ನದಿ ತಿರುವು ಯೋಜನೆ ವಿರೋಧಿಸಿ 25 ಸಾವಿರಕ್ಕೂ ಅಧಿಕ ಅರ್ಜಿ ಸರ್ಕಾರಕ್ಕೆ ಸಲ್ಲಿಕೆಯಾಗಲು ಸಿದ್ಧವಾಗಿದೆ. `ಅಘನಾಶಿನಿ – ವರದ ನದಿ ಜೋಡಣೆಯ ಯೋಜನೆಯು ಜನ ಮತ್ತು ಪರಿಸರ ವಿರೋಧಿ ಯೋಜನೆ’ ಎನ್ನುವುದರ ಬಗ್ಗೆ ವೈಜ್ಞಾನಿಕ ಕಾರಣಗಳ ಜೊತೆ ಸರ್ಕಾರಕ್ಕೆ ಮನವರಿಕೆ ಮಾಡುವ ಪ್ರಯತ್ನ ನಡೆದಿದೆ.
`ಪಶ್ಚಿಮಘಟ್ಟಗಳು ಕೇವಲ ಪ್ರಾದೇಶಿಕ ಪರಿಸರ ಸಂಪತ್ತು ಅಲ್ಲ. ಹವಮಾನ ಭದ್ರತೆ ವ್ಯವಸ್ಥೆಯ ಅವಿಭಾಜ್ಯ ಅಂಗ. ಇಂತಹ ಪರಿಸರ ಪ್ರದೇಶದಲ್ಲಿ ನದಿಯ ನೀರನ್ನು ತಿರುಗಿಸುವುದು, ಸುರಂಗ ನಿರ್ಮಾಣ ಮತ್ತು ಆಣೆ ಕಟ್ಟುಗಳಂತ ಕಾಮಗಾರಿಗಳನ್ನು ಜರುಗಿಸುವುದು ಆತಂಕಕಾರಿ. ಅರಣ್ಯ ನಾಶ, ಭೂ ಕುಸಿತ ಅಸ್ಥಿರತೆ, ಜೀವ ವೈವಿದ್ಯ ಹಾನಿ, ಹವಮಾನದ ವ್ಯತಿರಿಕ್ತತೆ ಮೇಲೆ ಪರಿಣಾಮ ಬೀರುವುದೆಂಬುದು ಅಧ್ಯಯನದಿಂದ ತಿಳಿದು ಬಂದಿರುವುದರಿAದ ನಿಯೋಜಿತ ಯೋಜನೆಯು ಅವೈಜ್ಞಾನಿಕ’ ಎಂಬ ವಿಷಯಗಳ ಬಗ್ಗೆ ಪತ್ರದಲ್ಲಿ ಉಲ್ಲೇಖಿಸಲಾಗಿದೆ. `ಪಶ್ಚಿಮ ಘಟ್ಟ ಪ್ರದೇಶದ 64,365 ಹೇಕ್ಟರ್ ಅರಣ್ಯ ಪ್ರದೇಶವನ್ನು ಅರಣ್ಯೇತರ ಚಟುವಟಿಕೆಗೆ ನೀಡಲಾಗಿದೆ. ಜಿಲ್ಲೆಯ ಸಾಂದ್ರತೆ ಅನುಗುಣವಾಗಿ ಹೆಚ್ಚಿನ ಒತ್ತಡವನ್ನು ಭರಿಸಲು ಸಾಧ್ಯತೆಗಳಿಲ್ಲ. ಕಾರಣ, ಕರ್ನಾಟಕ ರಾಜ್ಯದ ಉತ್ತರಕನ್ನಡ ಜಿಲ್ಲೆಯಲ್ಲಿನ ಸಿದ್ದಾಪುರದಲ್ಲಿ ನಿಯೋಜಿಸಲಾಗುವ ಅಘನಾಶಿನಿ – ವರದ ನದಿ ಜೋಡಣೆಯ ಯೋಜನೆಯು ಜನ ಮತ್ತು ಪರಿಸರ ವಿರೋಧಿ ಯೋಜನೆ’ ಎಂದು ಆ ಪತ್ರದಲ್ಲಿ ಉಲ್ಲೇಖಿಸಲಾಗಿದೆ. ಅರಣ್ಯ ಅತಿಕ್ರಮಣದಾರರು ಈ ಪತ್ರ ಬರೆಯುತ್ತಿದ್ದು, ಸಿದ್ದಾಪುರದ ಕ್ಯಾದಗಿ ಬಳಿಯ ಗಣಪತಿ ದೇವಾಲಯದಲ್ಲಿ ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆಯ ಅಧ್ಯಕ್ಷ ರವೀಂದ್ರ ನಾಯ್ಕ ಈ ವಿಷಯದ ಬಗ್ಗೆ ಮಾಹಿತಿ ನೀಡಿದ್ದಾರೆ.
