ಶಿರಸಿ ಜಾತ್ರೆಗೆ ಬಂದಿದ್ದ ಸಿದ್ದಾಪುರ ಕಾನಸೂರಿನ ಗುರುದತ್ತ ಶೇಟ್ ಅವರ ಬೈಕಿಗೆ ಅದೇ ಊರಿನ ನಿವೃತ್ತ ನೌಕರ ದಿನೇಶ ಭಟ್ಟ ಅವರು ಬೈಕ್ ಗುದ್ದಿದ್ದಾರೆ. ಪರಿಣಾಮ ಎರಡು ಬೈಕಿನಲ್ಲಿದ್ದ ಸವಾರರು ಗಾಯಗೊಂಡಿದ್ದಾರೆ.
ಸಿದ್ದಾಪುರ ಕಾನಸೂರಿನ ಗುರುದತ್ತ ಗಂಗಾಧರ ಶೇಟ್ (66) ಅವರು ಮಾರ್ಚ 3ರಂದು ಶಿರಸಿಯ ಮಾರಿಕಾಂಬಾ ದೇವಿ ಜಾತ್ರೆಗೆ ಬಂದಿದ್ದರು. ಜಾತ್ರೆ ಮುಗಿಸಿದ ಅವರು ತಮ್ಮ ಸ್ನೇಹಿತರಾದ ಕಾನಸೂರಿನ ನಿವೃತ್ತ ನಿವೃತ್ತ ಬ್ಯಾಂಕ್ ನೌಕರ ಸುಬ್ರಾಯ ವಾಮನ ಶೇಟ್ ಅವರ ಜೊತೆ ಮನೆಗೆ ಮರಳುತ್ತಿದ್ದರು. ಆ ದಿನ ರಾತ್ರಿ 10.30ಕ್ಕೆ ಅವರು ಯಡಳ್ಳಿ ಬಳಿ ತಲುಪಿದ್ದು, ಹಿಂದಿನಿAದ ವೇಗವಾಗಿ ಬೈಕ್ ಓಡಿಸಿಕೊಂಡು ಬಂದ ದಿನೇಶ ಗಣಪತಿ ಭಟ್ಟ ಅವರು ಗುರುದತ್ತ ಶೇಟ್ ಅವರ ಬೈಕಿಗೆ ಡಿಕ್ಕಿ ಹೊಡೆದರು.
ಆ ಡಿಕ್ಕಿ ರಭಸಕ್ಕೆ ಎರಡೂ ಬೈಕಿನಲ್ಲಿದ್ದವರು ನೆಲಕ್ಕೆ ಬಿದ್ದರು. ಎರಡು ಬೈಕು ಜಖಂ ಆಗಿದ್ದು, ಎಲ್ಲರೂ ಗಾಯಗೊಂಡರು. ಆ ಪೈಕಿ ದಿನೇಶ ಭಟ್ಟ ಅವರು ಗಂಭೀರ ಪ್ರಮಾಣದಲ್ಲಿ ನೋವು ಅನುಭವಿಸಿದರು. ಅವರ ತಲೆಗೂ ಗಾಯವಾಗಿದ್ದು, ಆಸ್ಪತ್ರೆ ಸೇರಿದರು. ಗುರುದತ್ತ ಶೇಟ್ ಅವರ ಬೈಕಿನಲ್ಲಿದ್ದ ಸುಬ್ರಾಯ ಶೇಟ್ ಅವರ ತಲೆಗೂ ಭಾರೀ ಪ್ರಮಾಣದಲ್ಲಿ ಪೆಟ್ಟಾಯಿತು. ಈ ಎಲ್ಲಾ ವಿದ್ಯಮನಾಗಲ ಬಗ್ಗೆ ಗುರುದತ್ತ ಶೇಟ್ ಅವರು ಪೊಲೀಸರಿಗೆ ಮಾಹಿತಿ ನೀಡಿದರು. ಶಿರಸಿ ಸಂಚಾರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿದರು.