ಅಘನಾಶಿನಿ ಏತ ನೀರಾವರಿ ಯೋಜನೆಯ ಬಗ್ಗೆ ಶಿರಸಿ ನ್ಯಾಯವಾದಿ ರವೀಂದ್ರ ನಾಯ್ಕ ಅವರು ನದಿಗಳ ರಕ್ಷಣಾ ಆಯೋಗದ ಅಧ್ಯಕ್ಷ ಎಚ್ ಎಲ್ ನಾಗಮೋಹನ್ ದಾಸ್ ಅವರ ಬಳಿ ಚರ್ಚಿಸಿದ್ದು, ಈ ಯೋಜನೆಯಿಂದ ಆಗುವ ದುಷ್ಪರಿಣಾಮಗಳ ಬಗ್ಗೆ ವಿವರಿಸಿದ್ದಾರೆ.
`ಉತ್ತರ ಕನ್ನಡ ಜಿಲ್ಲೆ ಸಿದ್ದಾಪುರ ತಾಲೂಕಿನಲ್ಲಿ ನಿಯೋಜನೆಗೊಳ್ಳುವ ಅಘನಾಶಿನಿ ಏತ ನಿರಾವರಿ ಯೋಜನೆಯೂ ಜನ ಮತ್ತು ಪರಿಸರ ವಿರೋಧಿ ಯೋಜನೆಯಾಗಿದೆ. ಅದನ್ನು ಸ್ಥಗಿತಗೊಳಿಸುವುದು ಅನಿವಾರ್ಯ’ ಎಂದವರು ಹೇಳಿದರು. `ರಾಷ್ಟಿçÃಯ ನೀರು ಅಭೀವೃಧ್ಧಿ ಪ್ರಾಧೀಕಾರವು ಅಘನಾಶಿನಿ- ವೇದಾವತಿ(ವಾಣಿ ವಿಲಾಸ ಸಾಗರ) ಜೋಡಣೆ ಯೋಜನೆ ಕುರಿತು ಪ್ರಾಥಮಿಕ ಸಾಧ್ಯತೆ ವರದಿಯನ್ನು ಅಕ್ಟೋಬರ್ 2025 ರಂದು ಯೋಜನೆ ಸಿದ್ಧಪಡಿಸಲಾಗಿದೆ’ ಎಂಬ ವಿಷಯವನ್ನು ಅವರು ವಿವರಿಸಿದರು. `ಅಘನಾಶಿನಿ ನದಿ ನೀರು ಎತ್ತುವಿಕೆ ಯೋಜನೆಯು 23 ಸಾವಿರ ಕೋಟಿ ವೆಚ್ಚದ್ದಾಗಿದೆ. 35 ಸಾವಿರ ಟಿಎಂಸಿ ನೀರನ್ನು ವಾಣಿ ವಿಲಾಸ ಜಲಾಯಶಯಕ್ಕೆ ಒಯ್ಯುವ ಬಗ್ಗೆ ಪ್ರಸ್ತಾಪಿಸಲಾಗಿದೆ. ಇದರಿಂದ ಪಶ್ಚಿಮ ಘಟ್ಟ ಪ್ರದೇಶದ ಜನ ಜೀವನ, ಪ್ರಾಣಿ, ಪಕ್ಷಿಗಳ ಹಾಗೂ ಅತ್ಯಮೂಲ್ಯ ಗಿಡ ಸಸ್ಯಗಳ ಮೇಲೆ ಪರಿಣಾಮ ಬೀಳಲಿದೆ’ ಎಂದವರು ಆತಂಕವ್ಯಕ್ತಪಡಿಸಿದರು.
`ನೈಸರ್ಗಿಕ ಅಸಮತೋಲನಕ್ಕೆ ಯೋಜನೆಯು ಕಾರಣವಾಗಲಿದೆ. ಈ ಯೋಜನೆಗೆ ವಿರೋಧವ್ಯಕ್ತಪಡಿಸಿ 25 ಸಾವಿರಕ್ಕೂ ಅಧೀಕ ಕುಟುಂಬದವರು ಕೇಂದ್ರ ಪರಿಸರ ಮತ್ತು ಅರಣ್ಯ ಮಂತ್ರಾಲಯ ಆಕ್ಷೇಪಣಾ ಪತ್ರ ಸಲ್ಲಿಸಿದ್ದಾರೆ’ ಎಂದು ವಿವರಿಸಿದರು. `ವಿಶ್ವ ಪರಂಪರೆಯ ಸಮಾವೇಶದ ಮಾರ್ಗಸೂಚಿಗಳ ನಿಬಂಧನೆಗಳಿಗೆ ಅನುಸಾರವಾಗಿ ಕ್ರಮ ಜರುಗಿಸಬೇಕು’ ಎಂದು ಯುನೆಸ್ಕೋ ಸಹ ಭಾರತ ಸರ್ಕಾರಕ್ಕೆÀ ಸೂಚನೆ ನೀಡಿದೆ’ ಎಂದವರು ಹೇಳಿದರು.