ದಾಂಡೇಲಿ ಗಾಂಧಿನಗರದ ಅಲಿಸಾಬ್ ಸಿದ್ದಿನಾಯ್ಕ ಅವರು ಗಾಂಜಾ ಮಾರಾಟ ಮಾಡುವಾಗ ಸಿಕ್ಕಿ ಬಿದ್ದಿದ್ದಾರೆ. ಪೊಲೀಸರ್ ಅಲಿಸಾಬ್ ಸಿದ್ದಿನಾಯ್ಕ ಅವರನ್ನು ಬಂಧಿಸಿ ನ್ಯಾಯಾಲಯಕ್ಕೆ ಒಪ್ಪಿಸಿದ್ದಾರೆ.
ದಾಂಡೇಲಿ ಗಾಂಧಿನಗರದಲ್ಲಿ ಅಲಿಸಾಬ ರಾಜೇಸಾಬ ಸಿದ್ದಿನಾಯ್ಕ ಅವರು ವಾಸವಾಗಿದ್ದರು. 75 ವರ್ಷದ ಅವರಿಗೆ ದುಡಿಯಲು ಮೈಯಲ್ಲಿ ತ್ರಾಣವಿರಲಿಲ್ಲ. ಹೀಗಾಗಿ ಅಡ್ಡದಾರಿ ಹಿಡಿದ ಅವರು ಯುವಕರನ್ನು ಅಡ್ಡದಾರಿಗೆ ಎಳೆಯುವ ಪ್ರಯತ್ನ ಮಾಡಿದ್ದರು. ದಾಂಡೇಲಿ: ನಗರದ ಟಿ ಆರ ಟಿ ಕ್ರಾಸ್ ವಾಟರ್ ಟ್ಯಾಂಕ ಹತ್ತಿರದ ಗಾಂಜಾ ಮಾರಾಟ ಪ್ರಯತ್ನದಲ್ಲಿದ್ದ ಅಲಿಸಾಬ್ ಪೊಲೀಸರ ಬಲೆಗೆ ಬಿದ್ದರು.
ಮಂಗಳವಾರ ರಾತ್ರಿ 270ಗ್ರಾಂ ತೂಕದ ಗಾಂಜಾ ಹಿಡಿದು ಅಲೆದಾಡುತ್ತಿದ್ದ ಅಲಿಸಾಬ್ ಅವರನ್ನು ನಗರಠಾಣೆ ಪಿಸೈ ಕಿರಣ ಪಾಟೀಲ್ ಅವರು ವಿಚಾರಿಸಿದರು. ಕೈಯಲ್ಲಿದ್ದ ಬ್ಯಾಗ್ ಪರಿಶೀಲಿಸಿದಾಗ ಅದರಲ್ಲಿ ಮಾದಕ ವ್ಯಸನ ಕಾಣಿಸಿದ್ದು, ಗಾಂಜಾ ಮಾರಾಟಕ್ಕೆ ಬಂದಿರುವುದಾಗಿಯೂ ಅಲಿಸಾಬ್ ಒಪ್ಪಿಕೊಂಡರು. 15 ಸಾವಿರ ರೂ ಮೌಲ್ಯದ ಗಾಂಜಾ ಜಪ್ತು ಮಾಡಿದ ಪೊಲೀಸರು ಆರೋಪಿಯನ್ನು ವಶಕ್ಕೆಪಡೆದರು. ಪಿಎಸ್‌ಐ ಅಮೀನ್ ಅತ್ತಾರ ಅವರು ಪ್ರಕರಣ ದಾಖಲಿಸಿ ತನಿಖೆ ನಡೆಸಿದ್ದಾರೆ.