ಮದುವೆಗೆ ಒಪ್ಪದ ರಂಜಿತಾ: ಚಾಕು ಚುಚ್ಚಿದ ರಫೀಕ!
January 3, 2026
ಸಂತೆಯೂ ಇಲ್ಲ.. ಸಾಮಗ್ರಿಯೂ ಸಿಗಲ್ಲ: ಭಾನುವಾರ ಯಲ್ಲಾಪುರ ಬಂದ್!
January 3, 2026
ರಂಜಿತಾ ಕೊಂದ ರಫೀಕ್ ಇನ್ನಿಲ್ಲ!
January 4, 2026
ಶ್ವಾನ ಪ್ರೇಮಿಗೆ ಕಪಾಳ ಮೋಕ್ಷ!
May 12, 2026
ಆತ ಅಧಿಕಾರಿಯೇ ಅಲ್ಲ!
May 11, 2026
ಪರಿಸರ ವಿರೋಧಿ, ಅವೈಜ್ಞಾನಿಕ ಉದ್ದೇಶಿತ ಶರಾವತಿ ಪಂಪ್ಡ ಸ್ಟೋರೇಜ ಭೂಗತ ವಿದ್ಯುತ ಯೋಜನೆಯ ವಿರುದ್ಧ ವಿವಿಧ ಮಠಾಧೀಶರ ನೇತ್ರತ್ವದಲ್ಲಿ ಹೋರಾಟ ನಡೆಸಲು `ಶರಾವತಿ ಉಳಿಸಿ’ ಹೋರಾಟ ಸಮಿತಿ ನಿರ್ಧರಿಸಿದೆ. ಮಾರ್ಚ 10ರಂದು ಹೊನ್ನಾವರದಲ್ಲಿ ದೊಡ್ಡ ಮಟ್ಟದಲ್ಲಿ ಜನ ಸಮಾವೇಶ ಆಯೋಜಿಸುವ ಸಿದ್ಧತೆ ನಡೆದಿದೆ.
ಜೆ ಟಿ ಪೈ ಅವರ ಅಧ್ಯಕ್ಷತೆಯಲ್ಲಿ ನಡೆದ ಸರ್ವ ಸಂಘಟನೆಗಳ ಪ್ರಮುಖರು ಸಭೆ ನಡೆಸಿದ್ದು, ಈ ಸಭೆಯಲ್ಲಿ ಹೋರಾಟದ ಬಗ್ಗೆ ನಿರ್ಧರಿಸಲಾಗಿದೆ. ರಾಮಚಂದ್ರಾಪುರ ಮಠಧ ರಾಘವೇಶ್ವರ ಭಾರತಿ ಸ್ವಾಮೀಜಿ, ಬಂಗಾರಮಕ್ಕಿಯ ಧರ್ಮಾಧಿಕಾರಿ ಮಾರೂತಿ ಗುರೂಜಿ ಅವರ ಜೊತೆ ಒಕ್ಕಲಿಗ, ದೈವಜ್ಞ, ನಾಮಧಾರಿ ಸಮುದಾಯಗಳ ಮಠಾಧೀಶರನ್ನು ಈ ಸಮಾವೇಶಕ್ಕೆ ಆಹ್ವಾನಿಸಲು ಸಭೆಯಲ್ಲಿ ನಿರ್ಧರಿಸಲಾಗಿದೆ.
ಹೋರಾಟದ ರೂಪುರೇಷೆಗಳನ್ನು ಚರ್ಚಿಸಲು ಫೆಬ್ರವರಿ 16ರ ಮಧ್ಯಾಹ್ನ ವಿವಿಧ ಸಮುದಾಯ ಪ್ರಮುಖರ ಹಾಗೂ ಸಂಘ-ಸAಸ್ಥೆಗಳ ಸಭೆ ನಡೆಯಲಿದೆ. ಆ ದಿನ ಸಂಜೆ 4ಘಂಟೆಗೆ ಹೊನ್ನಾವರ ಮೂಡಗಣಪತಿ ಸಭಾಂಗಣದಲ್ಲಿ ಆಸಕ್ತರು ಭಾಗವಹಿಸಲು ಹೋರಾಟಗಾರರು ಮನವಿ ಮಾಡಿದ್ದಾರೆ. ಪರಿಸರ ಆಸಕ್ತರ ಹೋರಾಟ ಪ್ರಮುಖರ ಇನ್ನೊಂದು ಸುತ್ತಿನ ಸಭೆಯಲ್ಲಿ ಸಮಾವೇಶದ ಪೂರ್ವಭಾವಿ ಸಿದ್ಧತೆಗಳ ಕುರಿತು ಚರ್ಚಿಸಲಾಗುತ್ತದೆ. ಸದ್ಯ ನಡೆದ ಸಭೆಯಲ್ಲಿ ಶ್ರೀಕುಮಾರ ಸಾರಿಗೆ ಸಂಸ್ಥೆಯ ಪುಟ್ಟು ಹೆಗಡೆ, ಹೋರಾಟ ಸಮಿತಿಯ ಚಂದ್ರಕಾAತ ಕೊಚರೇಕರ, ಮಂಜುನಾಥ ಎಂ ನಾಯ್ಕ ಗೇರುಸೊಪ್ಪ, ಜಿ ಜಿ ಶಂಕರ, ಯೋಗೇಶ ರಾಯ್ಕರ, ಕೇಶವ ನಾಯ್ಕ ಬಳ್ಕೂರ, ವಕೀಲ ವಿಕ್ರಮ ನಾಯ್ಕ, ಹೊನ್ನಾವರ ಉಳಿಸಿ ಸಂಘಟನೆಯ ಜಿ ಎನ್ ಗೌಡ, ಎಂ ಎಸ್ ಹೆಗಡೆ, ಪ್ರಭು ಪಟಗಾರ, ಶ್ರೀಧರ ಶೆಟ್ಟಿ ಜಂಬೆಬೆಟ್ಟ, ಶ್ರೀಕಲಾ ಶಾಸ್ತ್ರೀ, ಗಣೇಶ ಜಿ ನಾಯ್ಕ ಉಪ್ಪೋಣಿ ಹೋರಾಟದ ಬಗ್ಗೆ ಚರ್ಚಿಸಿದ್ದಾರೆ.
You cannot copy content of this page