ಅಂಚೆ ಇಲಾಖೆಯ ಯೋಜನೆಗಳ ಬಗ್ಗೆ ಜನರಲ್ಲಿ ಮಾಹಿತಿ ನೀಡಿ, ಆ ಮೂಲಕ ಉದ್ಯೋಗ ಮಾಡಲು ಬಯಸುತ್ತೀರಾ? ಹಾಗಿದ್ದರೆ, ಉತ್ತರ ಕನ್ನಡ ಜಿಲ್ಲೆಯ ಕರಾವಳಿ ಐದು ತಾಲೂಕುಗಳಲ್ಲಿ ಅಂಚೆ ಪ್ರತಿನಿಧಿಯಾಗಿ ಕೆಲಸ ಮಾಡುವ ಅವಕಾಶ ಅರೆಸಿ ಬಂದಿದೆ.
ಭಾರತೀಯ ಅಂಚೆ ಇಲಾಖೆ ಜೀವ ವಿಮಾ ಯೋಜನೆಯನ್ನು ಹೊಂದಿದ್ದು ಆ ಯೋಜನೆಯ ಪ್ರಚಾರ, ಪ್ರತಿನಿಧಿ ನೇಮಕಾತಿಗಾಗಿ ಅರ್ಜಿ ಕರೆದಿದೆ. ಕಾರವಾರ, ಅಂಕೋಲಾ, ಕುಮಟಾ, ಹೊನ್ನಾವರ, ಭಟ್ಕಳ ತಾಲೂಕಿನಲ್ಲಿ ಈ ಯೋಜನೆಗಾಗಿ ದುಡಿಯುವವರನ್ನು ಅಂಚೆ ಇಲಾಖೆ ಹುಡುಕುತ್ತಿದೆ. ಅರ್ಜಿ ಹಾಕುವವರು 10ನೇ ತರಗತಿ ಪಾಸಾಗಿರಬೇಕು ಎಂಬ ನಿಯಮವಿದೆ. 18 ವರ್ಷ ಮೇಲ್ಪಟ್ಟವರು ಮಾತ್ರ ಅರ್ಜಿ ಹಾಕಲು ಅರ್ಹರು.
ಅರ್ಜಿ ಹಾಕುವವರು ಸ್ಥಳೀಯರಾಗಿರಬೇಕು. ಅರ್ಜಿಯನ್ನು ಅಂಚೆ ಕಚೇರಿಯಲ್ಲಿಯೇ ಪಡೆದು ಅದನ್ನು ಭರ್ತಿ ಮಾಡಿ ಸಲ್ಲಿಸಬೇಕು. ಅರ್ಜಿ ಹಾಕಿದವರನ್ನು ಕಾರವಾರದ ಅಂಚೆ ಅಧೀಕ್ಷಕರು ಸಂದರ್ಶನ ಮಾಡಲಿದ್ದು, ಆಯ್ಕೆ ಪ್ರಕ್ರಿಯೆ ನಡೆಸಲಿದ್ದಾರೆ. ಆಯ್ಕೆಯಾದ ಅಭ್ಯರ್ಥಿಗಳಿಗೆ ವೇತನ ಇರುವುದಿಲ್ಲ. ಆದರೆ, ಕಮಿಷನ್ ಆಧಾರದಲ್ಲಿ ಹಣ ಪಾವತಿಸಲಾಗುತ್ತದೆ.
ಅರ್ಜಿ ಜೊತೆ ಎಸ್ ಎಸ್ ಎಲ್ ಸಿ ಅಂಕಪಟ್ಟಿ, ಅಂಚೆ ಇಲಾಖೆ ಫಾಸ್‌ಬುಕ್, ಪಾನ್ ಕಾರ್ಡ, ಆಧಾರ್ ಕಾರ್ಡ ಜರಾಕ್ಸ್ ಪ್ರತಿಗಳನ್ನು ಒದಗಿಸಬೇಕು. ಆಯ್ಕೆಯಾದ ಅಭ್ಯರ್ಥಿಗಳು 5000ರೂ ರಾಷ್ಟಿಯ ಉಳಿತಾಯ ಪತ್ರ ಅಥವಾ ಕಿಸಾನ್ ವಿಕಾಸ ಪತ್ರಪಡೆದು ಆ ಹಣವನ್ನು ಭದ್ರತಾ ಠೇವಣಿಯಾಗಿರಿಸಬೇಕು. ಇಲ್ಲಿ ಆಯ್ಕೆ ಆದ ನಂತರ ಬೇರೆ ವಿಮಾ ಕಂಪನಿಯ ಎಜೆಂಟ್ ಆಗಿ ಕೆಲಸ ನಿರ್ವಹಿಸುವ ಅವಕಾಶ ಇರುವುದಿಲ್ಲ.
ಅರ್ಜಿ ಹಾಕಿದವರಿಗೆ ಮೇ 12ರಂದು ಸಂದರ್ಶನ ನಡೆಯಲಿದೆ.ಹೆಚ್ಚಿನ ಮಾಹಿತಿಗೆ ಇಲ್ಲಿ ಫೋನ್ ಮಾಡಿ: 9945865299