ಕಾರವಾರದ ತೋಡೂರು ಬಂಡಿ ಹಬ್ಬದಲ್ಲಿ ಐಸ್ ಕ್ರೀಂ ಮಾರಾಟ ಮಾಡುತ್ತಿದ್ದ ಕೋಡಿಭಾಗದ ರಾಜೇಶ್ ಮಾಸೂಕರ್ ಅವರು ಹೃದಯಘಾತಕ್ಕೆ ಒಳಗಾಗಿದ್ದಾರೆ. ಎದೆನೋವು ಸಹಿಸಲಾಗದೇ ಅವರು ಸಾವನಪ್ಪಿದ್ದಾರೆ.
ಕೋಡಿಬಾಗದನ ತಾಮ್ಸೇವಾಡದಲ್ಲಿ ರಾಜೇಶ್ ಗೋವಿಂದ ಮಾಸೂರಕರ್ (60) ಅವರು ವಾಸವಾಗಿದ್ದರು. ಐಸ್ ಕ್ರೀಂ ಮಾರಾಟ ಮಾಡಿ ಅವರು ಬದುಕು ಕಂಡುಕೊAಡಿದ್ದರು. ಜಾತ್ರೆ, ಹಬ್ಬ-ಹರಿದಿನದ ವೇಳೆ ವಿವಿಧ ಊರುಗಳಿಗೆ ಸಂಚರಿಸಿ ಅವರು ಐಸ್ ಕ್ರೀಂ ಮಾರಾಟ ಮಾಡುತ್ತಿದ್ದರು. ಏಪ್ರಿಲ್ 28ರಂದು ತೋಡೂರು ಗ್ರಾಮದ ಬಂಡಿಹಬ್ಬದ ಹಿನ್ನಲೆಯಲ್ಲಿ ದೇವಸ್ಥಾನದ ಹತ್ತಿರ ರಾಜೇಶ್ ಅವರು ಐಸ್ ಕ್ರೀಂ ವ್ಯಾಪಾರ ಮಾಡುತ್ತಿದ್ದರು. ಮಧ್ಯಾಹ್ನ ಸುಮಾರು 3:30 ಗಂಟೆಯ ಹೊತ್ತಿಗೆ ಅವರಿಗೆ ಇದ್ದಕ್ಕಿದ್ದಂತೆ ತೀವ್ರ ಎದೆನೋವು ಕಾಣಿಸಿಕೊಂಡಿತು.
ಎದೆನೋವಿನ ಪರಿಣಾಮ ರಾಜೇಶ್ ಮಾಸೂರಕರ್ ಅವರು ಸ್ಥಳದಲ್ಲೇ ಕುಸಿದು ಬಿದ್ದರು. ಇದನ್ನು ಕಂಡ ಅವರ ಸಹೋದರ ಮಂಜುನಾಥ ಮಸೂರಕರ್ ಅವರು ಕೂಡಲೇ ಅವರನ್ನು ಕಾರವಾರದ ಕ್ರಿಮ್ಸ್ ಆಸ್ಪತ್ರೆಗೆ ಕರೆದುಕೊಂಡು ಬಂದರು. ಆದರೆ, ಆಸ್ಪತ್ರೆಯ ವೈದ್ಯರು ಪರೀಕ್ಷಿಸಿದಾಗ ರಾಜೇಶ್ ಅವರು ಮಾರ್ಗಮಧ್ಯದಲ್ಲೇ ಮೃತಪಟ್ಟಿರುವುದು ಗೊತ್ತಾಯಿತು.