ಉತ್ತರ ಕನ್ನಡ ಜಿಲ್ಲೆಯ ಅನೇಕರ ಭವಿಷ್ಯ ರೂಪಿಸಿದ ಧಾರವಾಡದ ಅರ್ಜುನ ಕಾಲೇಜು JEE ಪರೀಕ್ಷೆಯಲ್ಲಿ ಉತ್ತರ ಕರ್ನಾಟಕಕ್ಕೆ ಪ್ರಥಮ ಸ್ಥಾನಪಡೆದಿದೆ.
ವಿದ್ಯಾ ಕಾಶಿ ಎಂದು ಗುರುತಿಸಿಕೊಂಡಿರುವ ಧಾರವಾಡದಲ್ಲಿ ಹೆಸರಾಂತ ವಿದ್ಯಾಸಂಸ್ಥೆಯಾಗಿ ಬೆಳೆದಿರುವ ಅರ್ಜುನ ವಿಜ್ಞಾನ ಪದವಿ ಪೂರ್ವ ಕಾಲೇಜು ವಿದ್ಯಾರ್ಥಿಗಳು ರಾಷ್ಟ್ರೀಯ ಪರೀಕ್ಷಾ ಮಂಡಳಿ ನಡೆಸುವ ಎಇಇ ಪರೀಕ್ಷೆಯ ಎರಡನೇ ಆವೃತ್ತಿಯಲ್ಲಿ ಉತ್ತರ ಕರ್ನಾಟಕಕ್ಕೆ ಪ್ರಥಮ ಸ್ಥಾನಗಳಿಸಿ ಸಾಧನೆ ಮಾಡಿದ್ದಾರೆ. ಕಳೆದ ಬಾರಿಗಿಂತ ಈ ಬಾರಿ ಇನ್ನೂ ಹೆಚ್ಚಿನ ಫಲಿತಾಂಶದೊAದಿಗೆ ಕಾಲೇಜು ಗುರುತಿಸಿಕೊಂಡಿದೆ.
ಅನ್ಮೋಲ್ ಪ್ರಭು (99.90) ಅವರು ಉತ್ತರ ಕರ್ನಾಟಕಕ್ಕೆ ಪ್ರಥಮ ಸ್ಥಾನಪಡೆದಿದದ್ದಾರೆ. ಆಲ್ ಇಂಡಿಯಾ ರಾಂಕಿAಗ್‌ನಲ್ಲಿಯೂ ಅವರು 1705ನೇ ಸ್ಥಾನಪಡೆದು ಸಂಸ್ಥೆಯ ಹಿರಿಮೆ ಹೆಚ್ಚಿಸಿದ್ದಾರೆ. ಇದರ ಜೊತೆಗೆ ಕೇದಾರ್ ಜೋಶಿ 99.84ರ ಸಾಧನೆ ಮಾಡಿ ಆಲ್ ಇಂಡಿಯಾ ರಾಂಕಿAಗ್‌ನಲ್ಲಿ 2688, ದರ್ಶನ್ ಭಟ್ ಅವರು 99.60ರ ಸಾಧನೆ ಮಾಡಿ ಆಲ್ ಇಂಡಿಯಾ ರಾಂಕಿAಗ್‌ನಲ್ಲಿ 6468, ಅನೀಶ್ ನಾಯ್ಕ್ ಅವರು 99.56ರ ಸಾಧನೆ ಮಾಡಿ, ಆಲ್ ಇಂಡಿಯಾ ರಾಂಕಿAಗ್‌ನಲ್ಲಿ 1596 ಸ್ಥಾನಪಡೆದಿದ್ದಾರೆ. ಈ 4 ವಿದ್ಯಾರ್ಥಿಗಳು ಪ್ರತಿಶತ 99ಕ್ಕಿಂತ ಹೆಚ್ಚಿನ ಫಲಿತಾಂಶ ದಾಖಲಿಸಿದ್ದಾರೆ.
ಪರೀಕ್ಷೆ ಬರೆದ ವಿದ್ಯಾರ್ಥಿಗಳಲ್ಲಿ ಧ್ರುವಂತ್ ಎಸ್ ಎಂ (98.52), ವಿನೀತ ಚವಾನ್ (98.04), ಆಕಾಶ ರಾಥೋಡ್ (97.61), ಪ್ರೀತಮ್ ಚೌಹಾನ್ (96.46), ಕಾರ್ತಿಕ್ ಭಜಂತ್ರಿ (96.38), ಈಶಾನ್ ಶಾನ್ಭಾಗ್ (96.08), ನಂದನ್ ಹೆಗ್ಡೆ (95.39), ರಜತ್ ಭಟ್ (95.36), ಸೃಜನ್ ಪಾಟೀಲ್ (94.62), ಪ್ರಣತಿ ಮೆಣಸು ಮನೆ (94.37), ಸಿಂಚನಾ ಭಟ್ (93.92), ಭಾರ್ಗವ್ ಹೆಬ್ಬಾರ್ (93.62), ಪ್ರಗತಿ ನರೋಣಿ (93.40), ಅನನ್ಯ ಪೂಜಾರ್ (93.11), ನಿಹಾಲ್ ಗಳಗಿ (92.30) ಸುಶಾಂತ್ ನಾಯ್ಕ್ (92.23), ಪೂರ್ವಿ ಹೆಗಡೆ(92.04), ಪ್ರೀತಮ್ ಯಡಳ್ಳಿ (91.70), ಮಾನಸ್ ದೇಶಪಾಂಡೆ (91.52), ಆದರ್ಶ ಭಟ್ (91.44), ಅಪೂರ್ವ ಹೆಗಡೆ (90.14), ಸಚಿನ್ ಜೋಶಿ (90.85), ನಿಶಾಂತ್ ನಂದವಾಡಗಿ (90.62)ರಷ್ಟು ಸಾಧನೆ ಮಾಡಿದ್ದಾರೆ. ಇದರೊಂದಿಗೆ ಶೇಕಡ 99 ಕ್ಕಿಂತ ಹೆಚ್ಚು 4 ವಿದ್ಯಾರ್ಥಿಗಳು, ಶೇ 95ಕ್ಕಿಂತ ಹೆಚ್ಚು 12 ವಿದ್ಯಾರ್ಥಿಗಳು, ಶೇ 90ಕ್ಕಿಂತ ಹೆಚ್ಚು 28 ವಿದ್ಯಾರ್ಥಿಗಳು ಮತ್ತು 85ಕ್ಕಿಂತ ಹೆಚ್ಚು 50ಕ್ಕೂ ಹೆಚ್ಚು ವಿದ್ಯಾರ್ಥಿಗಳು ಪರ್ಸೆಂಟೈಲ್ ಮಾಡುವುದರ ಮೂಲಕ ಉತ್ತಮ ಫಲಿತಾಂಶ ದಾಖಲಿಸಿದ್ದಾರೆ. ಸಾಧಕ ವಿದ್ಯಾರ್ಥಿಗಳಿಗೆ ಕಾಲೇಜು ಪ್ರಾಚಾರ್ಯ ಹಾಗೂ ಸಿಬ್ಬಂದಿ ಶುಭ ಹಾರೈಸಿದ್ದಾರೆ.