ಮೀನುಗಾರಿಕೆ ವಿಷಯವಾಗಿ ತನ್ನ ಅಧಿಕಾರ ಮೀರಿ ಹೊರಡಿಸಿದ್ದ ಆದೇಶವನ್ನು ಪ್ರವಾಸೋದ್ಯಮ ಇಲಾಖೆ ಹಿಂಪಡೆದಿದೆ. ಹೀಗಾಗಿ `ಕಡಲತೀರದಿಂದ 2ಕಿಮೀ ದೂರದಲ್ಲಿ ಮೀನುಗಾರಿಕೆ ಮಾಡುವ ಹಾಗಿಲ್ಲ’ ಎಂದು ಎಂಬ ಆದೇಶಕ್ಕೆ ಇನ್ಮುಂದೆ ಮಾನ್ಯತೆ ಇಲ್ಲ.
`ಕಡಲತೀರದಿಂದ ಎರಡು ಕಿಮೀ ದೂರದಲ್ಲಿ ಮೀನುಗಾರಿಕಾ ಚಟುವಟಿಕೆ ಕೈಗೊಳ್ಳುವ ಹಾಗಿಲ್ಲ’ ಎಂದು ಪ್ರವಾಸೋದ್ಯಮ ಇಲಾಖೆ ಸೂಚಿಸಿತ್ತು. ಜಲಸಾಹಸ ಕ್ರೀಡೆ ನಡೆಸಲು ನೀಡಿದ ಟೆಂಡರಿನಲ್ಲಿ ಪ್ರವಾಸೋದ್ಯಮ ಇಲಾಖೆ ಈ ಬಗೆಯ ಸೂಚನೆ ನೀಡಿದ್ದು, ಗೋಕರ್ಣ-ಬೇಲೆಹಿತ್ತಲ-ದುಬ್ಬನಸಸಿ-ಗಂಗಾವಳಿ ಹಾಗೂ ಗಂಗೆಕೊಳ್ಳ ಭಾಗದಲ್ಲಿ ಮೀನುಗಾರಿಕೆ ನಿಷೇಧದ ವಿಷಯ ಪ್ರಸ್ತಾಪಿಸಿತ್ತು. ಇದಕ್ಕೆ ಮೀನುಗಾರರಿಂದ ಭಾರೀ ಪ್ರಮಾಣದ ವಿರೋಧವ್ಯಕ್ತವಾಗಿತ್ತು.
ಜಿಲ್ಲಾ ಪಂಚಾಯತ ಮಾಜಿ ಸದಸ್ಯ ಪ್ರದೀಪ ನಾಯಕ, ಮೀನುಗಾರರ ಮುಖಂಡರಾದ ಶಿವರಾಮ ಹರಿಕಂತ್ರ, ಜಗದೀಶ ಹರಿಕಂತ್ರ ಅವರು `ಎರಡು ಕಿಲೋಮೀಟರ್ ಸಮುದ್ರದವರೆಗೆ ಮೀನುಗಾರಿಕೆ ನಿಷೇಧ ಮಾಡುವುದರಿಂದ ಸಾಂಪ್ರದಾಯಿಕ ಮೀನುಗಾರಿಕೆ ಮಾಡುವವರಿಗೆ ಸಮಸ್ಯೆ ಆಗಲಿದೆ’ ಎಂದು ಸಭೆಗೆ ವಿವರಿಸಿದರು. `ಈ ರೀತಿ ನಿಷೇಧ ಹೇರುವ ಅಧಿಕಾರ ಪ್ರವಾಸೋದ್ಯಮ ಇಲಾಖೆಗೆ ಇಲ್ಲ. ಈಗಾಗಲೆ ಹೊರಡಿಸಿದ ಆದೇಶದವನ್ನು ಪರಿಶೀಲಿಸಿ ಸೂಕ್ತ ಕ್ರಮ ಜರುಗಿಸುವೆ’ ಎಂದು ಜಿಲ್ಲಾಧಿಕಾರಿ ಕೆ ಲಕ್ಷಿಪ್ರಿಯಾ ಅವರು ಕುಮಟಾದಲ್ಲಿ ನಡೆದ ಸಭೆಯಲ್ಲಿ ಭರವಸೆ ನೀಡಿದರು.
ಸದ್ಯ ಕುಮಟಾ ತಾಲೂಕಿನ ಗೋಕರ್ಣ ಕಡಲತೀರ, ಓಂ ಬೀಚ್, ಪ್ಯಾರಾಡೈಸ್ ಬೀಚ್, ಹಾಪ್ ಮೂನ್ ಬೀಚ್’ನ ಜಲಸಹಾಸ ಕ್ರೀಡೆ ಸಂಬAದ ಟೆಂಡರ್ ಪ್ರಕ್ರಿಯೆ ನಡೆಸಿ ಅಂತಿಮಗೊಳಿಸಲಾಗಿದೆ. ಟೆಂಡರ್ ಪ್ರದೇಶದ ಸುತ್ತಮುತ್ತ 2 ಕಿ.ಮೀ ವ್ಯಾಪ್ತಿಯಲ್ಲಿ ಯಾವುದೇ ರೀತಿಯ ಮೀನುಗಾರಿಕೆ ಚಟುವಟಿಕೆ ಕೈಗೊಳ್ಳುವಂತಿಲ್ಲ ಎಂಬ ವಿಷಯವನ್ನು ಹಿಂಪಡೆಯಲಾಗಿದೆ. ಈ ಬಗ್ಗೆ ರಿವರ್ ರಾಪ್ಟಿçಂಗ್ ಮತ್ತು ಜಲ ಸಾಹಸ ಕ್ರೀಡೆ ನಿರ್ವಹಣೆ ಮತ್ತು ಮೇಲುಸ್ತುವಾರಿ ಸಮಿತಿಯ ಸದಸ್ಯ ಕಾರ್ಯದರ್ಶಿಗಳು ಆಗಿರುವಪ್ರವಾಸೋದ್ಯಮ ಇಲಾಖೆಯ ಉಪ ನಿರ್ದೇಶಕಿ ಮಂಗಲಗೌರಿ ಭಟ್ಟ ಅವರು ಮಾಹಿತಿ ನೀಡಿದ್ದಾರೆ.