ಅಮೃತ 2.0 ಯೋಜನೆ ಕೆಲಸಕ್ಕೆ ಸಿದಾಪುರಕ್ಕೆ ಬಂದಿದ್ದ ಕಾರ್ಮಿಕರೊಬ್ಬರು ತಂದೆ-ತಾಯಿ ನೆನಪಿನಲ್ಲಿ ಪ್ರಾಣತ್ಯಾಗ ಮಾಡಿದ್ದಾರೆ. ಊರಿಗೆ ಮರಳಲು ಸಾಧ್ಯವಾಗದ ಕಾರಣ ಅವರು ಸಾವಿಗೆ ಶರಣಾಗಿದ್ದಾರೆ.
ಸಿದ್ದಾಪುರ ತಾಲೂಕಿನ ಅಕ್ಕುಂಜಿ ಗ್ರಾಮದಲ್ಲಿ ಅಮೃತ 2.0 ನೀರು ಸರಬರಾಜು ಕಾಮಗಾರಿ ನಡೆಯುತ್ತಿದೆ. ಈ ಕೆಲಸಕ್ಕಾಗಿ ಬಿಹಾರ ಮೂಲದ ಕೂಲಿ ಕಾರ್ಮಿಕ ಕಲ್ಲು ಸತನ ಮಾಂಜಿ ಅವರನ್ನು ಕರೆಯಿಸಲಾಗಿದೆ. ಆದರೆ, 19 ವರ್ಷದ ಕಲ್ಲು ಮಾಂಜಿ ಅವರಿಗೆ ಅಲ್ಲಿ ಕೆಲಸ ಮಾಡಲು ಇಷ್ಟವಿರಲಿಲ್ಲ. `ಊರಿಗೆ ಹೋಗಬೇಕು. ತಂದೆ-ತಾಯಿ ನೋಡಬೇಕು’ ಎಂದುಕೊAಡರೂ ಅದು ಸಾಧ್ಯವಾಗಿರಲಿಲ್ಲ.
ಕಳೆದ ನಾಲ್ಕು ತಿಂಗಳ ಹಿಂದೆ ಬಿಹಾರದಿಂದ ಬಂದಿದ್ದ ಕಲ್ಲು ಮಾಂಜಿ ತನ್ನ ತಂದೆ-ತಾಯಿಯನ್ನು ಬಿಟ್ಟಿರಲಾರದೇ ಮಾನಸಿಕವಾಗಿ ಕುಗ್ಗಿದ್ದು, ಊರಿಗೆ ಹೋಗಬೇಕು ಎಂದು ಹಠ ಹಿಡಿದಿದ್ದರು. ಆದರೆ, ಜೊತೆಗಿದ್ದವರು `ಇನ್ನೊಂದು ವಾರದಲ್ಲಿ ಎಲ್ಲರೂ ಒಟ್ಟಿಗೆ ಊರಿಗೆ ಹೋಗೋಣ’ ಎಂದು ಬುದ್ಧಿವಾದ ಹೇಳಿದ್ದರು. ಪಾಲಕರಿಂದ ದೂರವಿದ್ದ ಕಲ್ಲು ಕುಂಜಿ ಸರಾಯಿ ಸೇವನೆ ಶುರು ಮಾಡಿದ್ದು, ಅದಾಗಿಯೂ ತಂದೆ-ತಾಯಿ ನೆನಪಾದ ಹಿನ್ನಲೆ ಆತ್ಮಹತ್ಯೆಯ ನಿರ್ಧಾರ ಮಾಡಿದ್ದಾರೆ.
ಮೇ 18ರಂದು ಅರಣ್ಯ ಪ್ರದೇಶದಲ್ಲಿ ಕಲ್ಲು ಕುಂಜಿ ನೇಣಿಗೆ ಶರಣಾದ ಸ್ಥಿತಿಯಲ್ಲಿ ಸಿಕ್ಕಿದ್ದಾರೆ. ಮೇ 16ರಂದೇ ಅವರು ಸಾವನಪ್ಪಿದ ಅನುಮಾನವಿದೆ. ಈ ಬಗ್ಗೆ ಅಜಯ ಮಾಂಜಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.