ ಡಿ ವೈ ಗಣ್ಕರ್, ಕಾರ್ಯದರ್ಶಿ ವಿ ಜೆ ತಾಮ್ಸೆ ಮತ್ತು ಖಜಾಂಚಿ ಕಿರಣ್ ತ್ಥಾಮ್ಸೆ ಅವರು ಹರ್ಷವ್ಯಕ್ತಪಡಿಸಿದ್ದಾರೆ. ಅವರೆಲ್ಲರೂ ಸೇರಿ ಶಿಕ್ಷಣ ಸಂಸ್ಥೆಯ ಸಂಪೂರ್ಣ ಜವಾಬ್ದಾರಿಯನ್ನು ಹಸ್ತಾಂತರಿಸಿದ್ದು, ಎಜುಕೇಶನ್ ಆಂಗ್ಲ ಮಾಧ್ಯಮ ಶಾಲೆಯ ಆಡಳಿತ ಮಂಡಳಿಯ ಆಡಳಿತ ಅಧಿಕಾರಿ ನಾಗರತ್ನ ಜೈ ರಂಗನಾಥ ಅವರು ಈ ಅಧಿಕಾರವಹಿಸಿಕೊಂಡಿದ್ದಾರೆ.
ಸAಸ್ಥೆಯ ಕೋಆರ್ಡಿನೇಟರ್ ವಿನೋದ್ ಆಲ್ಮೆಡ, ನೇಹಾ ಬೈರನಕೇರಿ. ವಿವೇಕಾನಂದ ಪ್ರೌಢಶಾಲೆಯ ಮುಖ್ಯಾಧ್ಯಾಪಕ ಪ್ರಾಜೆಕ್ತ್ತ ಮಹೇಕರ್ ಇನ್ನಿತರರು ಶುಭಕೋರಿದರು.