ಕುಟುoಬದೊಳಗಿನ ಪೂಜೆ ಹಕ್ಕಿಗಾಗಿ ಜೊಯಿಡಾದಲ್ಲಿ ದಾಯಾದಿಗಳ ನಡುವೆ ಕಲಹ ನಡೆದಿದ್ದು, ಅದೇ ವಿಷಯ ದೊಡ್ಡದಾಗಿ ರಕ್ತ ಹರಿದಿದೆ.
ಇಲ್ಲಿನ ವೈಣಿ ಠಾಕೋರವಾಡದಲ್ಲಿರುವ ಶ್ರೀ ರಾಮಲಿಂಗೇಶ್ವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸುವ ವಿಷಯವಾಗಿ ಮಿರಾಶಿ ಕುಟುಂಬದಲ್ಲಿ ಬಿರುಕು ಮೂಡಿತ್ತು. ದೇವಾಲಯದ ಅರ್ಚಕರಾಗಿದ್ದ ಈಶ್ವರ ರಾಮ ಮಿರಾಶಿ ಈಚೆಗೆ ನಿಧನರಾಗಿದ್ದು, ಸಂಪ್ರದಾಯದAತೆ ಅವರ ಸಹೋದರ ಪಾಂಡುರAಗ ರಾಮ ಮಿರಾಶಿಗೆ ಪೂಜೆಯ ಜವಾಬ್ದಾರಿ ನೀಡಬೇಕು ಎಂಬ ಮಾತು ಕುಟುಂಬದಲ್ಲಿ ಕೇಳಿ ಬಂದಿತ್ತು. ಆದರೆ, ಸಾವನಪ್ಪಿದ ಈಶ್ವರ ಮಿರಾಶಿ ಅವರ ಪುತ್ರ ಪ್ರಕಾಶ ಮಿರಾಶಿ ಅವರು ಇದಕ್ಕೆ ಒಪ್ಪಿರಲಿಲ್ಲ.
ಪಾಂಡುರAಗ ಮಿರಾಶಿ ಅವರ ವಿರುದ್ಧ ಪ್ರಕಾಶ ಮಿರಾಶಿ ಸಿಡಿದೆದ್ದಿದ್ದರು. ಪೂಜೆ ವಿಷಯವಾಗಿ ಅವರಿಬ್ಬರ ನಡುವೆ ವಾಗ್ವಾದ ಸಾಮಾನ್ಯವಾಗಿತ್ತು. ಸೋಮವಾರ ಪ್ರಕಾಶ ಮಿರಾಶಿ ದೇವಾಲಯದಲ್ಲಿ ಪೂಜೆ ಮಾಡಿದ್ದು, ನಂತರ ಪೂಜೆ ಮಾಡುವುದಕ್ಕಾಗಿ ದೇವಾಲಯದ ಕೀ ಕೊಡುವಂತೆ ಪಾಂಡುರAಗ ಮಿರಾಶಿ ಕೇಳಿದ್ದರು. ಕೀ ಕೇಳಿದ್ದರಿಂದ ಸಿಟ್ಟಾದ ಪ್ರಕಾಶ ಮಿರಾಶಿ ಮತ್ತೆ ಮಾತಿನ ಚಕಾಮಕಿ ನಡೆಸಿದ್ದು, ಅದು ವಿಕೋಪಕ್ಕೆ ತೆರಳಿತು.
`ದೇವಾಲಯದ ವಿಚಾರದಲ್ಲಿ ಮತ್ತೆ ಹಸ್ತಕ್ಷೇಪ ಮಾಡಿದರೆ ಜೀವಂತವಾಗಿ ಬಿಡುವುದಿಲ್ಲ’ ಎಂದು ಬೆದರಿಸಿದ ಪ್ರಕಾಶ ಮಿರಾಶಿ ಕತ್ತಿಯಿಂದ ಚಿಕ್ಕಪ್ಪನ ತಲೆಗೆ ಹೊಡೆದರು. ಇದರಿಂದ ಪಾಂಡುರAಗ ಮಿರಾಶಿ ಅಲ್ಲಿಯೇ ಕುಸಿದು ಬಿದ್ದರು. ರಕ್ತದ ಮೊಡವಿನಲ್ಲಿ ಬಿದ್ದ ಅವರನ್ನು ಅಲ್ಲಿದ್ದವರು ಆಸ್ಪತ್ರೆಗೆ ಸೇರಿಸಿದರು. ಈ ಕುರಿತು ಪಾಂಡುರAಗ ಮಿರಾಶಿ ಅವರ ಪತ್ನಿ ಪ್ರಿಯಾಂಕಾ ಮಿರಾಶಿ ನೀಡಿದ ದೂರಿನ ಆಧಾರದಲ್ಲಿ ರಾಮನಗರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಪ್ರಕಾಶ ಮಿರಾಶಿಯನ್ನು ಬಂಧಿಸಿದ್ದಾರೆ.