ಯಲ್ಲಾಪುರದಲ್ಲಿ ಬೇಕರಿ ವ್ಯಾಪಾರ ನಡೆಸಿಕೊಂಡು ಬದುಕಿದ್ದ ಅಜೀಜ ಶೇಕ್ ಅವರು ಆತ್ಮಹತ್ಯೆಗೆ ಶರಣಾಗಿದ್ದಾರೆ. ಮೆದುಳು ರೋಗದಿಂದ ಬಳಲುತ್ತಿದ್ದ ಅವರು ಆ ರೋಗ ಎದುರಿಸಲಾಗದೇ ದುಡುಕಿನ ನಿರ್ಧಾರ ಮಾಡಿದ್ದಾರೆ.
ಯಲ್ಲಾಪುರದ ಶಾರದಾಗಲ್ಲಿಯಲ್ಲಿ ಅಜೀಜ್ ಶಂಶುದ್ದಿನ್ ಶೇಖ್ ಅವರು ವಾಸವಾಗಿದ್ದರು. 38 ವರ್ಷದ ಅವರು ಬೇಕರಿಯೊಂದರಲ್ಲಿ ವ್ಯಾಪಾರಿಯಾಗಿದ್ದರು. ಒಂದು ವರ್ಷದ ಹಿಂದೆ ಅಜೀಜ್ ಅವರಿಗೆ ಆರೋಗ್ಯ ಹದಗೆಟ್ಟಿತು. ಆಸ್ಪತ್ರೆ ಓಡಾಟ ನಡೆಸಿದಾಗ ಮೆದುಳಿನ ರೋಗ ಪತ್ತೆಯಾಯಿತು. ಯಲ್ಲಾಪುರ, ಹುಬ್ಬಳ್ಳಿ ಹಾಗೂ ಗೋವಾಗೆ ತೆರಳಿ ಅವರು ಚಿಕಿತ್ಸೆಪಡೆದಿದ್ದರು.
ಆದರೆ, ಯಾವ ಆಸ್ಪತ್ರೆಗೆ ಹೋದರೂ ಅಜೀಜ್ ಅವರ ರೋಗ ವಾಸಿ ಆಗಲಿಲ್ಲ. ದಿನದಿಂದ ದಿನಕ್ಕೆ ಅವರ ದೇಹ ಕ್ಷೀಣಿಸುತ್ತಿದ್ದು, ಅದರಿಂದ ಚಿಂತೆಗೀಡಾಗಿದ್ದರು. ಮೇ 1ರ ಮಧ್ಯಾಹ್ನ ಅಜೀಜ್ ಶೇಖ್ ಅವರು ಮನೆಯಿಂದ ಹೊರ ಹೋಗಿದ್ದು, ರಾತ್ರಿ ಮರಳಿ ಬಂದಿರಲಿಲ್ಲ. ಹುಡುಕಾಟ ನಡೆಸಿದಾಗ ಮೇ 2ರಂದು ಅವರು ಶವವಾಗಿದ್ದರು. ಕೆ ಮಿಲನ್ ಹೊಟೇಲ್ ಬಳಿಯಿದ್ದ ಬಿಡಿಕರ್ ಜಮೀನಿನ ಮಾವಿನ ಮರಕ್ಕೆ ಅಜೀಜ್ ಶೇಖ್ ಅವರು ನೇಣು ಹಾಕಿಕೊಂಡಿದ್ದರು.
ಅಜೀಜ್ ಶೇಖ್ ಅವರ ಶವ ನೋಡಿದ ಅವರ ಸಹೋದರ ಮಹಮದ್ ಹುಸೇನ್ ಅವರು ಈ ಬಗ್ಗೆ ಪೊಲೀಸರಿಗೆ ಫೋನ್ ಮಾಡಿದರು. ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲಿಸಿದ್ದು, ಪ್ರಕರಣ ದಾಖಲಿಸಿದರು.
`ಸಮಸ್ಯೆಗಳಿಗೆ ಆತ್ಮಹತ್ಯೆಯೇ ಪರಿಹಾರವಲ್ಲ’