ದೆಹಲಿಯಿಂದ ಕೇರಳಕ್ಕೆ ಕಬ್ಬಿಣ ಸಾಗಿಸುತ್ತಿದ್ದ ಲಾರಿ ಯಲ್ಲಾಪುರದ ಅರಬೈಲ್ ಘಟ್ಟದಲ್ಲಿ ಅಪಘಾತಕ್ಕೀಡಾಗಿದೆ. ಲಾರಿ ಕಂದಕಕ್ಕೆ ಬೀಳುವುದನ್ನು ನೋಡಿ ಲಾರಿಯಿಂದ ಹಾರಿದ ಮಾಲಕ ಸ್ಥಳದಲ್ಲಿಯೇ ಸಾವನಪ್ಪಿದ್ದು, ಲಾರಿ ಓಡಿಸುತ್ತಿದ್ದ ಚಾಲಕ ಅಲ್ಲಿಯೇ ಕುಳಿತು ಪ್ರಾಣ ಉಳಿಸಿಕೊಂಡಿದ್ದಾರೆ.
ಹರಿಯಾಣದ ಜಾಲುಲ್ ಜಲಾಲುದ್ಧೀನ್ ಅವರು ಸ್ವಂತ ಲಾರಿ ಹೊಂದಿದ್ದು, ಅದರ ಮೂಲಕ ಸರಕು ಸಾಗಾಣಿಕೆ ಮಾಡುತ್ತಿದ್ದರು. ಆ ಲಾರಿಯಿಂದ ಬಂದ ಆದಾಯದಿಂದಲೇ ಅವರು ಕುಟುಂಬ ನಡೆಸುತ್ತಿದ್ದರು. ಮೇ 14ರಂದು ಅವರ ಲಾರಿ ದೆಹಲಿಯಿಂದ ಕಬ್ಬಿಣದ ಪೈಪು ತುಂಬಿಸಿ ಕೇರಳದ ತಿರುವನಂತಪುರA ಗೆ ಹೊರಟಿತು. ಆ ಲಾರಿಯಲ್ಲಿ ಸ್ವತ: ಜಾಲುಲ್ ಜಲಾಲುದ್ಧೀನ್ ಅವರು ಕೂತಿದ್ದು, ಉತ್ತರ ಪ್ರದೇಶದ ನಜೀರ್ ಮಹಾಜುದ್ದೀನ್ ಲಾರಿ ಓಡಿಸುತ್ತಿದ್ದರು.
ಮೇ 18ರಂದು ಆ ಲಾರಿ ಯಲ್ಲಾಪುರ ತಲುಪಿತು. ಸಂಜೆ ಅಂಕೋಲಾ ಕಡೆ ಸಾಗಿದ್ದು, ಅರಬೈಲ್ ಘಟ್ಟದ ಬಳಿ ಅಪಘಾತಕ್ಕೀಡಾಯಿತು. ಎದುರಿನಿಂದ ಬಂದ ವಾಹನ ತಪ್ಪಿಸಲು ಹೋಗಿ ಲಾರಿ ಕಂದಕಕ್ಕೆ ಹಾರಿತು. ಅಪಘಾತದ ವೇಳೆ ಆತುರಕ್ಕೆ ಬಿದ್ದ ಲಾರಿ ಮಾಲಕ ಜಾವೇದ್ ಅವರು ತಕ್ಷಣ ಲಾರಿಯಿಂದ ಹಾರಿದರು. ಪರಿಣಾಮ ಸೊಂಟಕ್ಕೆ ಭಾರೀ ಪ್ರಮಾಣದಲ್ಲಿ ನೋವಾಗಿ ಅವರು ಅಲ್ಲಿಯೇ ಸಾವನಪ್ಪಿದರು.
ಲಾರಿ ಓಡಿಸುತ್ತಿದ್ದ ನಜೀರ್ ಮಹಾಜುದ್ದೀನ್ ಅವರಿಗೆ ಅಪಘಾತದಲ್ಲಿ ಗಾಯವಾಗಿದ್ದರೂ ಅವರು ಸಾವು ಗೆದ್ದು ಬಂದರು. ಅಪಘಾತದ ಬಗ್ಗೆ ಜಾವೇದ್ ಅವರ ಸಂಬAಧಿ ಜಾಹುಲ್ ಹಕ್ ಅವರಿಗೆ ನಜೀರ್ ಅವರೇ ಫೋನ್ ಮಾಡಿ ವಿಷಯ ಮುಟ್ಟಿಸಿದರು. ಅಪಘಾತದ ಸುದ್ದಿ ಕೇಳಿ ಜಾಹುಲ್ ಹಕ್ ಯಲ್ಲಾಪುರಕ್ಕೆ ಆಗಮಿಸಿದ್ದು, ಅಪಘಾತಕ್ಕೆ ಕಾರಣರಾದ ನಜೀರ್ ವಿರುದ್ಧ ಪೊಲೀಸ್ ದೂರು ನೀಡಿದರು. ನಂತರ ಸಂಬAಧಿಯ ಶವವನ್ನುಪಡೆದರು.