ಯಲ್ಲಾಪುರ ವಿಧಾನಸಭಾ ಕ್ಷೇತ್ರದ ಶಾಸಕ ಶಿವರಾಮ ಹೆಬ್ಬಾರ್ ಅವರು ಕೆಡಿಸಿಸಿ ಬ್ಯಾಂಕಿನ ಅಧ್ಯಕ್ಷರಾಗಿ ಎರಡನೇ ಬಾರಿ ಆಯ್ಕೆ ಆಗಿದ್ದಾರೆ. ಬ್ಯಾಂಕಿನ ನಿರ್ದೇಶಕರ ಸಮ್ಮತಿಯಿಂದ ಅವರು ಅವಿರೋಧವಾಗಿ ಅಧ್ಯಕ್ಷ ಸ್ಥಾನ ಅಲಂಕರಿಸಿದ್ದಾರೆ.
ಕೆಡಿಸಿಸಿ ಬ್ಯಾಂಕಿನ ಉಪಾಧ್ಯಕ್ಷರಾಗಿ ಜೊಯಿಡಾದ ಕೃಷ್ಣ ದೇಸಾಯಿ ಅವರು ಆಯ್ಕೆಯಾಗಿದ್ದಾರೆ. ಅಧ್ಯಕ್ಷ ಸ್ಥಾನಕ್ಕೆ ಶಿವರಾಮ ಹೆಬ್ಬಾರ್ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ಕೃಷ್ಣ ದೇಸಾಯಿ ಅವರು ಮಾತ್ರ ಉಮೇದುದಾರಿಕೆ ಸಲ್ಲಿಸಿದ್ದರು. ಬೇರೆ ಯಾವುದೇ ಆಕಾಂಕ್ಷಿಗಳು ಇಲ್ಲದ ಕಾರಣ ಅವರಿಬ್ಬರೂ ಅವಿರೋಧವಾಗಿ ಆಯ್ಕೆ ಆದರು. ಸೋಮವಾರ ನಡೆದ ಚುನಾವಣಾ ಪ್ರಕ್ರಿಯೆಯಲ್ಲಿ ಅವರಿಬ್ಬರ ಆಯ್ಕೆಯನ್ನು ಚುನಾವಣಾಧಿಕಾರಿಗಳು ಘೋಷಿಸಿದ್ದಾರೆ.
ಸಹಾಯಕ ಆಯುಕ್ತ ಚಂದ್ರಶೇಖರ್ ಜಿ ಆರ್ ಅವರು ಚುನಾವಣಾಧಿಕಾರಿಯಾಗಿ ಕೆಲಸ ನಿಭಾಯಿಸಿದರು. ಶಿವರಾಮ ಹೆಬ್ಬಾರ್ ಅವರು ಮೊದಲ ಅಧಿಕಾರ ಅವಧಿಯಲ್ಲಿ ಸಹಕಾರಿ ಸಂಘಗಳ ಬಗ್ಗೆ ಮುತುವರ್ಜಿವಹಿಸಿದ್ದರು. ಹೀಗಾಗಿ ಎರಡನೇ ಅವಧಿಯಲ್ಲಿಯೂ ಜನ ಇನ್ನೂ ಹೆಚ್ಚಿನ ನಿರೀಕ್ಷೆಯಲ್ಲಿದ್ದಾರೆ.