ಮುoಡಗೋಡದಲ್ಲಿ ಮೀಟರ್ ಬಡ್ಡಿ ದಂಧೆ ನಡೆಸುತ್ತಿದ್ದ ಜಮೀರ್ ಅಹ್ಮದ್ ದರ್ಗಾವಾಲೆ ಅವರ ಕೊಲೆಗೆ ಮಂಜುನಾಥ ನಾಗೇಂದ್ರ ಕಾಜಗಾರ ಎಂಬಾತರು ಸುಪಾರಿ ನೀಡಿರುವುದು ಗೊತ್ತಾಗಿದೆ. ಆ ಸುಪಾರಿ ಶೂರರ ಜೊತೆ ಸ್ವತಃ ಮಂಜುನಾಥ ನಾಗೇಂದ್ರ ಕಾಜಗಾರ ಕೊಲೆಗೆ ರಣತಂತ್ರ ರೂಪಿಸಿದ್ದು, ಸದ್ಯ ಜಮೀರ್ ಅಹ್ಮದ್ ಕೊಲೆ ಮಾಡಿದ ಐವರನ್ನು ಪೊಲೀಸರು ಬಂಧಿಸಿದ್ದಾರೆ.
ಮುAಡಗೋಡದ ಸಾಲಗಾಂವಿಯ ಮಂಜುನಾಥ ನಾಗೇಂದ್ರ ಕಾಜಗಾರ (38) ಹಾಗೂ ಜಮೀರ್ ಅಹ್ಮದ್ ದರ್ಗಾವಾಲೆ ನಡುವೆ ವೈಮನಸ್ಸಿತ್ತು. ಮಂಜುನಾಥ ಕಾಜಗಾರ್ ಅವರು ಈ ಮೊದಲು ಸಹ ಕೊಲೆ ಪ್ರಕರಣದಲ್ಲಿ ಆರೋಪಿಯಾಗಿದ್ದರು. ಮಂಜುನಾಥ ಕಾಜಾಗಾರ್ ಅವರಲ್ಲಿ ಕೆಲಸ ಮಾಡುತ್ತಿದ್ದ ಇಬ್ಬರನ್ನು ಜಮೀರ್ ಅಹ್ಮದ್ ತಮ್ಮ ಕಡೆ ಸೆಳೆದುಕೊಂಡಿರುವುದು ಸಹ ಅವರಿಬ್ಬರ ದ್ವೇಷಕ್ಕೆ ಕಾರಣವಾಗಿತ್ತು. ಇದರೊಂದಿಗೆ ರಿಯಲ್ ಎಸ್ಟೇಟ್, ಹಣಕಾಸು ವ್ಯವಹಾರ, ಮೀಟರ್ ಬಡ್ಡಿ ವಿಷಯವಾಗಿ ಅವರಿಬ್ಬರ ನಡುವೆ ಕದನ ನಡೆದಿತ್ತು.
ಆ ದ್ವೇಷವೇ ಕೊಲೆಗೆ ಕಾರಣವಾಗಿದ್ದು, ಕೊಲೆ ನಂತರ ಬೆಂಗಳೂರಿಗೆ ಪರಾರಿಯಾಗಿದ್ದ ಐವರನ್ನು ಪೊಲೀಸರು ಬಂಧಿಸಿದ್ದಾರೆ. ಇಂದಿರಾನಗರದ ಶ್ರೀಕಾಂತ ರಾಜಶೇಖರ ಕಿರಣ್ಣನವರ (22), ಧಾರವಾಡದ ಮಂಜುನಾಥ ವಿಷ್ಣು ಬೆಳಗಾಂವ್(20) ಅಭಿಷೇಕ ತಂದೆ ಮಲ್ಲಕಾರ್ಜುನ ಬಡಶೆಟ್ಟಿ (22), ದೀಪಕ ನಾಗರಾಜ ನವಲೆ ಅವರನ್ನು ಪೊಲೀಸರು ವಶಕ್ಕೆಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಬೆಂಗಳೂರು ಸಮೀಪದ ನೆಲಮಂಗಲದ ಬಳಿ ಆರೋಪಿತರನ್ನು ಬಂಧಿಸಲಾಗಿದ್ದು, ವಿಚಾರಣೆಗಾಗಿ ಅವರನ್ನು ಜಿಲ್ಲೆಗೆ ಕರೆತರಲಾಗಿದೆ. ಆರೋಪಿತರ ಬಳಿಯಿದ್ದ ಪಿಸ್ತೂಲು, ಸಜೀವ ಗುಂಡುಗಳನ್ನು ಪೊಲೀಸರು ಜಪ್ತು ಮಾಡಿದ್ದಾರೆ.