`ಮೂರು ಎಕರೆಗಿಂತ ಕಡಿಮೆ ಅರಣ್ಯ ಭೂಮಿ ತೆರವಿಗೆ ನಿರ್ಬಂಧಿಸಿ ಆದೇಶಿಸಿದ ಕ್ರಮಕ್ಕೆ ಕೇಂದ್ರ ಸರ್ಕಾರದ ಪರವಾನಿಗೆ ಇಲ್ಲದಿರುವುದರಿಂದ ಅದನ್ನು ರದ್ಧುಪಡಿಸಬೇಕು’ ಎಂದು ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಕೆಯಾಗಿದೆ. ಈ ಅರ್ಜಿ ವಿಷಯವಾಗಿ ಅರಣ್ಯವಾಸಿಗಳ ಪರ ಕಾನೂನು ಹೋರಾಟ ನಡೆಸಲು ನಿರ್ಧರಿಸಿರುವ ಬಗ್ಗೆ ನ್ಯಾಯವಾದಿ ರವೀಂದ್ರ ನಾಯ್ಕ ಅವರು ಹೇಳಿದ್ದಾರೆ.
ಕುಮಟಾದ ಮಾಸ್ತಿಕಟ್ಟ ದೇವಸ್ಥಾನದಲ್ಲಿ ಅರಣ್ಯವಾಸಿಗಳ ಸಭೆ ನಡೆಸಿದ ಅವರು `ವಾಸ್ತವ್ಯ ಮತ್ತು ಸಾಗುವಳಿಗಾಗಿ ಮೂರು ಎಕರೆಗಿಂತ ಕಡಿಮೆ ಇರುವ ಅರಣ್ಯ ಒತ್ತುದಾರರಿಗಾಗಿ ಸಾಗುವಳಿ ಭದ್ರತೆ ಕೊಡುವ ಉದ್ದೇಶದಿಂದ ರಾಜ್ಯ ಸರ್ಕಾರವು ಮೂರು ಎಕರೆಗಿಂತ ಕಡಿಮೆ ಇರುವ ಒತ್ತುದಾರರನ್ನು ಮುಂದಿನ ಸೂಚನೆವರೆಗೆ ಒಕ್ಕಲೆಬ್ಬಿಸಬಾರದು ಎಂದು ಸೂಚನೆ ಹೊರಡಿಸಿದೆ. ಆದರೆ, ಸಾರ್ವಜಿನಿಕ ಹಿತಾಸಕ್ತಿ ಅರ್ಜಿ ದಾಖಲಾದ ಕಾರಣ ಕೇಂದ್ರ ಸರ್ಕಾರದ ಪರವಾನಿಗೆ ಇಲ್ಲದೇ ಮಾಡಿದಂತ ರಾಜ್ಯ ಸರ್ಕಾರದ ಆದೇಶದದ ಕಾನೂನು ಮೌಲ್ಯತೆಯನ್ನ ನ್ಯಾಯಾಲಯದ ಮೊರೆ ಹೋಗಿದೆ. ಈ ವಿಷಯವಾಗಿ ಅರಣ್ಯವಾಸಿಗಳ ಪರವಾಗಿ ಕಾನೂನು ಹೋರಾಟಕ್ಕೆ ಅನಿವಾರ್ಯ’ ಎಂದರು.
`ಹೋರಾಟಗಾರರ ವೇದಿಕೆಯು ಮುರುಡೇಶ್ವರದಿಂದ ಕಾರವಾರದವರೆಗೆ ಅರಣ್ಯ ಹಕ್ಕು ಕಾಯಿದೆ ಜಾಗೃತೆ ಪಾದಯಾತ್ರೆ ಸಂಘಟಿಸುವ ಹಿನ್ನಲೆಯಲ್ಲಿ ಕಾಗೋಡ ತಿಮ್ಮಪ್ಪ ಅವರ ವಿಶೇಷ ಆಸಕ್ತಿಯಿಂದ ಆ ಆದೇಶ ಪ್ರಕಟವಾಗಿತ್ತು. ಆದರೆ, ಆದೇಶದ ಕಾನೂನಿನ ಮೌಲ್ಯತೆ ಉಚ್ಚ ನ್ಯಾಯಾಲಯದಲ್ಲಿ ಪ್ರಶ್ನಿಸಿಸುತ್ತಿರುವುದು ವಿಷಾಧನೀಯ’ ಎಂದು ಮಂಜುನಾಥ ಮರಾಠಿ ನಾಗೂರು ಅವರು ಆತಂಕದ ಮಾತನಾಡಿದರು.`ಅರಣ್ಯ ಭೂಮಿ ಹಕ್ಕಿಗೆ ಕಾನೂನಾತ್ಮಕ ಹೋರಾಟ ಅನಿವಾರ್ಯ’ ಎಂದು ಮಹೇಶ ನಾಯ್ಕ ಕಾನಕ್ಕಿ ಅವರು ಹೇಳಿದರು. ಮಹೇಂದ್ರ ನಾಯ್ಕ ಕತಗಾಲ, ಸೀತಾರಾಮ ನಾಯ್ಕ ಬುಗುರಿಬೈಲ, ಜಗದೀಶ್ ಹರಿಕಾಂತ್ರ ಶಶಿಕೋಟೆ, ಗಜಾನನ ತಿಮ್ಮ ಪಟಗಾರ ಹೆಗಡೆ ಮಾತನಾಡಿದರು. ಗಣಪತಿ ಮರಾಠಿ, ಯೋಗೇಶ ಗೌಡ, ಶಂಕರ ಗೌಡ ಕಂದವಳ್ಳಿ, ಮುಜಾಫರ್ ಸಂತೆಗುಳಿ, ಯಾಕುಬ್ ಸಾಬ ಬೆಟ್ಕುಳಿ, ಕೃಷ್ಣ ಮುಕ್ರಿ ವನಳ್ಳಿ, ಸುನೀಲ ಹರಿಕಂತ್ರ ಕಿಮಾನಿ, ಶಾಂತಿ ಮುಕ್ರಿ ಬೆಳ್ಳಂಗಿ, ಜಗದೀಶ್ ನಾಯ್ಕ ಹೆಬ್ಬೆöÊಲ್, ರಾಜು ಗೌಡ ಕತಗಾಲ, ಕೆ ಜೆ ಕುರಿಯಾನ್ ಸೊಪ್ಪಿನಹೊಸಳ್ಳಿ, ಸಾರಂಬಿ ಬೆಟ್ಕುಳಿ, ಜ್ಯೋತಿ ಅಂಬಿಗ ಲುಕ್ಕೇರಿ, ವೆಂಕಟರಮಣ ಪಟಗಾರ ಇತರರಿದ್ದರು.