ಮುಂಡಗೋಡದ ಇಂದೂರಿನ ಮಸ್ತಾಕ ಮಕ್ಬುಲಸಾಬ್ ಹುಲಗೂರ ಅವರ ಮನೆ ಮೇಲೆ ಅದೇ ಊರಿನ ದಾವಲಸಾಬ್ ಹಸನಸಾಬ ಕುನ್ನೂರ ಅವರು ಕಲ್ಲು ತೂರಾಟ ಮಾಡಿದ್ದಾರೆ. ಇದನ್ನು ಪ್ರಶ್ನಿಸಿದ ಕಾರಣ ಮಸ್ತಾಕ ಮಕ್ಬುಲಸಾಬ್ ಹುಲಗೂರ ಅವರನ್ನು ಬಗ್ಗಿಸಿ ಬೆನ್ನ ಮೇಲೆ ಹೊಡೆದಿದ್ದಾರೆ.
ಇಂದೂರಿನ ಮಸ್ತಾಕ ಮಕ್ಬುಲಸಾಬ್ ಹುಲಗೂರ ಅವರು ಕೃಷಿ ಕೆಲಸ ಮಾಡಿಕೊಂಡು ಜೀವನ ನಡೆಸುತ್ತಿದ್ದಾರೆ. ಅವರ ಪಕ್ಕದ ಮನೆಯಲ್ಲಿ ದಾವಲಸಾಬ್ ಹಸನಸಾಬ ಕುನ್ನೂರ ಅವರು ವಾಸವಗಿದ್ದು, ಅವರು ಗೌಂಡಿಯಾಗಿ ದುಡಿಯುತ್ತಿದ್ದಾರೆ. ಮಾರ್ಚ 3ರ ರಾತ್ರಿ 10.30ಕ್ಕೆ ದಾವಲಸಾಬ್ ಹಸನಸಾಬ ಕುನ್ನೂರ ಅವರು ಮಸ್ತಾಕ ಮಕ್ಬುಲಸಾಬ್ ಹುಲಗೂರ ಅವರ ಮನೆ ಮೇಲೆ ಕಲ್ಲು ಎಸೆದಿದ್ದಾರೆ. ಮನೆಯಿಂದ ಹೊರ ಬಂದ ಮಸ್ತಾಕ ಮಕ್ಬುಲಸಾಬ್ ಹುಲಗೂರ ಅವರು ಇದನ್ನು ಪ್ರಶ್ನಿಸಿದ್ದು, `ನಿನ್ನ ಮನೆಯ ಗೋಡೆ ನನ್ನ ಜಾಗದಲ್ಲಿದೆ’ ಎಂದು ದಾವಲಸಾಬ್ ಹಸನಸಾಬ ಕುನ್ನೂರ ಅವರು ಉತ್ತರಿಸಿದ್ದಾರೆ.
ಜೊತೆಗೆ ದಾವಲಸಾಬ್ ಹಸನಸಾಬ ಕುನ್ನೂರ ಅವರು ಕೆಟ್ಟದಾಗಿ ಬೈಗುಳ ಶುರು ಮಾಡಿದ್ದು, ಮಸ್ತಾಕ ಮಕ್ಬುಲಸಾಬ್ ಹುಲಗೂರ ಅವರನ್ನು ಅಲ್ಲಿಯೇ ಅಡ್ಡಗಟ್ಟಿ ನೆಲಕ್ಕೆ ದೂಡಿದ್ದಾರೆ. ಮೇಲೆಳಲು ಪ್ರಯತ್ನಿಸಿದ ಮಸ್ತಾಕ ಮಕ್ಬುಲಸಾಬ್ ಹುಲಗೂರ ಅವರನ್ನು ಬಗ್ಗಿಸಿ ಬೆನ್ನಿನ ಮೇಲೆ ಹೊಡೆದಿದ್ದಾರೆ. ಈ ಹೊಡೆದಾಟ ತಪ್ಪಿಸಲು ಬಂದ ಮಸ್ತಾಕ ಮಕ್ಬುಲಸಾಬ್ ಹುಲಗೂರ ಅವರ ತಮ್ಮ ಶೌಕೀತಲಿ ಹುಲಗೋರ ಹಾಗೂ ಪತ್ನಿ ನಸ್ರೀನಭಾನು, ತಮ್ಮನ ಪತ್ನಿ ಜೈನಭಿ ಅವರಿಗೂ ದಾವಲಸಾಬ್ ಹಸನಸಾಬ ಕುನ್ನೂರ ಅವರು ಥಳಿಸಿದ್ದಾರೆ.
ಈ ಅನ್ಯಾಯದ ಬಗ್ಗೆ ಮಸ್ತಾಕ ಮಕ್ಬುಲಸಾಬ್ ಹುಲಗೂರ ಅವರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಮುಂಡಗೋಡು ಪೊಲೀಸರು ಪ್ರಕರಣ ದಾಖಲಿಸಿದ್ದು, ತನಿಖೆ ಶುರು ಮಾಡಿದ್ದಾರೆ.