ಶಿರಸಿಯ ಶಿವಾನಿ ಹೊಟೇಲ್ ಬಳಿ ನಶೆಯ ಗುಂಗಿನಲ್ಲಿದ್ದ ನಾಲ್ವರನ್ನು ಪೊಲೀಸರು ವಿಚಾರಣೆಗೆ ಒಳಪಡಿಸಿದ್ದಾರೆ. ಆಗ, ಅವರೆಲ್ಲರೂ ಮಾದಕ ವ್ಯಸನ ಸೇವಿಸಿದ್ದು ದೃಢವಾಗಿದೆ.
ಶಿರಸಿ ಕಸ್ತೂರಿಬಾ ನಗರದ ಸಲಾಮತ್ ಗಲ್ಲಿಯಲ್ಲಿ ಕಾಂಕ್ರೆಟ್ ಕೆಲಸ ಮಾಡುವ ಮಹಮದ್ ಭಾಷಸಾಬ್ ಕೋಡಬಾಳ, ಅದೇ ಭಾಗದಲ್ಲಿ ಟೈಲ್ಸ ಕೆಲಸ ಮಾಡುವ ಇರ್ಫಾನ್ ಫಕ್ರುದ್ಧೀನ್ ಮುಲ್ಲಾ, ಉರ್ದು ಶಾಲೆ ಬಳಿಯ ಆಸಿಫ್ ಶೇಖ್ ಹಾಗೂ
ಆಸಿಪ್ ಮಹಮದ್ ರಫೀಕ್ ಚೌದರಿ ವಿರುದ್ಧ ಶಿರಸಿ ಮಾರುಕಟ್ಟೆ ಪೊಲೀಸ್ ಠಾಣೆ ಪಿಸೈ ಬಸವರಾಜ ಕನೆಶೆಟ್ಟಿ ಕಠಿಣ ಕ್ರಮ ಜರುಗಿಸಿದ್ದಾರೆ.
ಫೆಬ್ರವರಿ 10ರಂದು ಆ ನಾಲ್ವರು ಕೆ ಎಚ್ ಬಿ ಕಾಲೋನಿ ಬಳಿಯಿರುವ ಶಿವಾನಿ ಹೊಟೇಲ್ ಎದುರು ನಿಂತಿದ್ದರು. ಅವರು ಯಾರೂ ಮಾತನಾಡುವ ಸ್ಥಿತಿಯಲ್ಲಿರಲಿಲ್ಲ. ಅಮಲಿನಲ್ಲಿ ಅಲೆದಾಡುತ್ತಿದ್ದ ಅವರನ್ನು ಪೊಲೀಸರು ವಿಚಾರಣೆಗೆ ಒಳಪಡಿಸಿದರು. ನಂತರ ಅವರನ್ನು ಪಂಡಿತ್ ಸಾರ್ವಜನಿಕ ಆಸ್ಪತ್ರೆಗೆ ಕರೆದೊಯ್ದು ವೈದ್ಯಕೀಯ ತಪಾಸಣೆ ನಡೆಸಿದರು.
ಆಗ, ಅವರೆಲ್ಲರೂ ಗಾಂಜಾ ಪಾರ್ಟಿ ಮಾಡಿದ್ದು ಅರಿವಿಗೆ ಬಂದಿತು. ಗಾಂಜಾ ಸೇವಿಸಿದ ಬಗ್ಗೆ ವೈದ್ಯರು ವರದಿ ನೀಡಿದರು. ಆ ವರದಿ ಹಿನ್ನಲೆ ಪೊಲೀಸರು ನಾಲ್ವರ ವಿರುದ್ಧವೂ ಪ್ರಕರಣ ದಾಖಲಿಸಿದರು.