ತಾಯಿ ಮರಣದ ನಂತರ ಒಂಟಿಯಾಗಿದ್ದ ಅಂಕೋಲಾ ಅವರ್ಸಾದ ಕಿಶೋರ ಭಾನಾವಳಿಕರ್ ಅವರು ಮೂರು ವಾರಗಳ ಹಿಂದೆಯೇ ಸಾವನಪ್ಪಿದ್ದು, ಕೊಳೆತ ಸ್ಥಿತಿಯಲ್ಲಿ ಅವರ ಶವ ದೊರೆತಿದೆ. ಗಬ್ಬು ವಾಸನೆ ಬರುವುದನ್ನು ನೋಡಿ ಮನೆ ಬಳಿ ಹೋದವರಿಗೆ ಅಲ್ಲಿ ಕಿಶೋರ್ ಭಾನಾವಳಿಕರ್ ಅವರು ಸಾವನಪ್ಪಿರುವುದು ಗೊತ್ತಾಗಿದೆ.
ಅಂಕೋಲಾ ಅವರ್ಸಾದ ಕವಲಗದ್ದೆ ಕಾನಭಾಗ ಬಳಿ ಕಿಶೋರ ರೋಹಿದಾಸ ಭಾನಾವಳಿಕರ್ (38) ಅವರು ವಾಸವಾಗಿದ್ದರು. ಅಕ್ಕ ವಿಜಯಲಕ್ಷಿ ನಾಗೇಶ ಕುಡ್ತಳಕರ್ ಅವರ ವಿವಾಹದ ನಂತರ ಕಿಶೋರ್ ಭಾನಾವಳಿಕರ್ ಅವರು ತಾಯಿ ಜೊತೆ ವಾಸವಾಗಿದ್ದರು. ಐದು ವರ್ಷದ ಹಿಂದೆ ಅವರ ತಾಯಿ ನಿಧನರಾಗಿದ್ದು, ಮನೆಯಲ್ಲಿ ಒಂಟಿಯಾಗಿದ್ದರು. ಈ ನಡುವೆ ಕಿಶೋರ್ ಭಾನಾವಳಿಕರ್ ಅವರು ಸರಾಯಿ ಚಟಕ್ಕೆ ಅಂಟಿಕೊAಡಿದ್ದರು. ಕ್ಷಯ ರೋಗದಿಂದಲೂ ಅವರು ಬಳಲುತ್ತಿದ್ದರು.
ಸರಾಯಿ ಚಟ, ತಮಗಿರುವ ರೋಗದ ಹಿನ್ನಲೆ ರೋಹಿದಾಸ ಭಾನಾವಳಿಕರ್ ಅವರು ಸಾವನಪ್ಪಿದರು. ರೋಹಿದಾಸ ಭಾನಾವಳಿಕರ್ ಅವರು ವಾಸವಿದ್ದ ಪ್ರದೇಶ ಗಿಡ-ಗಂಟಿಗಳಿAದ ಕೂಡಿದ್ದು ಅಲ್ಲಿ ಯಾರೂ ಹೋಗುತ್ತಿರಲಿಲ್ಲ. ಹೀಗಾಗಿ ಅವರು ಸಾವನಪ್ಪಿ 20 ದಿನ ಕಳೆದರೂ ಆ ವಿಷಯ ಯಾರಿಗೂ ಗೊತ್ತಾಗಲಿಲ್ಲ. ಏಪ್ರಿಲ್ 24ರಂದು ಆ ಪ್ರದೇಶದಿಂದ ಗಬ್ಬು ವಾಸನೆ ಬರುವುದು ಗಮನಕ್ಕೆ ಬಂದಿತು. ಊರಿನ ಕೆಲವರು ರೋಹಿದಾಸ್ ಭಾನಾವಳಿಕರ್ ಅವರ ಮನೆ ಕಡೆ ಹೋದಾಗ ಅಲ್ಲಿ ಕೊಳೆತ ಶವ ಕಾಣಿಸಿತು. ಜನ ಪೊಲೀಸರಿಗೆ ಮಾಹಿತಿ ನೀಡಿದ್ದು, ಪೊಲೀಸರು ಸ್ಥಳಕ್ಕೆ ಆಗಮಿಸಿದರು.
ಅಂಕೋಲಾದ ಪಾಲನಕರ್ ಕಪೌಂಡಿನಲ್ಲಿ ವಾಸವಾಗಿರುವ ವಿಜಯಲಕ್ಷಿ ಕುಡ್ತಳಕರ್ ಅವರು ತಮ್ಮನ ಶವ ಗುರುತಿಸಿದರು. ಮುಂದಿನ ಕಾನೂನು ಕ್ರಮಕ್ಕಾಗಿ ಅವರು ಪೊಲೀಸರಿಗೆ ಮನವಿ ಮಾಡಿದ್ದು, ಮರಣೋತ್ತರ ಪರೀಕ್ಷೆ ನಂತರ ಶವಪಡೆದರು.