ಕುಮಟಾ ಮೇದಿನಿಯ ಅನಂತೇಶ್ವರ ದೇವಾಲಯಕ್ಕೆ ಹೋಗುವ ರಸ್ತೆಯಲ್ಲಿ ಕುಟು ಕುಟಿ ಮಂಡ ಹಾಕಿದ್ದ ಮೂವರು ಪೊಲೀಸರಿಗೆ ಸಿಕ್ಕಿ ಬಿದ್ದಿದ್ದಾರೆ.
ಫೆಬ್ರವರಿ 9ರಂದು ಕುಮಟಾ ಪೊಲೀಸರು ಮೇದಿನಿ ಗ್ರಾಮದ ಬಳಿ ತೆರಳಿದ್ದು, ರಾತ್ರಿ ವೇಳೆ ಕಾಡಿನ ದಾರಿಯಲ್ಲಿ ಬೆಳಕು ಮೂಡಿರುವುದನ್ನು ನೋಡಿದ್ದಾರೆ. ಹತ್ತಿರ ಹೋಗಿ ನೋಡಿದಾಗ ಅಲ್ಲಿ ಬಗ್ಗೋಣದ ಸುಧಾಕರ ವೆಂಕಟ್ರಮಣ ನಾಯ್ಕ ಅವರು ಕುಟು ಕುಡಿ ಮಂಡ ಹಾಕಿ ಜೂಜಾಟ ಆಯೋಜಿಸಿರುವುದು ಗೊತ್ತಾಗಿದೆ. ಈ ವೇಳೆ ಅಪ್ಪೆಓಣಿ ಗೌಡರಕೊಪ್ಪದ ಆಟೋ ಚಾಲಕ ಮಂಜುನಾಥ ಗೊಯ್ದು ಗೌಡ ಹಾಗೂ ದಿವಗಿ ಮಣಕೋಣದ ಗ್ಯಾರೇಜ್ ಕಾರ್ಮಿಕ ಪರಮೇಶ್ವರ ಸುಕ್ರು ಗೌಡ ಸಹ ಆ ಆಟದಲ್ಲಿ ತಲ್ಲೀನರಾಗಿದನ್ನು ಪೊಲೀಸರು ನೋಡಿದ್ದಾರೆ.
ಆ ಮೂವರು ಸೇರಿ ಸೂರ್ಯ, ಚಂದ್ರ, ಕಳಾವರ ಸೇರಿ ಬಗೆ ಬಗೆಯ ಚಿತ್ರದ ಮೇಲೆ ಹಣ ಹೂಡುವಂತೆ ಅವರೆಲ್ಲರೂ ಜನರಿಗೆ ಉತ್ತೇಜಿಸುತ್ತಿದ್ದು, ಜೂಜಾಟ ನಡೆಸುವುದು ಕಾನೂನುಬಾಹಿರ ಎಂಬ ಅರಿವಿದ್ದರೂ ಅದನ್ನು ಮುಂದುವರೆಸಿದ್ದಾರೆ. ಪೊಲೀಸರನ್ನು ನೋಡಿದ ತಕ್ಷಣ ಆ ಮೂವರು ಅಲ್ಲಿಂದ ತಪ್ಪಿಸಿಕೊಳ್ಳುವ ಪ್ರಯತ್ನ ಮಾಡಿದ್ದಾರೆ. ಅದಾಗಿಯೂ, ಪೊಲೀಸ್ ನಿರೀಕ್ಷಕ ಯೋಗೀಶ ಎಂ ಅವರನ್ನು ಅಡ್ಡಗಟ್ಟಿದ್ದಾರೆ.
ಆ ಮೂವರ ಬಳಿಯಿದ್ದ 2500ರೂ ಹಣ, ಕುಟಿ ಕುಟಿ ಮಂಡಲದ ಪಟ್ಟಿ, ಬ್ಯಾಟರಿ, ಪ್ಲಾಸ್ಟಿಕ್ ಡಬ್ಬಿ ಹಾಗೂ ಥರ್ಮಕೋಲ್ ಬಳಸಿ ಮಾಡಿದ ಮೂರು ಗುಂಡುಗಳನ್ನು ಪೊಲೀಸರು ಜಪ್ತು ಮಾಡಿದ್ದಾರೆ. ನಂತರ ಅವರೆಲ್ಲರ ವಿರುದ್ಧವೂ ಪ್ರಕರಣ ದಾಖಲಿಸಿ ತನಿಖೆ ನಡೆಸಿದ್ದಾರೆ.