ಮುಂಡಗೋಡದ ಹನುಮಂತ ಬೋವಿವಡ್ಡರ್ ಅವರು ಸರಾಯಿ ಗುಂಗಿನಲ್ಲಿ ವಿಷ ಕುಡಿದಿದ್ದಾರೆ. ಹುಬ್ಬಳ್ಳಿಯ ಕಿಮ್ಸ್’ಗೆ ದಾಖಲಿಸಿದರೂ ಅವರನ್ನು ಬದುಕಿಸಿಕೊಳ್ಳಲು ಸಾಧ್ಯವಾಗಿಲ್ಲ.
ಮುಂಡಗೋದ ಸುಭಾಶನಗರದಲ್ಲಿ ಹನುಮಂತ ಬೋವಿವಡ್ಡರ್ (75) ಅವರು ವಾಸವಾಗಿದ್ದರು. ಹುಬ್ಬಳ್ಳಿ ರಸ್ತೆಯಲ್ಲಿರುವ ಮನೆಯಲ್ಲಿ ಅವರು ಮದ್ಯ ಸೇವನೆ ಮಾಡಿದ್ದರು. ಅವರ ಮನೆಯಲ್ಲಿ `ರೌಂಡ್ ಅಫ್’ ಎಂಬ ಕ್ರಿಮಿನಾಶಕ ತಂದಿರಿಸಿದ್ದು, ಸರಾಯಿ ನಶೆಯಲ್ಲಿ ಆ ವಿಷಯವನ್ನು ಅವರು ಸೇವಿಸಿದರು.
ಅಸ್ವಸ್ಥಗೊಂಡಿದ್ದ ಹನುಮಂತ ಬೋವಿವಡ್ಡರ್ ಅವರನ್ನು ಕುಟುಂಬದವರು ಆಸ್ಪತ್ರೆಗೆ ದಾಖಲಿಸಿದರು. ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ಸಾಗಿಸಿ ಅವರಿಗೆ ಚಿಕಿತ್ಸೆ ಕೊಡಿಸಿದರು. ಆದರೆ, ಅದರಿಂದ ಯಾವುದೇ ಪ್ರಯೋಜನವಾಗಲಿಲ್ಲ. ಚಿಕಿತ್ಸೆಗೆ ಸ್ಪಂದಿಸದೇ ಹನುಮಂತ ಬೋವಿವಡ್ಡರ್ ಅವರು ಪ್ರಾಣಬಿಟ್ಟರು. ತಂದೆಯ ಸಾವಿನ ಬಗ್ಗೆ ಬಸವರಾಜ ಬೋವಿವಡ್ಡರ್ ಮಾಹಿತಿ ನೀಡಿದ್ದು, ಮುಂಡಗೋಡು ಪೊಲೀಸರು ಪ್ರಕರಣ ದಾಖಲಿಸಿದರು.