`ಉತ್ತರ ಕನ್ನಡದ ಪಶ್ಚಿಮ ಘಟ್ಟಗಳು ಜೀವ ವೈವಿದ್ಯದ ತಾಣ. ಪ್ರಮುಖ ನದಿಗಳ ಉಗಮ ಸ್ಥಾನ ಮತ್ತು ಮಳೆಮಾರುತಗಳ ನಿಯಂತ್ರಕವಾಗಿ ಮಹತ್ವ ಪಡೆದಿವೆ. ಇದು ಕನಾಟಕದ ಪರಿಸರ ಮತ್ತು ಆರ್ಥಿಕತೆಗೆ ನಿರ್ಣಾಯಕವಾಗಿದೆ. ಈ ಭಾಗವು ದಟ್ಟ ಕಾಡುಗಳು, ಸುಂದರ ಜಲಪಾತಗಳು ಮತ್ತು ವಿಶಿಷ್ಟ ಸಸ್ಯ ಹಾಗೂ ಪ್ರಾಣಿ ಸಂಕುಲಗಳ ತವರಾಗಿದೆ. ಇದನ್ನು ಯುನೆಸ್ಕೋ ವಿಶ್ವ ಪರಂಪರೆಯ ತಾಣವೆಂದು ಗುರುತಿಸಿದೆ. ಪಶ್ಚಿಮ ಘಟ್ಟಗಳು ವಿಶ್ವದ 8 ಪ್ರಮುಖ ಜೈವಿಕ ವೈವಿದ್ಯತೆಯ ಹಾಟ್ ಸ್ಪಾಟ್ಗಳಲ್ಲಿ ಒಂದಾಗಿದೆ. ಇಲ್ಲಿ ಅಪಾರ ಸಂಖ್ಯೆಯ ಸ್ಥಳೀಯ ಮತ್ತು ಅಳಿವಿನಂಚಿನಲ್ಲಿರುವ ಪ್ರಭೇದಗಳಿವೆ. ಇದು ವೈಜ್ಞಾನಿಕ ಸಂಶೋಧನೆಯಿAದ ಕಂಡುಬAದಿದೆ. ಇಂತಹ ಅಭಿಯಾರಣ್ಯ ಪ್ರದೇಶವೆಂದು ಘೋಷಿಸಿದ ಪ್ರದೇಶದಲ್ಲಿ ಯೋಜನೆಯೂ ಪರಿಸರಕ್ಕೆ ಮಾರಕವಾಗುದೆಂಬುದನ್ನು ಆಕ್ಷೇಪಣೆಯಲ್ಲಿ ಉಲ್ಲೇಖಿಸಲ್ಪಟ್ಟಿದೆ’ ಎಂದು ರವೀಂದ್ರ ನಾಯ್ಕ ಅವರು ಹೇಳಿದ್ದಾರೆ. `ಉತ್ತರ ಕನ್ನಡದ ಪಶ್ಚಿಮ ಘಟ್ಟಗಳು ಪರಿಸರ ಸಮತೋಲನ, ಜಲ ಸಂಪನ್ಮೂಲ ಮತ್ತು ಜೈವಿಕ ವೈವಿಧ್ಯತೆಯ ದೃಷ್ಟಿಯಿಂದ ಅತ್ಯಂತ ಮಹತ್ವದ ಪ್ರಾಕೃತಿಕ ಸಂಪತ್ತಾಗಿದೆ. ದಾರಾಳವಾಗಿ ಜಿಲ್ಲೆಯ ಅರಣ್ಯ ಭೂಮಿಯನ್ನು ಅರಣ್ಯೇತರ ಚಟುವಟಿಕೆಗೆ ನೀಡಿರುವುದರಿಂದ 1973 ರಲ್ಲಿ ಇರುವಂತ ಅರಣ್ಯ ಪ್ರಮಾಣ ಶೇ.72.26 ರಿಂದ 2013 ರಲ್ಲಿ ಜಿಲ್ಲೆಯ ಅರಣ್ಯ ಪ್ರಮಾಣ ಶೇ 59.70ರಷ್ಟು ಕುಸಿತವಾಗಿರುವ ಅಂಶವನ್ನು ಆಕ್ಷೇಪಣೆಯಲ್ಲಿ ಪ್ರಸ್ತಾಪಿಸಿರುವುದು ಗಮನಾರ್ಹ ಅಂಶ’ ಎಂದವರು ಮಾಹಿತಿ ನೀಡಿದ್ದಾರೆ.