ಕಾರವಾರದ ಸದಾಶಿವಗಡ ತಾರಿವಾಡದ ಮಾರುತಿ ಗಜೀನಕರ್ ಅವರು ತಮ್ಮ 72ನೇ ವಯಸ್ಸಿನಲ್ಲಿ ಮನೆ ನಿರ್ಮಾಣಕ್ಕೆ ಅಡಿಪಾಯ ಹಾಕಿದ್ದು, ಅವರದ್ದೇ ಕುಟುಂಬದ ಸಂಜಯ ಗಜೀನಕರ್ ಅವರು ಅದಕ್ಕೆ ಕಲ್ಲು ಹೊಡೆದಿದ್ದಾರೆ. ಆ ಕಲ್ಲು ಬಾಬನಿ ಗಜೀನಕರ್ ಅವರ ತಲೆಗೆ ತಾಗಿ ಅವರು ಆಸ್ಪತ್ರೆ ಸೇರಿದ್ದಾರೆ.
ಸದಾಶಿವಗಡ ತಾರಿವಾಡಾದಲ್ಲಿ ಮಾರುತಿ ಬಾಬನಿ ಗಜೀನಕರ (72) ಅವರು ವಾಸವಾಗಿದ್ದಾರೆ. ಜೀವನ ಪೂರ್ತಿ ದುಡಿದ ಅವರು ನಿವೃತ್ತಿ ನಂತರ ಮನೆ ನಿರ್ಮಾಣಕ್ಕೆ ಯೋಚಿಸಿದ್ದಾರೆ. ಅದಕ್ಕಾಗಿ ಕುಟುಂಬದಿAದ ತಮ್ಮ ಪಾಲಿಗೆ ಬಂದ ಭೂಮಿಯಲ್ಲಿ ಗುದ್ದಲಿ ಪೂಜೆ ನೆರವೇರಿಸಿದ್ದಾರೆ. ಅದೇ ಭೂಮಿಯಲ್ಲಿ ಅವರ ಕುಟುಂಬದ ಸಂಜಯ ಸುಬ್ರಾಯ ಗಜೀನಕರ ಹಾಗೂ ಅವರ ಸಹೋದರ ಪ್ರಶಾಂತ ಗಜೀನಕರ ಸಹ ಪಾಲುಪಡೆದಿದ್ದಾರೆ. ಆದರೆ, ಸಂಜೀಯ ಗಜನೀಕರ್ ಅವರು ಇದೀಗ ಮಾರುತಿ ಗಜೀನಕರ್ ಅವರ ಮನೆ ನಿರ್ಮಾಣ ಕೆಲಸಕ್ಕೆ ಅಡ್ಡಿಯಾಗಿದ್ದಾರೆ.
ಮರುತಿ ಗಜನಿಕರ್ ಅವರು ಪಾಲಿನ ಜಮೀನಿನಲ್ಲಿ ಮನೆ ನಿರ್ಮಾಣಕ್ಕಾಗಿ ಅಡಿಪಾಯ ಕಾಮಗಾರಿ ಆರಂಭಿಸಿದ್ದು, ಮೇ 11ರ ಮಧ್ಯಾಹ್ನ ಸಂಜಯ ಗಜೀನಕರ ಅವರು ಅಲ್ಲಿಗೆ ಆಗಮಿಸಿ ಕೆಲಸ ನಿಲ್ಲಿಸುವಂತೆ ಸೂಚಿಸಿದ್ದಾರೆ. ಅಲ್ಲಿದ್ದ ಕಾರ್ಮಿಕರಿಗೂ ಬೆದರಿಕೆ ಒಡ್ಡಿದ್ದಾರೆ. ಮಾರುತಿ ಗಜನೀಕರ್ ಅವರು ಈ ಬಗ್ಗೆ ಪ್ರಶ್ನಿಸಿದಾಗ ಕಲ್ಲು ಹೊಡೆದಿದ್ದಾರೆ. ನಂತರ ಬಡಿಗೆಯಿಂದಲೂ ಬಡಿದಿದ್ದಾರೆ. ಗಾಯಗೊಂಡ ಮಾರುತಿ ಗಜನೀಕರ್ ಅವರು ಕಿಮ್ಸ್ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆಪಡೆದಿದ್ದಾರೆ.