ತೆಂಗಿನ ಕಾಯಿ ಕೊಯ್ಯಲು ಮರ ಏರಿದ್ದ ಯಲ್ಲಾಪುರದ ವಿನಾಯಕ ಸಿದ್ದಿ ಅವರು ಮರದಿಂದ ಬಿದ್ದು ಸಾವನಪ್ಪಿದ್ದಾರೆ.
ಯಲ್ಲಾಪುರದ ಮಾಗೋಡು ಬಳಿಯ ಕಂಚಿತಗ್ಗುವಿನಲ್ಲಿ ವಿನಾಯಕ ದೇವೇಂದ್ರ ಸಿದ್ದಿ (25) ಅವರು ವಾಸವಾಗಿದ್ದರು. ಅವರ ಪೂರ್ವಜರು ತಮ್ಮ ಅಡಿಕೆ ತೋಟದಲ್ಲಿ ತೆಂಗಿನ ಗಿಡಗಳನ್ನು ನಾಟಿ ಮಾಡಿದ್ದರು. ಆ ಮರ ಬೆಳೆದು ದೊಡ್ಡದಾಗಿದ್ದು, ಫಲ ಕೊಡುತ್ತಿತ್ತು.
ಫೆಬ್ರವರಿ 7ರ ಬೆಳಗ್ಗೆ ವಿನಾಯಕ ಸಿದ್ದಿ ಅವರು ತೋಟಕ್ಕೆ ಹೋಗಿದ್ದರು. ರಾತ್ರಿ ಆದರೂ ಅವರು ಮನೆಗೆ ಮರಳಲಿಲ್ಲ. ಕುಟುಂಬದವರು ವಿನಾಯಕ ಸಿದ್ಧಿ ಅವರ ಹುಟುಕಾಟ ನಡೆಸಿದಾಗ ಅವರು ತೆಂಗಿನ ಮರದ ಅಡಿ ಬಿದ್ದಿರುವುದು ಕಾಣಿಸಿತು. ರಾತ್ರಿ 9.30ರ ಅವಧಿಗೆ ವಿನಾಯಕ ಸಿದ್ದಿ ಅವರು ಮರದಿಂದ ಬಿದ್ದು ಸಾವನಪ್ಪಿರುವುದು ಗಮನಕ್ಕೆ ಬಂದಿತು.
ಬೆಳಗ್ಗೆ ತೆಂಗಿನ ಕಾಯಿ ಕೀಳಲು ಮರ ಏರಿದ್ದ ವಿನಾಯಕ ಸಿದ್ದಿ ಅವರು ಮರದಿಂದ ಬಿದ್ದು ಕಾಲುಗಳಿಗೆ ಗಂಭೀರ ಪ್ರಮಾಣದಲ್ಲಿ ಪೆಟ್ಟು ಮಾಡಿಕೊಂಡಿದ್ದು, ನಂತರ ಅವರು ಅಲ್ಲಿಯೇ ಸಾವನಪ್ಪಿರುವುದನ್ನು ಕುಟುಂಬದವರು ಖಚಿತಪಡಿಸಿಕೊಂಡರು. ವಿನಾಯಕ ಸಿದ್ದಿ ಅವರ ಸಹೋದರ ಗಣೇಶ ಸಿದ್ದಿ ಅವರು ಈ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದರು. ಯಲ್ಲಾಪುರ ಪಿಸೈ ರಾಜಶೇಖರ ವಂದಲಿ ಅವರು ಪ್ರಕರಣ ದಾಖಲಿಸಿದರು.