ಲೋಕಧ್ವನಿ ಪತ್ರಿಕೆ ನೀಡುವ `ಹೆಮ್ಮೆಯ ಸಾಧಕ’ ಪ್ರಶಸ್ತಿ ಸ್ವೀಕರಿಸಿರುವ ಕಾರವಾರದ ಶಿಕ್ಷಕ ಗಣೇಶ ಬೀಷ್ಠಣ್ಣನವರ್ ಅವರಿಗೆ ಹಾವೇರಿ ಜಿಲ್ಲೆಯಲ್ಲಿಯೂ ಸನ್ಮಾನ ದೊರೆತಿದೆ. ಮುಖ್ಯಮಂತ್ರಿಗಳಿAದ ಪ್ರಶಸ್ತಿ ಸ್ವೀಕರಿಸಿದ ಗಣೇಶ ಬೀಷ್ಠಣ್ಣನವರ್ ಅವರ ಜೊತೆ ಅವರ ಪತ್ನಿ, ಕ್ರಿಯಾಶೀಲ ಶಿಕ್ಷಕಿ ಜಯಶೀಲ ಬೀಷ್ಠಣ್ಣನವರ್ ಅವರಿಗೂ ಬ್ಯಾಡಗಿಯ ಜನ ಗೌರವಿಸಿದ್ದಾರೆ.
ಅಲ್ಲಿನ ಗುಡ್ಡದಮಲ್ಲಾಪುರ ಶಾಲೆಯಲ್ಲಿ ಈ ಸನ್ಮಾನ ಕಾರ್ಯಕ್ರಮ ನಡೆದಿದೆ. ಶಿಕ್ಷಣ ಇಲಾಖೆ ಹಾಗೂ ಶಾಲಾ ಆಡಳಿತ ಮಂಡಳಿ ಜೊತೆ ಹಳೆ ವಿದ್ಯಾರ್ಥಿಗಳ ಸಂಘದವರು ಸಾಧಕ ಶಿಕ್ಷಕ ದಂಪತಿಯನ್ನು ಗೌರವಿಸಿದ್ದಾರೆ. `ಪ್ರತಿ ಮನೆಯಲ್ಲಿಯೂ ನಿತ್ಯ ಕನಿಷ್ಟ ಎರಡು ತಾಸು ಟಿವಿ, ಮೊಬೈಲ್ ಬಂದ್ ಮಾಡಿ ಪುಸ್ತಕದ ಕಡೆ ಗಮನಕೊಡಬೇಕು. ಆ ಮೂಲಕ ಪ್ರತಿಯೊಬ್ಬ ಪಾಲಕರು ಮಕ್ಕಳ ಜ್ಞಾನಾಭಿವೃದ್ಧಿಗೆ ಸಹಕರಿಸಬೇಕು’ ಎಂದು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಬ್ಯಾಡಗಿ ಕ್ಷೇತ್ರ ಶಿಕ್ಷಣಾಧಿಕಾರಿ ಎಸ್ ಜಿ ಕೋಟಿ ಅವರು ಹೇಳಿದ್ದಾರೆ. ಸನ್ಮಾನ ಸ್ವೀಕರಿಸಿದ ಗಣೇಶ ಬೀಷ್ಠಣ್ಣನವರ್ ಅವರು `ಶ್ರೀ ಶ್ರೀ ಮೂಕಪ್ಪಜ್ಜನ ಆಶಿರ್ವಾದವೇ ಎಲ್ಲದಕ್ಕೂ ಪ್ರೇರಣೆ. ಊರಿನವರ ಪ್ರೀತಿ ತನ್ನುö್ನ ಪುಳಕಿತಗೊಳಿಸಿದೆ’ ಎಂದಿದ್ದಾರೆ.
ವೇದಿಕೆ ಸಾನಿಧ್ಯವಹಿಸಿದ್ದ ಹುಚ್ಚೇಶ್ವರ ಸಂಸ್ಥಾನ ದಾಸೋಹಮಠದ ಧರ್ಮಾಧಿಕಾರಿ ಹುಚ್ಚಯ್ಯಸ್ವಾಮಿ ಮೃತ್ಯುಂಜಯಸ್ವಾಮಿ ದಾಸೋಹಮಠವರು ಆಶೀರ್ವಚನ ನೀಡಿದರು. ಮುಖ್ಯಾಧ್ಯಪಕರಾದ ಕೆ ಎಲ್.ಬಾಸೂರ, ಪ್ರಮುಖರಾದ ಕುಬೇರಪ್ಪ ನೆಲ್ಲಿಕೊಪ್ಪದ, ಶಾಂತಪ್ಪ ದೊಡ್ಡಮನಿ, ಹುಚ್ಚಯ್ಯಸ್ವಾಮಿ ಚೌಕಿಮಠ, ಪ್ರಭಣ್ಣ ದೇಸಾಯಿ, ಪರಮೇಶಣ್ಣ ಸೊಡ್ರಿ, ನಾಗಪ್ಪ ಬಿಷ್ಟಣ್ಣನವರ, ಇಸ್ಮಾಯಿಲ್ ಸೂಡಂಬಿ. ವಿರೇಶ ಮೂಡಿ ಇತರರು ವೇದಿಕೆಯಲ್ಲಿದ್ದರು. ಎಲ್ ಜಿ ಮಾಳ್ವದೆಯವರ, ರುದ್ರೇಶ, ಕವಿತಾ ತಳವಾರ ವಿವಿಧ ಜವಾಬ್ದಾರಿ ನಿಭಾಯಿಸಿದರು.