ಅಂಕೋಲಾ ಪೂಜಗೇರಿಯ ದಯಾನಂದ ಗಾಂವಕರ, ಸುರೇಶ ಗಾಂವಕರ ಹಾಗೂ ಶ್ರೀಕಾಂತ ಗಾಂವಕರ ಸೇರಿ ಅನುಮತಿಯಿಲ್ಲದೇ ಸರಾಯಿ ವ್ಯಾಪಾರ ಶುರು ಮಾಡಿದ್ದಾರೆ. ಅಂಕೋಲಾ-ಮoಜುಗುಣಿ ರಸ್ತೆಯ ತೆಂಗನಗೇರಿಯಲ್ಲಿ ಅವರು ಸರಾಯಿ ಅಂಗಡಿ ತೆರೆದಿದ್ದು, ಪೊಲೀಸರು ಅವರ ವ್ಯಾಪಾರಕ್ಕೆ ತಡೆ ಒಡ್ಡಿದ್ದಾರೆ.
ದಯಾನಂದ ವೆಂಕಟೇಶ ಗಾಂವಕರ (46), ಸುರೇಶ ಲೋಕಪ್ಪ ಗಾಂವಕರ (65) ಹಾಗೂ ಶ್ರೀಕಾಂತ ರಾಮಾ ಗಾಂವಕರ (61) ಅವರು ಪೂಜಗೇರಿಯ ನಿವಾಸಿಗಳಾಗಿದ್ದಾರೆ. ಅವರು ತೆಂಗಿನಗೇರಿ ಬಳಿ ಗೂಡಗಂಡಿ ನಡೆಸುತ್ತಿದ್ದು, ಆ ಗೂಡಂಗಡಿಯನ್ನೇ ಸರಾಯಿ ಅಡ್ಡೆಯನ್ನಾಗಿ ಪರಿವರ್ತಿಸಿದ್ದಾರೆ. ಅಲ್ಲಿಗೆ ಬರುವ ಜನರಿಗೆ ಸರಾಯಿ ಕೊಟ್ಟು ಉಪಚರಿಸಿ ಅಲ್ಲಿಯೇ ಮದ್ಯ ಸೇವನೆಗೆ ಅವಕಾಶವನ್ನು ಮಾಡಿಕೊಟ್ಟಿದ್ದಾರೆ.
ಮೇ 18ರಂದು ರಾತ್ರಿ ಅಂಗಡಿ ಎದುರಿಗೆ ಸರಾಯಿ ಮಾರಾಟ ಮಾಡುತ್ತಿದ್ದ ಅವರನ್ನು ಪಿಸೈ ಗುರುನಾಥ ಹಾದಿಮನಿ ಅವರು ನೋಡಿದ್ದಾರೆ. ಅಂಗಡಿ ಮೇಲೆ ದಾಳಿ ನಡೆಸಿದ ಪೊಲೀಸರಿಗೆ ವಿವಿಧ ಬ್ರ‍್ಯಾಂಡ್‌ಗಳ ಮದ್ಯದ ತುಂಬಿದ ಹಾಗೂ ಖಾಲಿ ಟೆಟ್ರಾ ಪ್ಯಾಕೆಟ್‌ಗಳು ಸಿಕ್ಕಿದೆ. ಬಗೆ ಬಗೆಯ ಮದ್ಯದ ಬಾಟಲಿಗಳು ಹಾಗೂ ಪ್ಲಾಸ್ಟಿಕ್ ಗ್ಲಾಸ್‌ಗಳನ್ನು ಪೊಲೀಸರು ವಶಕ್ಕೆಪಡೆದು ಮದ್ಯ ಮಾರಾಟಕ್ಕೆ ತಡೆ ಒಡ್ಡಿದ್ದಾರೆ.