ಶಿರಸಿಯ ಉಲ್ಲಾಳದಲ್ಲಿ ಕೆರೆ ಬೇಟೆ ಕಾರ್ಯಕ್ರಮ ನಡೆದಿದ್ದು, 500ರೂ ಪಾವತಿಸಿದ ಜನ ಬುಟ್ಟಿ ತುಂಬ ಮೀನು ಹಿಡಿದಿದ್ದಾರೆ. ಬೇರೆ ಬೇರೆ ಊರುಗಳಿಂದ ಆಗಮಿಸಿದ ಜನ ಅತ್ಯಂತ ಉತ್ಸಾಹದಿಂದ ಈ ಸಡಗರದಲ್ಲಿ ಭಾಗವಹಿಸಿದ್ದಾರೆ.
ಇಲ್ಲಿನ ಮಾರಿಕಾಂಬಾ ದೇವಸ್ಥಾನದ ಜೀರ್ಣೋದ್ಧಾರಕ್ಕಾಗಿ ಊರಿನವರು ಕೆರೆ ಬೇಟೆ ಕಾರ್ಯಕ್ರಮ ಆಯೋಜಿಸಿದ್ದರು. ಇದಕ್ಕೆ ಪೂರ್ವಭಾವಿಯಾಗಿ ಅಲ್ಲಿನ ಕೆರೆಯಲ್ಲಿ ಬಗೆ ಬಗೆಯ ಮೀನುಗಳನ್ನು ಬಿಟ್ಟು ಬೆಳೆಸಿದ್ದರು. ಉಲ್ಲಾಳ ಕೆರೆಯಲ್ಲಿ ಪಾರಂ ಮೀನು, ಕಟ್ಲಾ ಮೀನು, ಗ್ರಾಸ್ಕರ್ ಮೀನು ಮೊದಲಾದ ತಳಿಯಿರುವ ಬಗ್ಗೆ ಅರಿತ ಜನ ಮುಗಿಬಿದ್ದು ಮೀನು ಹಿಡಿಯುವ ಕಾಯಕದಲ್ಲಿ ತೊಡಗಿದರು.
ಕಬ್ಬಿಣದ ತಂತಿಯಿAದ ಮಾಡಿದ ಕುಣಿ ಜೊತೆ ಆಗಮಿಸಿದ ಜನ ಟೊಕನ್‌ಪಡೆದು ನೀರಿಗಿಳಿದರು. ಅತ್ಯಂತ ಉತ್ಸಾಹದಿಂದ ಅಲ್ಲಿದ್ದ ಮೀನುಗಳನ್ನು ಹಿಡಿದು ಖುಷಿ ಪಟ್ಟರು. ಮಕ್ಕಳು ಸಹ ಮೀನು ಹಿಡಿಯುವ ಕಾಯಕದಲ್ಲಿ ತೊಡಗಿದ್ದು, ಸ್ಪರ್ಧಾ ಮನೋಭಾವನೆಯಿಂದ ಪೈಪೋಟಿಗಿಳಿದು ಬುಟ್ಟಿ ತುಂಬಿಸಿಕೊAಡರು.
ಅನೇಕರಿಗೆ ಹೆಚ್ಚಿನ ಪ್ರಮಾಣದಲ್ಲಿ ಮೀನು ಸಿಕ್ಕಿತು. ಕೆಲವರಿಗೆ ಮಾತ್ರ ಒಂದೆರಡು ಮೀನು ಮಾತ್ರ ದೊರೆಯಿತು. ದೇವಾಲಯದ ಅಭಿವೃದ್ಧಿಗಾಗಿ ಈ ಕೆರೆ ಬೇಟೆ ನಡೆದಿರುವುದರಿಂದ ಕಡಿಮೆ ಮೀನು ಸಿಕ್ಕವರು ಸಹ ಬೇಸರಿಸಿಕೊಳ್ಳಲಿಲ್ಲ. ಈ ಕಾರ್ಯಕ್ರಮ ನೋಡಲು ಸಹ ನೂರಾರು ಜನ ಭಾಗವಹಿಸಿದ್ದು, ಸಂತಸ ವ್ಯಕ್ತಪಡಿಸಿದರು.