ದೇಶಿಯ ಹಸುಗಳ ಬಗ್ಗೆ ಅಪಾರ ಕಾಳಜಿಹೊಂದಿದ್ದ ಹೊನ್ನಾವರದ ವಕೀಲ ಶ್ರೀಧರ ಹೆಗಡೆ ಅವರು ಮಲೆನಾಡು ಗಿಡ್ಡ ತಳಿಯ ಆಕಳು ಸಾಕಿದ್ದು, ಆ ಆಕಳನ್ನು ಕಳ್ಳರು ಕದ್ದಿದ್ದಾರೆ.
ಹೊನ್ನಾವರದ ವಂದೂರು ಬಳಿಯ ದುಗ್ಗೂರಿನಲ್ಲಿ ಶ್ರೀಧರ ಗೋವಿಂದ ಹೆಗಡೆ ಅವರು ವಾಸವಾಗಿದ್ದಾರೆ. ವಕೀಲ ವೃತ್ತಿಯ ಜೊತೆ ಅವರು ಕೃಷಿ ಕಾಯಕದಲ್ಲಿಯೂ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಸಾಕು ಪ್ರಾಣಿಗಳ ಬಗ್ಗೆ ಶ್ರೀಧರ ಹೆಗಡೆ ಅವರಿಗೆ ಎಲ್ಲಿಲ್ಲದ ಅಕ್ಕರೆ. ಅದರಲ್ಲಿಯೂ ದೇಶಿಯ ಹಸುಗಳು ಎಂದರೆ ಅವರಿಗೆ ಅಚ್ಚುಮೆಚ್ಚು. ಹೀಗಾಗಿ ಅವರು ತಮ್ಮ ಕೊಟ್ಟಿಗೆಯಲ್ಲಿ ಮಲೆನಾಡು ಗಿಡ್ಡ ತಳಿಯ ಹಸು ಸಾಕಿದ್ದರು.
ವಕೀಲರ ಒಡೆತನದಲ್ಲಿರುವ ಮಲೆನಾಡು ಗಿಡ್ಡ ಹಸುವಿನ ಮೇಲೆ ದುಷ್ಟರು ಕಣ್ಣು ಹಾಕಿದ್ದು, ಹಗಲಿನ ಅವಧಿಯಲ್ಲಿಯೇ ಆ ಹಸುವನ್ನು ಕಣ್ಮರೆ ಮಾಡಿದರು. ಫೆಬ್ರವರಿ 11ರ ಬೆಳಗ್ಗೆ 8 ಗಂಟೆಯವರೆಗೆ ಕೊಟ್ಟಿಗೆಯಲ್ಲಿದ್ದ ಹಸು ಸಂಜೆ 5 ಗಂಟೆಯ ವೇಳೆಗೆ ಅಲ್ಲಿರಲಿಲ್ಲ. ಹಸು ಮೇವಿಗೆ ಹೋಗಿರಬಹುದು ಎಂದು ಅಂದಾಜಿಸಿ ಎಲ್ಲಾ ಕಡೆ ಹುಡುಕಾಟ ನಡೆಸಿದರೂ ಆ ಬೆಟ್ಟದಲ್ಲಿ ಹಸುವಿನ ಸಗಣಿಯೂ ಕಾಣಲಿಲ್ಲ.
ಕಳ್ಳರ ಕಾಟಕ್ಕೆ ಬೇಸತ್ತ ವಕೀಲ ಶ್ರೀಧರ ಹೆಗಡೆ ಅವರು ಹೊನ್ನಾವರ ಪೊಲೀಸ್ ಠಾಣೆಗೆ ಆಗಮಿಸಿದರು. ಮೂರುವರೆ ವರ್ಷದ ಮಲೆನಾಡು ಗಿಡ್ಡ ಹಸು ಕಾಣೆಯಾದ ಬಗ್ಗೆ ಅಲ್ಲಿ ವರದಿ ಒಪ್ಪಿಸಿದರು. 15 ಸಾವಿರ ರೂ ಮೌಲ್ಯದ ಹಸುವನ್ನು ಹುಡುಕಿಕೊಡಬೇಕು. ಆ ಕಳ್ಳರಿಗೆ ಕಠಿಣ ಶಿಕ್ಷೆ ವಿಧಿಸಬೇಕು ಎಂದು ಲಿಖಿತ ದೂರು ಸಲ್ಲಿಸಿದ್ದು, ಪೊಲೀಸರು ಪ್ರಕರಣ ದಾಖಲಿಸಿದರು.
`ಕಳ್ಳತನ ತಡೆಗೆ ಸಿಸಿ ಕ್ಯಾಮರಾ ಸಹಕಾರಿ’