ಉತ್ತರ ಕನ್ನಡ ಜಿಲ್ಲೆಯ ಹಲವು ಕಡೆ ಕಳೆದ ಮೂರು ದಿನಗಳಿಂದ ಗುಡುಗು-ಮಳೆಯಾಗುತ್ತಿದೆ. ಈ ವೇಳೆ ಅಲ್ಲಲ್ಲಿ ಸಿಡಿಲು ಬಿದ್ದಿದ್ದು, ದಾಂಡೇಲಿಯಲ್ಲಿ ಸಿಡಿಲಿನ ಅಬ್ಬರಕ್ಕೆ ತೆಂಗಿನ ಮರಕ್ಕೆ ಬೆಂಕಿ ಹೊತ್ತಿಕೊಂಡಿದೆ.
ದಾoಡೇಲಿ ಹಾಗೂ ಸುತ್ತಲಿನ ಪ್ರದೇಶದಲ್ಲಿ ಈ ದಿನ ಗುಡುಗು ಸಿಡಿಲುಸಹಿತ ಜೋರು ಮಳೆಯಾಗಿದೆ. ಮಳೆಗೂ ಮುನ್ನ ಬಂದ ಸಿಡಿಲು ತೆಂಗಿನ ಮರಕ್ಕೆ ಬಡಿದಿದ್ದು, ಅಲ್ಲಿದ್ದ ಫಸಲಿನ ಜೊತೆ ಗರಿಗಳಿಗೂ ಬೆಂಕಿ ತಗುಲಿದೆ. ದಾಂಡೇಲಿ ನಗರದ ಟೌನ್ ಶಿಪ್ಪಿನ ಶಂಕರಮಠ ಹತ್ತಿರ ಈ ಅವಘಡ ನಡೆದಿದೆ. ಅಲ್ಲಿನ ಮನೆ ಮುಂದಿದ್ದ ತೆಂಗಿನ ಮರ ಬೆಂಕಿಯಿAದ ಉರಿಯುವುದನ್ನು ನೋಡಿ ಜನ ಆಂತಕಕ್ಕೆ ಒಳಗಾಗಿದ್ದಾರೆ.
ಎಸ್ ಪಿ ನಾಯ್ಕ ಅವರಿಗೆ ಸೇರಿದ ತೆಂಗಿನ ಮರದ ಗರಿಗಳು ಸಿಡಿಲಿನ ವೇಗಕ್ಕೆ ಕರಕಲಾಗಿದೆ. ಸಂಜೆ ವೇಳೆಗೆ ಬಡಿದ ಸಿಡಿಲು ನೋಡಲು ನೂರಾರು ಜನ ಜಮಾಯಿಸಿದ್ದಾರೆ. ಅಗ್ನಿಶಾಮಕ ಸಿಬ್ಬಂದಿ ಆಗಮಿಸಿ ಬೆಂಕಿ ಆರಿಸುವ ಪ್ರಯತ್ನ ಮಾಡಿದರೂ ಅದು ಪೂರ್ಣ ಪ್ರಮಾಣದಲ್ಲಿ ಪ್ರಯೋಜನಕ್ಕೆ ಬರಲಿಲ್ಲ. ಅದಾದ ನಂತರ ಸುರಿದ ಮಳೆಗೆ ಬೆಂಕಿ ಅಲ್ಪ ಪ್ರಮಾಣದಲ್ಲಿ ನಿಯಂತ್ರಣಕ್ಕೆ ಬಂದಿದೆ. ಮಳೆ ನಿಂತ ನಂತರವೂ ಬೆಂಕಿ ಉರಿಯುತ್ತಿದ್ದು, ನೂರಾರು ಜನ ಆಗಮಿಸಿ ಅದನ್ನು ವೀಕ್ಷಿಸಿದ್ದಾರೆ.