ಕಾರವಾರ ಕಾಜುಭಾಗದ ದರ್ಶನ ರೇವಣಕರ್ ಅವರು ಗಾಂಜಾ ಸೇವಿಸಿ ಬೀದಿಗೆ ಬಿದ್ದಿದ್ದಾರೆ. ಪೊಲೀಸರೇ ಅವರನ್ನು ಉಪಚಿರಿಸಿ ಆಸ್ಪತ್ರೆಗೆ ದಾಖಲಿಸಿದ್ದಾರೆ.
ಕಾರವಾರದ ಕಾಜುಭಾಗದ ಸಂಕ್ರೀವಾಡದಲ್ಲಿ ದರ್ಶನ ಗಜಾನನ ರೇವಣಕರ್ ಅವರು ವಾಸವಾಗಿದ್ದಾರೆ. 27 ವರ್ಷದ ಅವರು ಸಣ್ಣ ವಯಸ್ಸಿನಲ್ಲಿಯೇ ದಾರಿ ತಪ್ಪಿದ್ದಾರೆ. ಸಹವಾಸ ದೋಷದಿಂದ ಅವರು ದುಶ್ಚಟದ ದಾಸರಾಗಿದ್ದು, ಕುಟುಂಬದವರಿಗೆ ಯಾರಿಗೂ ಗೊತ್ತಾಗದ ಹಾಗೇ ಗಾಂಜಾ ಸೇವಿಸಿದ್ದಾರೆ.
ಮಾರ್ಚ 30ರ ಬೆಳಗ್ಗೆಯೇ ನಶೆ ಏರಿಸಿಕೊಂಡ ದರ್ಶನ್ ರೇವಣಕರ್ ಅವರು ಕಾರವಾರದಲ್ಲಿ ಎಲ್ಲೆಂದರಲ್ಲಿ ಅಲೆದಾಡಿದ್ದಾರೆ. ಕೊನೆಗೆ ಕಾರವಾರ ಕಡಲತೀರದ ಹನುಮಾನ್ ಮೂರ್ತಿಯ ಬಳಿ ಬಿದ್ದಿದ್ದಾರೆ. ಅಮಲಿನಲ್ಲಿ ತೇಲಾಡುತ್ತಿದ್ದ ದರ್ಶನ್ ರೇವಣಕರ್ ಅವರನ್ನು ಕಾರವಾರ ಶಹರ ಪೊಲೀಸ್ ಠಾಣೆಯ ಪಿಸೈ ಬಾಬು ಆಗೇರ್ ಅವರು ಮಾತನಾಡಿಸಿದ್ದಾರೆ. ಮಾತನಾಡುವ ಸ್ಥಿತಿಯಲ್ಲಿಯೂ ಇರದ ಅವರನ್ನು ಪೊಲೀಸರೇ ಸರ್ಕಾರಿ ಆಸ್ಪತ್ರೆಗೆ ಕರೆದೊಯ್ದಿದ್ದಾರೆ.
ಈ ವೇಳೆ ವೈದ್ಯರು ನಡೆಸಿದ ತಪಾಸಣೆಯಲ್ಲಿ ದರ್ಶನ್ ರೇವಣಕರ್ ಅವರು ಮಾದಕ ವ್ಯಸನ ಸೇವನೆ ಮಾಡಿದ್ದು ದೃಢವಾಗಿದೆ. ದರ್ಶನ್ ರೇವಣಕರ್ ಅವರು ಗಾಂಜಾ ಸೇವಿಸಿದ್ದು ಖಚಿತವಾದ ಹಿನ್ನಲೆ ಪೊಲೀಸರು ಅವರ ವಿರುದ್ಧ ಕಠಿಣ ಕ್ರಮ ಜರುಗಿಸಿದ್ದಾರೆ. ನಿಷೇಧಿತ ವಸ್ತು ಸೇವನೆ ಹಿನ್ನಲೆ ಅವರ ವಿರುದ್ಧ ಪ್ರಕರಣವನ್ನು ದಾಖಲಿಸಿದ್ದಾರೆ.
`ಮಾದಕ ವ್ಯಸನ ಜೀವನಕ್ಕೆ ಮಾರಕ’