ಕಾರವಾರ ಕ್ಷೇತ್ರದ ಶಾಸಕ ಸತೀಶ್ ಸೈಲ್ ಅವರ ಪುತ್ರಿ ಸಾಧ್ವಿ ಸೈಲ್ ಅವರು `ಮಿಸ್ ಇಂಡಿಯಾ’ ಕಿರೀಟ ಧರಿಸಿದ್ದಾರೆ. ಒಡಿಶಾದ ಭುವನೇಶ್ವರದಲ್ಲಿ ನಡೆದ ಸ್ಪರ್ಧೆಯಲ್ಲಿ ಭಾಗವಹಿಸಿದ ಅವರು ತಮ್ಮ ಸೌಂದರ್ಯ ಪ್ರದರ್ಶನದಿಂದ ಜನರ ಮನ ಗೆದ್ದಿದ್ದಾರೆ.
ಗೋವಾ ರಾಜ್ಯ ಪ್ರತಿನಿಧಿಸಿ ಸ್ಪರ್ಧೆಯಲ್ಲಿ ಭಾಗವಹಿಸಿದ್ದ ಸಾಧ್ವಿ ಸೈಲ್ ಅವರು `ಮಿಸ್ ಇಂಡಿಯಾ’ ಕಿರೀಟ ಧರಿಸಿದ್ದು, 2027ರಲ್ಲಿ ನಡೆಯುವ ಮಿಸ್ ವರ್ಡ ಸ್ಪರ್ಧೆಯಲ್ಲಿ ಅವರು ಭಾರತವನ್ನು ಪ್ರತಿನಿಧಿಸಿ ಭಾಗವಹಿಸಲಿದ್ದಾರೆ. ಈ ಸಾಧನೆ ನಂತರ ಮಾತನಾಡಿದ ಸ್ವಾಧ್ವಿ ಸೈಲ್ ಅವರು `ಗ್ರಾಮೀಣ ಸಮುದಾಯಗಳ ಬದುಕು, ಹೋರಾಟ ಮತ್ತು ಕಥೆಗಳು ಹೆಚ್ಚು ಜನರಿಗೆ ತಲುಪಬೇಕು’ ಎಂಬ ಆಶಯವನ್ನು ವ್ಯಕ್ತಪಡಿಸಿದ್ದಾರೆ. ಭವಿಷ್ಯದಲ್ಲಿ ಸ್ವಂತ ವಿಶ್ವವಿದ್ಯಾಲಯ ಆರಂಭಿಸುವ ಕನಸನ್ನೂ ಅವರು ಹಂಚಿಕೊAಡಿದ್ದಾರೆ.
`ವಿದೇಶದಲ್ಲಿ ಓದುತ್ತಿದ್ದಾಗ ಹಣಕಾಸು ನಿರ್ವಹಣೆ, ತೆರಿಗೆ ಸಲ್ಲಿಕೆ ಹಾಗೂ ದೈನಂದಿನ ಜೀವನ ಕೌಶಲ್ಯಗಳ ಬಗ್ಗೆ, ಶಿಕ್ಷಣ ವ್ಯವಸ್ಥೆಯಲ್ಲಿ ಕೊರತೆ ಇದೆ. ಆದ್ದರಿಂದ ವಿದ್ಯಾರ್ಥಿಗಳಿಗೆ ಹಣಕಾಸಿನ ಅರಿವು, ಜೀವನ ಕೌಶಲ್ಯ, ಸೃಜನಶೀಲತೆ, ಆಧ್ಯಾತ್ಮ ಮತ್ತು ಪ್ರಾಯೋಗಿಕ ಜ್ಞಾನ ಕಲಿಸುವ ಶಿಕ್ಷಣ ಸಂಸ್ಥೆ ಆರಂಭಿಸುವ ಆಸೆಯಿದೆ’ ಎಂದವರು ಹೇಳಿದ್ದಾರೆ. `ಮಹಿಳೆಯರು ತಮ್ಮ ಹಣಕಾಸನ್ನು ಸ್ವತಃ ನಿರ್ವಹಿಸಲು ಕಲಿತರ ಅದು ದೇಶಕ್ಕೆ ದೊಡ್ಡ ಬದಲಾವಣೆಯಾಗುತ್ತದೆ’ ಎಂಬ ಅಭಿಪ್ರಾಯವನ್ನೂ ಅವರು ವ್ಯಕ್ತಪಡಿಸಿದ್ದಾರೆ. ಮಿಸ್ ಇಂಡಿಯಾ ಕಿರೀಟ ವಿಜೇತೆಯಾದ ಸ್ವಾಧ್ವಿ ಸೈಲ್ ಅವರಿಗೆ ಕಾರವಾರ ಶಾಸಕ ಸೈಲ್ ಅವರು ವಿಡಿಯೋ ಕಾಲ್ ನಲ್ಲಿ ಅಭಿನಂದಿಸಿದ್ದಾರೆ.