ಭಟ್ಕಳದ ಮಣಕುಳಿ ಬಳಿ ಗರ್ಭಿಣಿ ಸಂಚರಿಸುತ್ತದ್ದ ರಿಕ್ಷಾಗೆ ಕಾರು ಡಿಕ್ಕಿಯಾಗಿದ್ದು, ಗರ್ಭಿಣಿ ಜೊತೆ ಆರು ಜನರಿಗೆ ಗಾಯವಾಗಿದೆ. ಅಪಘಾತಕ್ಕೆ ಕಾರಣವಾದ ಕಾರಿನ ಜೊತೆ ಚಾಲಕನು ಪರಾರಿಯಾಗಿದ್ದು, ಶೋಧ ನಡೆಯುತ್ತಿದೆ.
ಫೆಬ್ರವರಿ 8ರಂದು ಭಟ್ಕಳ ರಾಘವೇಂದ್ರ ಮಠದ ಹತ್ತಿರ ರಾಷ್ಟ್ರೀಯ ಹೆದ್ದಾರಿಯಲ್ಲಿ ಈ ಅವಘಡ ನಡೆದಿದೆ. ಕಾರು ಓಡಿಸಿಕೊಂಡು ಬಂದ ಅಪರಿಚಿತ ಕುಂದಾಪುರ ಕಡೆಯಿಂದ ಭಟ್ಕಳ ಕಡೆಗೆ ಹೊರಟಿದ್ದು, ಮುಂದೆ ಸಂಚರಿಸುತ್ತಿದ್ದ ಆಟೋಗೆ ಕಾರು ಗುದ್ದಿದ್ದರಿಂದ ಅಪಘಾತ ನಡೆದಿದೆ. ರಿಕ್ಷಾ ಹಿಂದಿಕ್ಕುವ ಅವಸರದಲ್ಲಿ ಅಪಘಾತ ನಡೆದಿದ್ದು, ಪರಿಣಾಮ ರಿಕ್ಷಾ ರಸ್ತೆ ಮೇಲೆಯೇ ಪಲ್ಟಿಯಾಗಿದೆ.
ಈ ಅವಘಡದಲ್ಲಿ ರಿಕ್ಷಾ ಚಾಲಕ ನಾಗರಾಜ ಬಿಳಿಯಾ ದೇವಾಡಿಗರಿಗೆ ಭಾರೀ ಪ್ರಮಾನದಲ್ಲಿ ಗಾಯವಾಗಿದೆ. ಜೊತೆಗೆ ದೇವಿದಾಸ ಸುಬ್ರಾಯ ದೇವಾಡಿಗ ಅವರಿಗೂ ಅಲ್ಲಲ್ಲಿ ನೋವಾಗಿದೆ. ಲಕ್ಷ್ಮಿ ತಿಮ್ಮಪ್ಪ ಮೋಗೇರ, ಹೇಮಾವತಿ ದಿನೇಶ ಮೋಗೇರ, ಶ್ರುತಿ ರಾಮ ಮೊಗೇರ್ ಅವರಿಗೆ ಗಾಯಗಳಾಗಿವೆ. ಗರ್ಭಿಣಿ ರಂಜಿತಾ ಸಂತೋಷ ಮೊಗೇರ ಅವರ ಸೊಂಟ ಹಾಗೂ ಮೈಗೆ ನೋವಾಗಿದೆ. ಅವರೆಲ್ಲರೂ ಆಟೋದಲ್ಲಿ ಪ್ರಯಾಣಿಸುತ್ತಿದ್ದು, ಆಟೋ ಸಹ ಜಖಂ ಆಗಿದೆ.
ಕಾರಿನ ಚಾಲಕ ಅಪಘಾತದ ನಂತರ ಅಲ್ಲಿಂದ ಪರಾರಿಯಾಗಿದ್ದಾರೆ. ಈ ಹಿನ್ನಲೆ ಮುಂಡಳ್ಳಿಯ ಜೋಗಿಮನೆಯ ಮಹೇಶ ಮಾದೇವ ದೇವಾಡಿಗ ಪೊಲೀಸ್ ದೂರು ನೀಡಿದ್ದು, ಭಟ್ಕಳ ಶಹರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.