`ಕೆಲಸ ಸರಿ ಇಲ್ಲ. ಸಂಬಳ ಸಾಲುತ್ತಿಲ್ಲ’ ಎಂದು ಕೊರಗುತ್ತಿದ್ದ ಕಿಶೋರ ನಾಯ್ಕ ಅವರು ಆತ್ಮಹತ್ಯೆಗೆ ನಿರ್ಧರಿಸಿದ್ದು, ನೇಣು ಹಾಕಿಕೊಳ್ಳುವಾಗ ಹಗ್ಗ ತುಂಡಾದ ಪರಿಣಾಮ ಅವರು ನೆಲಕ್ಕೆ ಬಿದ್ದು ಸಾವನಪ್ಪಿದ್ದಾರೆ!
ಸಿದ್ದಾಪುರ ಕಾನಗೋಡ ಗಣೇಶ ನಗರದ ಕಿಶೋರ ಈಶ್ವರ ನಾಯ್ಕ (23) ಅವರು ವಾಸವಾಗಿದ್ದರು. ಹೊಟೇಲ್ ಕೆಲಸ ಮಾಡಲು ಅವರು ಆಸಕ್ತಿವಹಿಸಿದ್ದರು. ಹೀಗಾಗಿ ಹೋಟೆಲ್ ಕೆಲಸಕ್ಕಾಗಿ ಅವರು ಎಲ್ಲಡೆ ಅಲೆದಾಡುತ್ತಿದ್ದರು. ಎಲ್ಲಿಯೂ ಒಳ್ಳೆಯ ಕೆಲಸ ಸಿಗದ ಕಾರಣ ಬೆಂಗಳೂರಿಗೂ ಹೋಗಿದ್ದರು. ಎರಡು ತಿಂಗಳ ಹಿಂದೆ ಬೆಂಗಳೂರು ಹೋಗಿದ್ದ ಅವರಿಗೆ ಅಲ್ಲಿಯೂ ಸೂಕ್ತ ಉದ್ಯೋಗ ಸಿಕ್ಕಿರಲಿಲ್ಲ. ಹೀಗಾಗಿ ಕಿಶೋರ ನಾಯ್ಕ ಅವರು ಸರಾಯಿ ಸೇವನೆಯ ಚಟ ಅಂಟಿಸಿಕೊAಡರು. ಸರಾಯಿ ಕುಡಿಯಲು ಅಗತ್ಯವಿರುವಷ್ಟು ಕಾಸು ದುಡಿಯಲು ಅವರಿಗೆ ಸಾಧ್ಯವಾಗಿರಲಿಲ್ಲ. `ಕೆಲಸ ಸರಿ ಇಲ್ಲ. ಇಲ್ಲಿನ ಸಂಬಳ ಸಾಲುತ್ತಿಲ್ಲ’ ಎಂದು ಅವರು ಬೇಸರಿಸಿಕೊಂಡಿದ್ದರು. ವಾರದ ಹಿಂದೆ ಅವರು ಊರಿಗೆ ಮರಳಿದ್ದು, ಮತ್ತೆ ಇಲ್ಲಿಯೂ ಕೆಲಸದ ಹುಟುಕಾಟ ನಡೆಸಿದರು. ಆದರೆ, ಅವರಿಗೆ ಸಮಾಧಾನ ನೀಡುವ ಕೆಲಸ ಎಲ್ಲಿಯೂ ಸಿಗಲಿಲ್ಲ.
ಜೀವನದಲ್ಲಿ ಜಿಗುಪ್ಸೆಗೆ ಒಳಗಾದ ಕಿಶೋರ ನಾಯ್ಕ ಅವರು ಫೆಬ್ರವರಿ 5ರಂದು ಆತ್ಮಹತ್ಯೆಗೆ ನಿರ್ಧರಿಸಿದರು. ತಾವು ವಾಸವಾಗಿರುವ ಮದ್ಯದ ಕೋಣೆಗೆ ಹೋದರು. ಅಲ್ಲಿದ್ದ ಮರದ ತೊಲೆಗೆ ಹಗ್ಗ ಕಟ್ಟಿದರು. ಹಗ್ಗದ ಇನ್ನೊಂದು ತುದಿಯನ್ನು ಕುತ್ತಿಗೆಗೆ ಸಿಕ್ಕಿಸಿಕೊಂಡು ನೇಣು ಹಾಕಿಕೊಂಡರು. ಆದರೆ, ಆ ಹಗ್ಗ ಅಲ್ಲಿ ತುಂಡಾಗಿದ್ದರಿoದ ಅವರು ನೆಲಕ್ಕೆ ಅಪ್ಪಳಿಸಿದರು. ಎತ್ತರದಿಂದ ನೆಲಕ್ಕೆ ಬಿದ್ದ ರಭಸಕ್ಕೆ ಅವರು ಅಲ್ಲಿಯೇ ಸಾವನಪ್ಪಿದರು. ಅರಣ್ಯ ಇಲಾಖೆಯಲ್ಲಿ ಬೀಟ್ ಪಾರೆಸ್ಟರ್ ಆಗಿರುವವ ಕಿರಣಕುಮಾರ ನಾಯ್ಕ ಅವರು ಸಹೋದರ ಸಾವನಪ್ಪಿರುವುದನ್ನು ನೋಡಿದರು. ಕಿರಣಕುಮಾರ ನಾಯ್ಕ ಅವರು ಸಿದ್ದಾಪುರ ಪೊಲೀಸ್ ಠಾಣೆಗೆ ಫೋನ್ ಮಾಡಿದರು. ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ನೇಣು ಹಾಕಿಕೊಳ್ಳುವಾಗ ಹಗ್ಗ ತುಂಡಾಗಿ ಬಿದ್ದಿರುವುದನ್ನು ಅಲ್ಲಿದ್ದವರು ಗಮನಿಸಿದರು. ಸಹೋದರ ನೀಡಿದ ಮಾಹಿತಿ ಪ್ರಕಾರ ಪೊಲೀಸರು ಪ್ರಕರಣ ದಾಖಲಿಸಿದರು.
`ಆತ್ಮಹತ್ಯೆ ಅಪರಾಧ’