ಕೈ ತೊಳೆಯುವುದಕ್ಕಾಗಿ ಬಚ್ಚಲುಮನೆಗೆ ಹೋಗಿದ್ದ ಹೊನ್ನಾವರದ ಆಶೀಕಾ ನಾಯ್ಕ ಅವರಿಗೆ ವಿದ್ಯುತ್ ಸ್ಪರ್ಶವಾಗಿದೆ. ಅಲ್ಲಿಯೇ ಅಸ್ವಸ್ಥರಾಗಿದ್ದ ಆಶೀಕಾ ನಾಯ್ಕ ಅವರನ್ನು ಆಸ್ಪತ್ರೆಗೆ ದಾಖಲಿಸಿದರೂ ಪ್ರಯೋಜನವಾಗಿಲ್ಲ.
ಹೊನ್ನಾವರದ ಮಂಕಿ ಬಳಿ ಹೊಸಪಟ್ಟಣ ಬಳಿ ಹರೀಶ ನಾಯ್ಕ ಅವರು ವಾಸವಾಗಿದ್ದಾರೆ. ಅವರ ಐದು ವರ್ಷದ ಪುತ್ರಿ ಆಶೀಕಾ ನಾಯ್ಕ ಅವರು ದುರಂತ ಅಂತ್ಯ ಕಂಡಿದ್ದಾರೆ. ಬಚ್ಚಲು ಮನೆಯಲ್ಲಿ ಬಿದ್ದಿದ್ದ ವಿದ್ಯುತ್ ತಂತಿ ಸ್ಪರ್ಶದಿಂದ ಅವರು ಸಾವನಪ್ಪಿದ್ದಾರೆ.
ಹರೀಶ ನಾಯ್ಕ ಅವರು ತಮ್ಮ ಬಚ್ಚಲು ಮನೆಯಲ್ಲಿ ವಿದ್ಯುತ್ ಉಪಕರಣ ಕೂರಿಸಿದ್ದರು. ಅಲ್ಲಿಯೇ ಪಂಪ್‌ಸೆಟ್ ಇದ್ದು, ಪಂಪ್‌ಸೆಟ್’ಗೆ ವಿದ್ಯುತ್ ಹರಿಯುವ ತಂತಿ ತುಂಡಾಗಿ ಬಿದ್ದಿತ್ತು. ಏಪ್ರಿಲ್ 30ರ ಮಧ್ಯಾಹ್ನ ಆಶೀಕಾ ನಾಯ್ಕ ಅವರು ಆ ತಂತಿ ಬಿದ್ದಿರುವುದನ್ನು ನೋಡಲಿಲ್ಲ. ಕೈ ತೊಳೆಯಲು ಬಚ್ಚಲು ಮನೆಗೆ ಹೋಗಿದ್ದ ಅವರು ಅಲ್ಲಿ ಬಿದ್ದ ತಂತಿ ಮೆಟ್ಟಿದರು. ವಿದ್ಯುತ್ ಸ್ಪರ್ಶದಿಂದ ಅವರು ಅಲ್ಲಿಯೇ ಕುಸಿದು ಬಿದ್ದರು.
ತೀವೃ ಪ್ರಮಾಣದಲ್ಲಿ ಅಸ್ವಸ್ಥರಾಗಿದ್ದ ಆಶೀಕಾ ನಾಯ್ಕ ಅವರನ್ನು ತಕ್ಷಣ ಆಸ್ಪತ್ರೆಗೆ ಸಾಗಿಸಲಾಯಿತು. ಹೊನ್ನಾವರದ ಶ್ರೀದೇವಿ ಆಸ್ಪತ್ರೆಯವರು ಬಾಲಕಿಯ ದೇಹ ಮುಟ್ಟಿ ನೋಡಿದ್ದು, ಈಗಾಗಲೇ ಸಾವನಪ್ಪಿದ ವಿಷಯ ತಿಳಿಸಿದರು. ಈ ಎಲ್ಲಾ ವಿಷಯದ ಬಗ್ಗೆ ಸುಬ್ರಹ್ಮಣ್ಯ ಅಶೋಕ ನಾಯ್ಕ ಅವರು ಮಾಹಿತಿ ನೀಡಿದರು. ಮಂಕಿ ಠಾಣೆ ಪೊಲೀಸರು ಪ್ರಕರಣ ದಾಖಲಿಸಿದರು.
`ಮಕ್ಕಳ ಸುರಕ್ಷತೆ ಬಗ್ಗೆ ಗಮನಹರಿಸಿ’