ದುಷ್ಕರ್ಮಿಗಳ ದಾಳಿಗೆ ಒಳಗಾಗಿ ತೀವೃ ಪ್ರಮಾಣದಲ್ಲಿ ಅಸ್ವಸ್ಥರಾಗಿದ್ದ ಅಂಕೋಲಾದ ಕಾಂಗ್ರೆಸ್ ನಾಯಕ ಗೋಪಾಲಕೃಷ್ಣ ನಾಯಕ ಅವರು ಇದೀಗ ಚೇತರಿಸಿಕೊಂಡಿದ್ದಾರೆ. ಆಕ್ರಮಣದ ನಂತರ ಅವರನ್ನು ತುರ್ತಾಗಿ ಆಸ್ಪತ್ರೆಗೆ ದಾಖಲಿಸಿದ ಪರಿಣಾಮ ಅವರು ಜೀವಾಪಾಯದಿಂದ ಪಾರಾಗಿದ್ದಾರೆ.
ಗೋಪಾಲಕೃಷ್ಣ ನಾಯಕ ಅವರ ಮೇಲೆ ಆರು ಜನ ದಾಳಿ ಮಾಡಿದ್ದು, ಸಮಯಪ್ರಜ್ಞೆಯಿಂದ ಅವರು ತಮ್ಮ ಅಲ್ಲಿಂದ ಓಡಿ ಹೊಗಿ ತಪ್ಪಿಸಿಕೊಂಡಿದ್ದರು. ಮಾರಣಾಂತಿಕವಾಗಿ ಗಾಯಗೊಂಡಿದ್ದ ಅವರನ್ನು ನೆರೆಜಿಲ್ಲೆಯ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅಲ್ಲಿ ಅವರ ತಲೆ ಹಾಗೂ ಕೈಗೆ ಆದ ಗಾಯಕ್ಕೆ ಚಿಕಿತ್ಸೆ ನೀಡಿ ಗುಣಪಡಿಸಲಾಗಿದೆ. ತಲೆಗೆ ಹೊಲಿಗೆ ಹಾಕಿರುವುದು ಕಾಣಿಸುತ್ತಿದೆ. ಮೂರು ದಿನದ ಚಿಕಿತ್ಸೆ ನಂತರ ಗೋಪಾಲಕೃಷ್ಣ ನಾಯಕ ಅವರು ಊರಿಗೆ ಮರಳಿದ್ದಾರೆ.
ಮಣಿಪಾಲ್ ಆಸ್ಪತ್ರೆಯಲ್ಲಿ ಗೋಪಾಲಕೃಷ್ಣ ನಾಯಕ ಅವರನ್ನು ತೀವೃ ನಿಗಾ ಘಟಕದಲ್ಲಿರಿಸಿ ಆರೈಕೆ ಮಾಡಲಾಗಿದೆ. ಗೃಹ ಸಚಿವ ಜಿ ಪರಮೇಶ್ವರ ಅವರು ಸಹ ತಮ್ಮ ಆಪ್ತನ ಮೇಲಾಗಿರುವ ದಾಳಿಯನ್ನು ಖಂಡಿಸಿದ್ದು, ಪಾದರರ್ಶಕ ತನಿಖೆಗೆ ಸೂಚಿಸಿದ್ದಾರೆ. ಆಸ್ಪತ್ರೆಯಿಂದ ಬಿಡುಗಡೆ ಆದ ನಂತರ ಅವರು ಅಂಕೋಲಾದ ಕಣಕಣೇಶ್ವರ ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸಿದ್ದಾರೆ. ಅದಾದ ನಂತರ ಮಾಧ್ಯಮದವರ ಜೊತೆ ಮನಬಿಚ್ಚಿ ಮಾತನಾಡಿದ್ದಾರೆ. `ಕೊಲ್ಲಲು ನೂರಾರು ಜನ ಇದ್ದಾಗ ಕಾಯಲು ಒಬ್ಬ ಇರುತ್ತಾನೆ. ಪೊಲೀಸ್ ತನಿಖೆ ಮೇಲೆ ವಿಶ್ವಾಸವಿದೆ. ಶೀಘ್ರದಲ್ಲಿಯೇ ಸತ್ಯ ಹೊರಬರಲಿದೆ’ ಎಂದು ಅವರು ಹೇಳಿದರು.