ಮದುವೆಗೆ ಒಪ್ಪದ ರಂಜಿತಾ: ಚಾಕು ಚುಚ್ಚಿದ ರಫೀಕ!
January 3, 2026
ಸಂತೆಯೂ ಇಲ್ಲ.. ಸಾಮಗ್ರಿಯೂ ಸಿಗಲ್ಲ: ಭಾನುವಾರ ಯಲ್ಲಾಪುರ ಬಂದ್!
January 3, 2026
ರಂಜಿತಾ ಕೊಂದ ರಫೀಕ್ ಇನ್ನಿಲ್ಲ!
January 4, 2026
ಶ್ವಾನ ಪ್ರೇಮಿಗೆ ಕಪಾಳ ಮೋಕ್ಷ!
May 12, 2026
ಆತ ಅಧಿಕಾರಿಯೇ ಅಲ್ಲ!
May 11, 2026
ಉತ್ತರ ಕನ್ನಡ ಜಿಲ್ಲೆಯಲ್ಲಿ ಮುಂದಿನ ಮೂರು ದಿನಗಳ ಕಾಲ ವಾತಾವರಣದಲ್ಲಿ ಬದಲಾವಣೆ ಆಗುವ ಸಾಧ್ಯತೆ ಹೆಚ್ಚಿದೆ.
ಕಳೆದ ಎರಡು ದಿನಗಳಿಂದ ಹವಾಮಾನದಲ್ಲಿ ಅಲ್ಪ-ಸ್ವಲ್ಪ ಬದಲಾವಣೆ ಆಗುತ್ತಿದೆ. ಮುಂದಿನ ಮೂರು ದಿನಗಳ ಕಾಲ ಇನ್ನಷ್ಟು ವ್ಯಾಪಕ ಪ್ರಮಾಣದಲ್ಲಿ ಬದಲಾವಣೆಯ ಲಕ್ಷಣಗಳಿದೆ. ಅದರಲ್ಲಿಯೂ ಉತ್ತರ ಕನ್ನಡ ಜಿಲ್ಲೆಯ ಕರಾವಳಿ ಭಾಗದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಬಿಸಿಲು ಕಾಣಿಸಿಕೊಂಡಿದ್ದು, ಅದರ ಪ್ರಭಾವ ಮಲೆನಾಡು ಭಾಗಕ್ಕೂ ಬೀಸಲಿದೆ.
ಜಿಲ್ಲೆಯಲ್ಲಿ ಶಾಖದ ಅಲೆ ಏಳುವ ಲಕ್ಷಣಗಳು ಗೋಚರಿಸಿವೆ. ಈ ಬಗ್ಗೆ ವಿಜ್ಞಾನಿಗಳು ಮಾಹಿತಿ ರವಾನಿಸಿದ್ದು, ಮುನ್ನಚ್ಚರಿಕೆವಹಿಸುವಂತೆ ಸೂಚನೆ ನೀಡಿದ್ದಾರೆ. ಅದರಲ್ಲಿಯೂ ಫೆಬ್ರವರಿ 14 ಹಾಗೂ 15ರಂದು ಮನೆಯಿಂದ ಹೊರಬರದೇ ಇರುವುದು ಒಳಿತು ಎಂದು ತಜ್ಞರು ಹೇಳಿದ್ದಾರೆ. ಉತ್ತರ ಕನ್ನಡ ಜಿಲ್ಲೆಯಲ್ಲಿ ಬಿಸಿ ಹಾಗೂ ಆರ್ದ್ರ ಪರಿಸ್ಥಿತಿ ಹೆಚ್ಚಾಗಿರುವ ಸಾಧ್ಯತೆಯಿರುವ ಹಿನ್ನಲೆ ಎಲ್ಲೋ ಅಲರ್ಟ ಘೋಷಿಸಲಾಗಿದೆ.
You cannot copy content of this page