`ಮಾನವ ಹಕ್ಕು ಉಲ್ಲಂಘನೆ ಕುರಿತು ಆನ್ಲೈನ್ ಮೂಲಕ ದೂರು ಸಲ್ಲಿಸಲು ಅವಕಾಶವಿದ್ದು, ಮಾಧ್ಯಮ ಪ್ರಕಟಣೆಗಳ ಆಧಾರದಲ್ಲಿಯೂ ಮಾನವ ಹಕ್ಕು ಆಯೋಗ ಸ್ವಯಂ ಪ್ರೇರಿತ ದೂರು ದಾಖಲಿಸಿಕೊಳ್ಳಲಿದೆ’ ಎಂದು ಕರ್ನಾಟಕ ರಾಜ್ಯ ಮಾನವ ಹಕ್ಕುಗಳ ಆಯೋಗದ ಅಧ್ಯಕ್ಷ ಟಿ ಶ್ಯಾಮ ಭಟ್ ಅವರು ಹೇಳಿದ್ದಾರೆ.
`ಮಾನವ ಹಕ್ಕುಗಳ ಉಲ್ಲಂಘನೆ ಮತ್ತು ಸಂರಕ್ಷಣೆ ಕುರಿತು ದೂರದಾರರು ನೇರವಾಗಿ ಅಂಚೆ ಮೂಲಕ ಸಹ ದೂರು ಕೊಡಬಹುದಾಗಿದೆ’ ಎಂದವರು ಹೇಳಿದ್ದಾರೆ. ಬುಧವಾರ ಕಾರವಾರದಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಅವರು `ಆಯೋಗದಲ್ಲಿ ಶೇ 60ರಷ್ಟು ದೂರುಗಳು ಸ್ವಯಂ ಪ್ರೇರಿತವಾಗಿ ದಾಖಲಾಗಿಸಲಾಗುತ್ತದೆ. ದಾಖಲಾದ ಪ್ರಕರಣಗಳಲ್ಲಿ ಅಧಿಕಾರಿಗಳಿಂದ ಮಾನವ ಹಕ್ಕುಗಳ ಸಂರಕ್ಷಣೆಯಾಗದೇ ಇರುವ ಮತ್ತು ಲೋಪಗಳು ಕಂಡು ಬಂದಲ್ಲಿ ಸತ್ಯಾಸತ್ಯತೆ ಪರಿಶೀಲಿಸಿ ಶಿಸ್ತು ಕ್ರಮ ಕೈಗೊಳ್ಳಲು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗುತ್ತದೆ. ದೂರುದಾರಿಗೆ ಪರಿಹಾರ ನೀಡಬೇಕಿದ್ದಲ್ಲಿ ಸಹ ಸರ್ಕಾರಕ್ಕೆ ಶಿಪಾರಸ್ಸು ಮಾಡಲಾಗುತ್ತದೆ’ ಎಂದವರು ತಿಳಿಸಿದರು. `ಆಗುಹೋಗುಗಳ ಬಗ್ಗೆ ಮಾಧ್ಯಮದವರಿಗೆ ಹೆಚ್ಚಿನ ಮಾಹಿತಿ ಇರುವುದರಂದ ಮಾನವ ಹಕ್ಕುಗಳ ಸಂರಕ್ಷಣೆಯಲ್ಲಿ ಮಾಧ್ಯಮದವರ ಪಾತ್ರ ಮುಖ್ಯವಾಗಿದೆ’ ಎಂದರು.
`ಮಾನವ ಹಕ್ಕುಗಳ ಉಲ್ಲಂಘನೆ, ಸಂರಕ್ಷಣೆ ಮತ್ತು ಮೂಲಭೂತ ಸೌಕರ್ಯಗಳ ಕುರಿತು ಮಾಧ್ಯಮದಲ್ಲಿ ಪ್ರಸಾರವಾಗುವ ವರದಿಯನ್ನು ನೇರವಾಗಿ ಅಥವಾ ಜಿಲ್ಲಾ ವಾರ್ತಾಧಿಕಾರಿಗಳ ಮೂಲಕವಾದರೂ ಆಯೋಗಕ್ಕೆ ಕಳುಹಿಸಬಹುದಾಗಿದೆ. ಇದರಿಂದ ಸ್ವಯಂ ಪ್ರೇರಿತ ದೂರು ದಾಖಲಿಸಿಕೊಳ್ಳಲು ಸಾಧ್ಯವಾಗಲಿದೆ’ ಎಂದರು. `ಮಾನವ ಹಕ್ಕುಗಳ ಆಯೋಗದ ಕಚೇರಿ ಕೇವಲ ಬೆಂಗಳೂರು ನಲ್ಲಿ ಮಾತ್ರ ಇದ್ದು, ಎಲ್ಲಿಯೂ ಶಾಖಾ ಕಚೇರಿಗಳು ಇಲ್ಲ. ಆಯೋಗದಿಂದ ಮಾನ್ಯತೆ ಪಡೆದ ಯಾವುದೇ ಸಂಘ ಸಂಸ್ಥೆಗಳು ಕೆಲಸ ಮಾಡುತ್ತಿಲ್ಲ. ಆಯೋಗದ ಹೆಸರನ್ನು ಹೋಲುವಂತೆ ಹೆಸರು ಬಳಸಿ ಕೆಲವು ಸಂಘ ಸಂಸ್ಥೆಗಳು ಜಿಲ್ಲೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಬಗ್ಗೆ ದೂರುಗಳು ಸಲ್ಲಿಕೆಯಾಗಿದ್ದು, ಬೆದರಿಸುವ ಕೆಲಸ ಮಾಡುವವರ ವಿರುದ್ಧ ಕ್ರಮ ಜರುಗಿಸಲಾಗುತ್ತದೆ’ ಎಂದರು.
`ಉತ್ತರ ಕನ್ನಡ ಜಿಲ್ಲೆಯಲ್ಲಿನ ರಾಜ್ಯ ಮಾನವ ಹಕ್ಕುಗಳ ಆಯೋಗದದಲ್ಲಿ ದಾಖಲಾದ 30 ಪ್ರಕರಣಗಳಲ್ಲಿ 27 ಪ್ರಕರಣಗಳು ಇತ್ಯರ್ಥ ಪಡಿಸಲಾಗಿದ್ದು, 3 ಪ್ರಕರಣಗಳಲ್ಲಿ ದೂರುದಾರ ಅಭಿಪ್ರಾಯ ಪಡೆಯಲು ಕಳುಹಿಸಲಾಗಿದೆ. ಜೊತೆಗೆ ಈ ದಿನ ಐದು ಹೊಸ ಪ್ರಕರಣ ದಾಖಲಿಸಲಾಗಿದೆ. ಬೇರೆ ಜಿಲ್ಲೆಗೆ ಹೋಲಿಸಿದರೆ ಇಲ್ಲಿ ಕಡಿಮೆ ಪ್ರಕರಣ ದಾಖಲಾಗಿವೆ’ ಎಂದರು. ಆಯೋಗದ ನ್ಯಾಯಾಂಗ ಸದಸ್ಯ ಎಸ್ P .ವಂಟಿಗೋಡಿ, ಜಿಲ್ಲಾಧಿಕಾರಿ ಕೆ ಲಕ್ಷಿö್ಮÃಪ್ರಿಯಾ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ದಿಲೀಷ್ ಶಶಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ದೀಪನ್ ಎಂ ಎನ್ ಇದ್ದರು.