ಕುಮಟಾದ ನಾಡುಮಾಸ್ಕೇರಿ ಸುತ್ತಲಿನ ಸರ್ಕಾರಿ ಜಾಗದಲ್ಲಿದ್ದ ರೆಸಾರ್ಟುಗಳನ್ನು ಅಧಿಕಾರಿಗಳು ಬಂದ್ ಮಾಡಿಸಿದ್ದು, ಅವರು ಇದೀಗ ಮತ್ತೆ ಕಾರ್ಯಾಚರಣೆ ಶುರು ಮಾಡಿವೆ. ದುಬ್ಬಿನಸಶಿ ಭಾಗದಲ್ಲಿ ರಾತ್ರಿ ವೇಳೆ ರೆಸಾರ್ಟುಗಳು ದೀಪಾಲಂಕಾರದಿoದ ಕಂಗೊಳಿಸುತ್ತಿವೆ.
ಕಳೆದ ವಾರ ಅಕ್ರಮ ರೆಸಾರ್ಟು, ಹೊಟೇಲುಗಳನ್ನು ಅಧಿಕಾರಿಗಳು ತೆರವು ಮಾಡುವಂತೆ ಸೂಚಿಸಿದ್ದರು. ಇದಕ್ಕೆ ವಿರೋಧವ್ಯಕ್ತಪಡಿಸಿ ಸಾಕಷ್ಟು ಹೋರಾಟ ನಡೆದರೂ ಅದು ಪ್ರಯೋಜನಕ್ಕೆ ಬಂದಿರಲಿಲ್ಲ. ಕೊನೆಗೆ ಕೆಲವರು ಸ್ವಯಂ ಪ್ರೇರಣೆಯಿಂದ ಕಟ್ಟಡಗಳನ್ನು ತೆರವು ಮಾಡಿದ್ದರು. ಇನ್ನೂ ಕೆಲವು ಹಾಗೇ ಇದ್ದು, ಅವರು ಇದೀಗ ಮೊದಲಿನಂತೆ ತಮ್ಮ ಕಾರ್ಯ ಚಟುವಟಿಕೆ ಶುರು ಮಾಡಿವೆ.
ಕೆಲ ರೆಸಾರ್ಟ ಮಾಲಕರು ನ್ಯಾಯಾಲಯದ ಮೊರೆ ಹೋಗಿದ್ದಾರೆ. ಇನ್ನೂ ಕೆಲ ಕಟ್ಟಡಗಳಿಗೆ ಅಧಿಕಾರಿಗಲು ಬೀಗ ಹಾಕಿದ್ದಾರೆ. ಅಲ್ಲಿ `ಪ್ರವೇಶ ನಿಷೇಧ’ ಎಂಬ ಫಲಕವನ್ನು ಅಳವಡಿಸಿದ್ದಾರೆ. ಅಲ್ಲಲ್ಲಿ ಕಟ್ಟಡಗಳಿಗೆ ವಿದ್ಯುತ್ ಸಂಪರ್ಕವನ್ನು ಕಡಿತ ಮಾಡಲಾಗಿದ್ದು, ಸದ್ಯ 32 ರೆಸಾರ್ಟಗಳಿಗೆ ವಿದ್ಯುತ್ ಸಂಪರ್ಕ ಮತ್ತೆ ಜೋಡಿಸಲಾಗಿದೆ.