ಕಾರವಾರ ನಗರ ಪೊಲೀಸ್ ಠಾಣೆಯ ಸಿಬ್ಬಂದಿ ಸಂಜಯ ನಾಯ್ಕ ಅವರು ಮನೆ ಮಹಡಿ ಮೇಲಿದ್ದ ಬಿದ್ದು ಸಾವನಪ್ಪಿದ್ದಾರೆ.
ಕಾರವಾರದ ಸದಾಶಿವಗಡದ ಮಾನವಾಡದಲ್ಲಿ ಸಂಜಯ ದಿಗಂಬರ್ ನಾಯ್ಕ (52) ಅವರು ವಾಸವಾಗಿದ್ದರು. ಕಾರವಾರ ನಗರ ಪೊಲೀಸ್ ಠಾಣೆಯಲ್ಲಿ ಅವರು ಕರ್ತವ್ಯ ನಿಭಾಯಿಸುತ್ತಿದ್ದರು. ಫೆಬ್ರವರಿ 11ರಂದು ಮಧ್ಯಾಹ್ನ ಊಟಕ್ಕೆ ಮನೆಗೆ ಹೋಗಿದ್ದ ಅವರು ಊಟದ ನಂತರ ಮಹಡಿ ಹತ್ತಿದ್ದರು. ಮಹಡಿ ಮೇಲಿನ ಗ್ಯಾಲರಿ ಬಳಿಯಿದ್ದ ಮೆಟ್ಟಿಲುಗಳ ಮೂಲಕ ಅಂಗಳಕ್ಕೆ ಇಳಿಯುವಾಗ ಆಯತಪ್ಪಿ ಬಿದ್ದರು.
ಮೆಟ್ಟಿಲ ಮೇಲೆ ಮುಗುಚಿ ಬಿದ್ದ ಪರಿಣಾಮ ಸಂಜಯ ನಾಯ್ಕ ಅವರ ಪ್ರಜ್ಞೆ ತಪ್ಪಿತು. ಅವರು ಮಾತನಾಡುವ ಸ್ಥಿತಿಯಲ್ಲಿಯೂ ಇರಲಿಲ್ಲ. ಹೀಗಾಗಿ ಕುಟುಂಬದವರು ಸಂಜಯ ನಾಯ್ಕ ಅವರನ್ನು ಕಾರವಾರ ಜಿಲ್ಲಾಸ್ಪತ್ರೆಗೆ ದಾಖಲಿಸಿದರು. ಅಲ್ಲಿ ಅವರಿಗೆ ನಿರಂತರ ಚಿಕಿತ್ಸೆ ನೀಡಲಾಯಿತು. ಆದರೆ, ಅದರಿಂದ ಯಾವ ಪ್ರಯೋಜನವೂ ಆಗಲಿಲ್ಲ. ಫೆಬ್ರವರಿ 13ರಂದು ಸಂಜಯ ನಾಯ್ಕ ಅವರು ಕೊನೆಯುಸಿರೆಳೆದರು. ಪತಿಯ ಸಾವಿನ ಬಗ್ಗೆ ಸುಲಕ್ಷಾ ನಾಯ್ಕ ಅವರು ಚಿತ್ತಾಕುಲ ಪೊಲೀಸರಿಗೆ ಹೇಳಿದ್ದು, ಪೊಲೀಸರು ಪ್ರಕರಣ ದಾಖಲಿಸಿದರು.