ಕಾಡಿನಿಂದ ನಾಡಿಗೆ ಬಂದಿದ್ದ ಕಡವೆ ಮುಂಡಗೋಡದಲ್ಲಿ ಕೊನೆಯುಸಿರೆಳೆದಿದೆ.
ಮುಂಡಗೋಡ ಸನವಳ್ಳಿ ಗ್ರಾಮಕ್ಕೆ ಗುರುವಾರ ಕಡವೆಯೊಂದು ಆಗಮಿಸಿತ್ತು. ಆ ವನ್ಯಜೀವಿ ಮೇಲೆ ನಾಯಿಗಳು ಆಕ್ರಮಣ ನಡೆಸಿದವು. ಅಲ್ಲಿದ್ದ ರೈತರು ನಾಯಿಗಳನ್ನು ಓಡಿಸುವ ಪ್ರಯತ್ನ ಮಾಡಿದರು. ಆದರೆ, ಅದು ಪ್ರಯೋಜನಕ್ಕೆ ಬರಲಿಲ್ಲ.
ನಾಯಿ ದಾಳಿಗೆ ಒಳಗಾಗಿದ್ದ ಕಾಡು ಪ್ರಾಣಿಯನ್ನು ಊರಿನವರು ರಕ್ಷಿಸುವ ಕೆಲಸ ಮಾಡಿದರು. ರೈತ ಮುಖಂಡರಾದ ರಾಜು ಗುಬ್ಬಕ್ಕನವರ್, ಧರ್ಮೊಜಿ ಅರಶಿಣಗೇರಿ, ಪ್ರಭು ಅರಶಿಣಗೇರಿ, ಪರಶುರಾಮ ಬಾಲಣ್ಣನವರ್, ರಾಮ ಪೂಜಾರ, ಪರಶುರಾಮ ಮಟ್ಟಿಮನಿ, ಫಕ್ಕೀರಪ್ಪ ಕಳಸಗೇರಿ, ಬೀಟ್ ಫಾರೆಸ್ಟರ ರಾಜು ಪರೀಟ್, ವಾಚಮನ್ ಕೃಷ್ಣ ದೊಡ್ಮನಿ, ನಿತಿನ ಯಳವಟ್ಟಿ ಸೇರಿ ವನ್ಯಜೀವಿ ರಕ್ಷಣೆಗೆ ಸಾಹಸ ಮಾಡಿದರು. ಆದರೆ, ಅದಾಗಲೇ ಅಸ್ವಸ್ಥಗೊಂಡಿದ್ದ ಕಡವೆ ಅಲ್ಲಿಯೇ ಕೊನೆಯುಸಿರೆಳೆಯಿತು.
ಈ ಬಗ್ಗೆ ರೈತರು ಅರಣ್ಯಾಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ. ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ.