• Trending
  • Comments
  • Latest
Ranjitha did not agree to the marriage Rafiq stabbed her with a knife!

ಮದುವೆಗೆ ಒಪ್ಪದ ರಂಜಿತಾ: ಚಾಕು ಚುಚ್ಚಿದ ರಫೀಕ!

January 3, 2026
No luck.. No supplies available Yellapur bandh on Sunday!

ಸಂತೆಯೂ ಇಲ್ಲ.. ಸಾಮಗ್ರಿಯೂ ಸಿಗಲ್ಲ: ಭಾನುವಾರ ಯಲ್ಲಾಪುರ ಬಂದ್!

January 3, 2026
Ranjitha did not agree to the marriage Rafiq stabbed her with a knife!

ರಂಜಿತಾ ಕೊಂದ ರಫೀಕ್ ಇನ್ನಿಲ್ಲ!

January 4, 2026
ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

0
ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

0
Join hands with `Trek' using a digital trick!

ಡಿಜಿಟಲ್ ಟ್ರಿಕ್ ಬಳಸಿ `ಟ್ರೆಕ್’ ಜೊತೆ ಕೈ ಜೋಡಿಸಿ!

0

ಬೆಟ್ಟ ಅತಿಕ್ರಮಣ: ದೂರು ನೀಡಿದವನ ಮೇಲೆ ಹಲ್ಲೆ!

May 6, 2026
Grandpa youre on the wrong path!

ಅಡ್ಡದಾರಿ ಹಿಡಿದ ಅಜ್ಜ!

May 6, 2026
Cemetery land encroachment Forest Department's silence!

ಸ್ಮಶಾನ ಭೂಮಿ ಅತಿಕ್ರಮಣ: ಅರಣ್ಯ ಇಲಾಖೆಯ ಮೌನ!

May 6, 2026
  • Trending
  • Comments
  • Latest
Ranjitha did not agree to the marriage Rafiq stabbed her with a knife!

ಮದುವೆಗೆ ಒಪ್ಪದ ರಂಜಿತಾ: ಚಾಕು ಚುಚ್ಚಿದ ರಫೀಕ!

January 3, 2026
No luck.. No supplies available Yellapur bandh on Sunday!

ಸಂತೆಯೂ ಇಲ್ಲ.. ಸಾಮಗ್ರಿಯೂ ಸಿಗಲ್ಲ: ಭಾನುವಾರ ಯಲ್ಲಾಪುರ ಬಂದ್!

January 3, 2026
Ranjitha did not agree to the marriage Rafiq stabbed her with a knife!

ರಂಜಿತಾ ಕೊಂದ ರಫೀಕ್ ಇನ್ನಿಲ್ಲ!

January 4, 2026
ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

0
ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

0
Join hands with `Trek' using a digital trick!

ಡಿಜಿಟಲ್ ಟ್ರಿಕ್ ಬಳಸಿ `ಟ್ರೆಕ್’ ಜೊತೆ ಕೈ ಜೋಡಿಸಿ!

0

ಬೆಟ್ಟ ಅತಿಕ್ರಮಣ: ದೂರು ನೀಡಿದವನ ಮೇಲೆ ಹಲ್ಲೆ!

May 6, 2026
Grandpa youre on the wrong path!

ಅಡ್ಡದಾರಿ ಹಿಡಿದ ಅಜ್ಜ!

May 6, 2026
Cemetery land encroachment Forest Department's silence!

ಸ್ಮಶಾನ ಭೂಮಿ ಅತಿಕ್ರಮಣ: ಅರಣ್ಯ ಇಲಾಖೆಯ ಮೌನ!

May 6, 2026
  • Home
Sunday, May 10, 2026
  • Login
Mobiletime.in
  • ವಾಣಿಜ್ಯ
  • ಲೇಖನ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
No Result
View All Result
  • ವಾಣಿಜ್ಯ
  • ಲೇಖನ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
No Result
View All Result
Mobiletime.in
No Result
View All Result
  • ವಾಣಿಜ್ಯ
  • ಲೇಖನ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
ADVERTISEMENT
ADVERTISEMENT
Home ನಮ್ಮ ಊರು-ನಮ್ಮ ಜಿಲ್ಲೆ

ಯಕ್ಷಶ್ರೀ: ಅಭಿಮನ್ಯುವಾಗಿ ಮಿಂಚಿದ ಬಾಲೆ!

Achyutkumar by Achyutkumar
March 30, 2026
Yakshashri The child who shone as Abhimanyu!
518
VIEWS
Share on FacebookShare on WhatsappShare on Twitter
ADVERTISEMENT

ಶಿರಸಿ ನಗರದ ಟಿಎಂಎಸ್ ಸಭಾಂಗದಣದಲ್ಲಿ ನಡೆದ ಯಕ್ಷಗಾನ ವೇದಿಕೆಯಲ್ಲಿ ಹುತಗಾರ ಸನ್ನಿಧಿ ಭಟ್ ಅವರು ಅ ಕೃಷ್ಣಾರ್ಜುನದ ಅಭಿಮನ್ಯುವಾಗಿ ಮಿಂಚಿದ್ದಾರೆ. ಬಾಲಕಿಯ ಪ್ರತಿಭೆ ನೋಡಿ ಪ್ರೇಕ್ಷಕರು ಚಪ್ಪಾಳೆ ತಟ್ಟಿ ಪ್ರೋತ್ಸಾಹಿಸಿದ್ದಾರೆ.

ADVERTISEMENT

ಆಟವಾಡುತ್ತಿದ್ದ ಅಭಿಮನ್ಯುವನ್ನು ತಾಯಿ ಕರೆದು ಅಪ್ಪ ಅರ್ಜುನನಲ್ಲಿಗೆ ಕರೆದೋಯ್ದು ಗಯನ ಬಿಡುಗಡೆಗೆ ಕೇಳಿಕೊಳ್ಳುವಳು. ಆದರೆ ಅಭಿಮನ್ಯು ಗಯನನ್ನು ರಕ್ಷಿಸುವಂತೆ ಹೇಳುವನು. ಅಪ್ಪನ ನಲ್ಲಿ ಲಾಲಿಸಿ ಕೇಳೆನ್ನ ಮಾತ ಪದ್ಯದಿಂದಲೇ ತನ್ನ ಲಾಲಿತ್ಯ ಪೂರ್ಣ ಅಭಿನಯದ ಮೂಲಕ ಸನ್ನಿಧಿ ಭಟ್ ಅವರು ಪ್ರೇಕ್ಷಕರ ಮನಗೆದ್ದರು. ಪೌರಾಣಿಕ ಪ್ರಸಂಗ ಕವಿ ಹಳೇಮಕ್ಕಿ ರಾಮ ವಿರಚಿತ ಕೃಷ್ಣಾರ್ಜುನ ಕಾಳಗ ಯಕ್ಷಗಾನವೂ ಕಲಾಸಕ್ತರಮನ ತಣಿಸಿತು. ಹಿರಿಯ ಕಲಾವಿದ ಬಳಕೂರು ಕೃಷ್ಣಯಾಜಿ 70 ಇಳಿ ವಯಸ್ಸಿನಲ್ಲೂ ಅರ್ಜುನ ಪಾತ್ರಧಾರಿಯಾಗಿ ಗಂಭೀರವಾಗಿ ರಂಗವೇರಿದರೆ, ವಿನಯ ಬೇರೊಳ್ಳಿ ಕೃಷ್ಣನಾಗಿ ಮಿಂಚಿದರು. ಸುಭದ್ರೆಯಾಗಿ ಅಶ್ವಿನಿ ಕೊಂಡದಕುಳಿ, ದಾರುಕನಾಗಿ ಶ್ರೀಧರ ಹೆಗಡೆ ಚಪ್ಪರಮನೆ, ಭೀಮನಾಗಿ ಹಿಲ್ಲೂರು ಮಂಜುನಾಥ
ಅಭಿನಯದಲ್ಲಿ ಮಿಂಚಿದರು. ಅಭಿಮನ್ಯುವಾಗಿದ್ದ ಯಕ್ಷಕುವರಿ ಸನ್ನಿಧಿ ಭಟ್ಟ ಹುತ್ಗಾರ ಬಾಲ ಅಭಿನಯದ ಮೂಲಕ ಜನರ ಮನಗೆದ್ದರು.

ADVERTISEMENT

ಹಿರಿಯ ಭಾಗವತ ಸುರೇಶ ಶೆಟ್ಟಿ ಮತ್ತು ಪ್ರಸಿದ್ಧ ಭಾಗವತ ರಾಮಕೃಷ್ಣ ಹೆಗಡೆ ಹಿಲ್ಲೂರು ಭಾಗವತಿಕೆಯಲ್ಲಿ ಮದ್ದಲೆಯಲ್ಲಿ ನಾದಶಂಕರ ಶಂಕರ ಭಾಗವತ ಯಲ್ಲಾಪುರ, ಚಂಡೆ ವಾದನದಲ್ಲಿ ಪ್ರಸನ್ನ ಭಟ್ಟ ಹೆಗ್ಗಾರ, ಸಾಂತೂರು ಗಜಾನನ ಸಹಕಾರ ನೀಡಿದರು. ಪ್ರಶಸ್ತಿ ಕಾರ್ಯಕ್ರಮದ ಪೂರ್ವದಲ್ಲಿ ನಡೆದ ಗಾನ ವೈಭವದಲ್ಲಿ ಶ್ರೀಪಾದ ಹೆಗಡೆ ಬಾಳೆಗದ್ದೆ, ಗಜಾನನ ಭಟ್ಟ ತುಳಗೇರಿ, ಸೃಜನ ಹೆಗಡೆ ಸಾಗರ ದ್ವಂದ್ವವಾಗಿ ಹಾಗೂ ಏಕ ವ್ಯಕ್ತಿಯಾಗಿ ಯಕ್ಷಗಾನದ ಶೃಂಗಾರರಸ, ವೀರರಸ, ಹಾಸ್ಯ, ಪಿಠೀಕೆ ಹೀಗೆ ವಿವಿಧ ಪ್ರಸಂಗದ ಪದ್ಯಗಳನ್ನು ಹಾಡಿದರು. ಮದ್ದಲೆಯಲ್ಲಿ ಶಂಕರ ಭಾಗವತ ಯಲ್ಲಾಪುರ, ಮಂಜುನಾಥ ಗುಡ್ಡೆದಿಂಬ, ಚಂಡೆ ವಾದನದಲ್ಲಿ ಪ್ರಸನ್ನ ಹೆಗ್ಗಾರ, ಗಜಾನನ ಸಾಂತೂರು ಪಾಲ್ಗೊಂಡು ವಾದನದ ಮೇಲಿನ ಕೈಚಳಕ ತೋರಿದರು. ನಾಗರಾಜ ಜೋಶಿ ಪ್ರಸಂಗ ಹಾಗೂ ಪದ್ಯಗಳ ವಿವರಣೆ ನೀಡಿದರು.

ADVERTISEMENT

ಹಿಲ್ಲೂರು ಯಕ್ಷಮಿತ್ರ ಬಳಗ ಆಯೋಜಿಸಿದ್ದ ಗಾನ ವೈಭವ, ಪ್ರಶಸ್ತಿ ಪ್ರದಾನ, ಯಕ್ಷಗಾನ ಪ್ರದರ್ಶನದ ಕಾರ್ಯಕ್ರಮ ಅರ್ಥಪೂರ್ಣವಾಗಿ ನಡೆದಿದ್ದು ಆಗಮಿಸಿದ ಅನೇಕರು ರಸದೌತಣ ಸವಿದರು. ಇಡೀ ಸಮಾರಂಭ ಈ ನೆಲದ ಕಲೆಯ ಉಳಿವು, ಜಾಗೃತಿ, ಅಭಿನಂದನೆ, ಮುಂದಿನ ಪೀಳಿಗೆಗೆಗ ಹಸ್ತಾಂತರಿಸುವ ಕುರಿತು ಸಮಾಲೋಚನೆಯ ವೇದಿಕೆಯಾಗಿ ಕಾಣಿಸಿತು. ಈ ವೇದಿಕೆಯಲ್ಲಿ ಹಿಲ್ಲೂರು ಯಕ್ಷ ಮಿತ್ರ ಪ್ರಶಸ್ತಿಯನ್ನು ಯಕ್ಷಗಾನದ ಮೇರು ಭಾಗವತ ಸುರೇಶ ಶೆಟ್ಟಿ ಶಂಕರನಾರಾಯಣ ಅವರಿಗೆ ಪ್ರದಾನ ಮಾಡಲಾಯಿತು. ಸ್ಮರಣಿಕೆ, ಹತ್ತು ಸಾವಿರ ರೂ. ನಗದು, ಶಾಲು, ಸನ್ಮಾನ ಪತ್ರ ಒಳಗೊಂಡ ಗೌರವವನ್ನು ನೀಡಿ ಅಭಿನಂದಿಸಲಾಯಿತು. ಹಿರಿಯ ಕಲಾವಿದ ಕೃಷ್ಣ ಯಾಜಿ ಬಳಕೂರು ಹಾಗೂ ಅವರ ಪತ್ನಿ ಶಾಂತಾ ಯಾಜಿ ಅವರಿಗೆ 10 ಸಾವಿರ ರೂ ನಗದು ಸನ್ಮಾನ ಪತ್ರ ನೀಡುವ ಮೂಲಕ ಗೌರವಿಸಲಾಯಿತು. ಇದೇ ವೇಳೆ ಪ್ರಾಣಿ ಪ್ರಿಯ, ಅನಾಥ ಪ್ರಾಣಿಗಳ ರಕ್ಷಕ ರಾಜೇಂದ್ರ ಶಿರಸಿಕರ್ ಅವರಿಗೆ 5 ಸಾವಿರ ರೂ ಪ್ರೋತ್ಸಾಹಕ ಬಹುಮಾನ ನೀಡಿ ಪುರಸ್ಕರಿಸಲಾಯಿತು. ಪ್ರಶಸ್ತಿ ಪ್ರದಾನದಲ್ಲಿ ಭಾಗವಹಿಸಿದ ಎಂಇಎಸ್ ಅಧ್ಯಕ್ಷ ಜಿ ಎಂ ಹೆಗಡೆ ಮುಳಖಂಡ ಅವರು `ಯಕ್ಷಗಾನ ದಂಥ ಕಲೆಯ ಉಳಿವಿಗೆ ಎಲ್ಲರ ಸಹಕಾರ ಅಗತ್ಯ’ ಎಂದರು. ಧಾರವಾಡ ಹಾಲು ಒಕ್ಕೂಟ ಉಪಾಧ್ಯಕ್ಷ ಸುರೇಶ್ಚಂದ್ರ ಹೆಗಡೆ ಕೆಶಿನ್ಮನೆ ಅವರು `ಹಿಲ್ಲೂರು ಭಾಗವತರು ಯಕ್ಷಗಾನ ಕ್ಷೇತ್ರಕ್ಕೆ ನೀಡುತ್ತಿರುವ ಕೊಡುಗೆ ಅಪಾರ’ ಎಂದು ಶ್ಲಾಘಿಸಿದರು.

ಸಾಮಾಜಿಕ ಕಾರ್ಯಕರ್ತ ಅನಂತಮೂರ್ತಿ ಹೆಗಡೆ, ಯಲ್ಲಾಪುರ ಟಿಎಂಎಸ್ ಪ್ರಮುಖ ನರಸಿಂಹ ಕೋಣೆಮನೆ, ಕೆಡಿಸಿಸಿ ಮಾಜಿ ಆರ್ ಜಿ ಭಾಗವತ, ಚೈತನ್ಯ ಪಿಯು ಅಧ್ಯಕ್ಷ
ಕೆ ಬಿ ಲೋಕೇಶ ಹೆಗಡೆ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಭಾಗವಹಿಸಿದ್ದರು. ಇದೇ ವೇಳೆ ವಿದ್ವಾನ್ ದತ್ತಮೂರ್ತಿ ಭಟ್ಟ ಶಿವಮೊಗ್ಗ, ಪತ್ರಕರ್ತ ಗಿರಿಧರ ಕಬ್ನಳ್ಳಿ ಮಾತನಾಡಿದರು. ಅಭಿನಂದನಾ ನುಡಿ ಆಡಿದ ದತ್ತಮೂರ್ತಿ ಭಟ್ಟ ಅವರು `ಶಾಸಕರ ಅನುದಾನದಲ್ಲಿ ಶಾಲಾ ಮಕ್ಕಳಿಗೆ ಯಕ್ಷಗಾನ ಕಲಿಕೆ ದಕ್ಷಿಣ ಕನ್ನಡದಲ್ಲಿ ನಡೆಯುತ್ತಿದೆ. ಯಕ್ಷಗಾನದಿಂದ ಆಂಗಿಕ, ಸಾತ್ವಿಕ, ಪೌರಾಣಿಕ ಎಲ್ಲ ಸಂಗತಿಗಳು ಇವೆ. ಉತ್ತರ ಕನ್ನಡದಲ್ಲೂ ಶಾಸಕರ ಅನುದಾನ ಅಡಿಯಲ್ಲಿ ಮಕ್ಕಳಿಗೆ ಶಾಲೆಯಲ್ಲಿ ಯಕ್ಷಗಾನ ಪಾಠದ ಕಾರ್ಯ ಆಗಬೇಕು’ ಎಂದು ಆಶಿಸಿದರು. ಬಳಗದ ರಮ್ಯ ರಾಮಕೃಷ್ಣ, ಗುರುಪಾದ ಭಟ್ಟ, ಚಿತ್ರಾ ಹೆಗಡೆ, ರವಿ ಮುರೂರು, ಯಾಜಿ ಅವರ ಪತ್ನಿ ಶಾಂತಾ ಯಾಜಿ ಇತರರು ಇದ್ದರು. ವಿವೇಕ ಹೆಗಡೆ ಸ್ವಾಗತಿಸಿದರು. ರಾಮಕೃಷ್ಣ ಹೆಗಡೆ ಹಿಲ್ಲೂರು ಪ್ರಸ್ತಾವಿಕ ಮಾತನಾಡಿದರು. ನಾಗರಾಜ ಕವಲಕ್ಕಿ ನಿರ್ವಹಿಸಿದರು.

  • Trending
  • Comments
  • Latest
Ranjitha did not agree to the marriage Rafiq stabbed her with a knife!

ಮದುವೆಗೆ ಒಪ್ಪದ ರಂಜಿತಾ: ಚಾಕು ಚುಚ್ಚಿದ ರಫೀಕ!

January 3, 2026
No luck.. No supplies available Yellapur bandh on Sunday!

ಸಂತೆಯೂ ಇಲ್ಲ.. ಸಾಮಗ್ರಿಯೂ ಸಿಗಲ್ಲ: ಭಾನುವಾರ ಯಲ್ಲಾಪುರ ಬಂದ್!

January 3, 2026
Ranjitha did not agree to the marriage Rafiq stabbed her with a knife!

ರಂಜಿತಾ ಕೊಂದ ರಫೀಕ್ ಇನ್ನಿಲ್ಲ!

January 4, 2026
ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

0
ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

0
Join hands with `Trek' using a digital trick!

ಡಿಜಿಟಲ್ ಟ್ರಿಕ್ ಬಳಸಿ `ಟ್ರೆಕ್’ ಜೊತೆ ಕೈ ಜೋಡಿಸಿ!

0

ಬೆಟ್ಟ ಅತಿಕ್ರಮಣ: ದೂರು ನೀಡಿದವನ ಮೇಲೆ ಹಲ್ಲೆ!

May 6, 2026
Grandpa youre on the wrong path!

ಅಡ್ಡದಾರಿ ಹಿಡಿದ ಅಜ್ಜ!

May 6, 2026
Cemetery land encroachment Forest Department's silence!

ಸ್ಮಶಾನ ಭೂಮಿ ಅತಿಕ್ರಮಣ: ಅರಣ್ಯ ಇಲಾಖೆಯ ಮೌನ!

May 6, 2026
ADVERTISEMENT

Email: ukskofc@gmail.com

Developed by Naik & Co  © Copyright Publisher of Mobile Media Network

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

You cannot copy content of this page

No Result
View All Result
  • ವಾಣಿಜ್ಯ
  • ಲೇಖನ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ

Copyright © 2025 Mobiletime.in Owned By: Mobile Media Network LLP Maintained By: Naik and Co.

ನಿಮ್ಮ ಸಹಾಯಕ್ಕೆ ನಾನಿದ್ದೇನೆ! 😍✋