ಯಲ್ಲಾಪುರದ ಉಪಳೇಶ್ವರ ಬಳಿ ನಡೆದ ಅಪಘಾತದಲ್ಲಿ ವ್ಯಕ್ತಿಯೊಬ್ಬರು ಸಾವನಪ್ಪಿದ್ದಾರೆ. ಮುಂಡಗೋಡಿನ ಪ್ರದೀಪ ಎಂಬಾತರು ವೇಗವಾಗಿ ಬೈಕ್ ಓಡಿಸಿದ್ದು ಅಪಘಾತಕ್ಕೆ ಕಾರಣ.
ಮುಂಡಗೋಡಿನ ಕರ್ಲಿ ಬಳಿಯ ಪ್ರದೀಪ (26) ಎಂಬಾತರು ಸೋಮವಾರ ಶಿರಸಿ ಕಡೆ ಹೊರಟಿದ್ದರು. ಅವರು ಹೊರಟ ಬೈಕಿನಲ್ಲಿ ಅದೇ ಭಾಗದ ಮನ್ವತ್ (33) ಎಂಬಾತರು ಕೂತಿದ್ದರು. ಯಲ್ಲಾಪುರದಿಂದ ಶಿರಸಿ ಮಾರ್ಗವಾಗಿ ಹೊರಟ ಬೈಕು ಉಪಳೇಶ್ವರದಿಂದ ಕೊಂಚ ಮುಂದೆ ಅಪಘಾತಕ್ಕೀಡಾಯಿತು. ಮಳಲಗಾವಿನ ಬಳಿ ಬೈಕ್ ಸ್ಕಿಡ್ ಆದ ಪರಿಣಾಮ ಬೈಕಿನಲ್ಲಿದ್ದ ಇಬ್ಬರೂ ರಸ್ತೆ ಬದಿಗೆ ಹಾರಿ ಬಿದ್ದರು.
ಅಪಘಾತದ ತೀವೃತೆಗೆ ಪ್ರದೀಪ ಅವರು ಸ್ಥಳದಲ್ಲಿಯೇ ಸಾವನಪ್ಪಿದರು. ಬೈಕಿನ ಹಿಂಬದಿ ಸವಾರ ಮನ್ವತ್ ಅವರಿಗೂ ಗಂಭೀರವಾಗಿ ಗಾಯವಾಗಿದ್ದು, ಅವರು ಆಸ್ಪತ್ರೆ ಸೇರಿದರು. ಅಪಘಾತ ನೋಡಿದ ಜನ ತಕ್ಷಣ ನೆರವಿಗೆ ಧಾವಿಸಿದರು. ಗಾಯಗೊಂಡವರನ್ನು ಆಸ್ಪತ್ರೆಗೆ ದಾಖಲಿಸುವಲ್ಲಿ ಸಹಕರಿಸಿದರು. ಸದ್ಯ ಮನ್ವಿತ್ ಅವರನ್ನು ಹುಬ್ಬಳ್ಳಿಯ ಕಿಮ್ಸ್’ಗೆ ಕರೆದೊಯ್ಯಲಾಗಿದೆ. ಅವರ ಪರಿಸ್ಥಿತಿಯೂ ಚಿಂತಾಜನಕವಾಗಿದ್ದು, ಮನ್ವಿತ್ ಅವರನ್ನು ಉಳಿಸಿಕೊಳ್ಳಲು ವೈದ್ಯರು ಶ್ರಮಿಸುತ್ತಿದ್ದಾರೆ.