ಶಿರಸಿಯಲ್ಲಿ ಕೆಲಸ ಮಾಡುವ ಮುಂಡಗೋಡಿನ ಸರ್ಕಾರಿ ಸಿಬ್ಬಂದಿಗೆ ನಾಲ್ವರು ಸೇರಿ ಬೆದರಿಸಿದ್ದಾರೆ. ಆ ನಾಲ್ವರು ವಿವಿಧ ಕಾಮಗಾರಿಗಳ ಮಾಹಿತಿ ಕೇಳಿದ್ದು, ಅದನ್ನು ನೀಡದ ಕಾರಣ ಹೆದರಿಸಿದ್ದಾರೆ.
ಶಿರಸಿಯ ಬನವಾಸಿ ರಸ್ತೆಯಲ್ಲಿ ಕರ್ನಾಟಕ ಗ್ರಾಮೀಣ ಮೂಲಸೌಕರ್ಯ ಅಭಿವೃದ್ಧಿ ನಿಯಮಿತ ಕಚೇರಿಯಿದೆ. ಅಲ್ಲಿ ಮುಂಡಗೋಡು ಮಳಗಿಯ ಪುನೀತ ಮಂಜುನಾಥ ಭರತನಳ್ಳಿ ಅವರು ಕೆಲಸ ಮಾಡುತ್ತಿದ್ದಾರೆ. ಪುನೀತ ಭರತನಳ್ಳಿ ಅವರು ಅಲ್ಲಿ ಪ್ರಥಮ ದರ್ಜೆ ಸಹಾಯಕರಾಗಿದ್ದಾರೆ. ಹೀಗಿರುವಾಗ ಬೆಳಗಾವಿಯ ಗುತ್ತಿಗೆದಾರ ಸಂಗಮೇಶ್ವರ ಮಹಾಬಲೇಶ್ವರ ಕಟ್ಟಿ ಅವರುಸವದತ್ತಿ, ತೀರ್ಥಹಳ್ಳಿ, ಶಿವಮೊಗ್ಗ, ಹಾವೇರಿ, ಹಾಸನ, ತುಮಕೂರು, ಸಾಗರ, ಚಿಕ್ಕೋಡಿ, ಬೆಳಗಾವಿ, ಕೊಪ್ಪಳ, ಬೆಂಗಳೂರು ಹಾಗೂ ದಾವಣಗೆರೆ ವಿಭಾಗಗಳ ಬಿ ಸಿ ಎಂ ಹಾಸ್ಟೇಲ್‌ಗಳ ದುರಸ್ಥಿ ಮತ್ತು ನವೀಕರಣ ಕಾಮಗಾರಿ ಕೆಲಸಪಡೆದಿದ್ದಾರೆ. ಈ ಬಗ್ಗೆ ವಿವಿಧ ಮಾಹಿತಿ ಕೋರಿ ಸಂಗಮೇಶ್ವರ ಕಟ್ಟಿ ಅವರು ಕಚೇರಿಗೆ ಬಂದಿದ್ದಾರೆ.
ಆದರೆ, ಸಂಗಮೇಶ್ವರ ಕಟ್ಟಿ ಅವರಿಗೆ ಆ ಮಾಹಿತಿ ಸಿಕ್ಕಿಲ್ಲ. ಹೀಗಾಗಿ ಮೇ 1ರಂದು ಸಂಗಮೇಶ್ವರ ಕಟ್ಟಿ ಅವರು ಪುನೀತ ಭರತನಳ್ಳಿ ಅವರು ವಾಸವಾಗಿರುವ ಮನೆ ಬಳಿ ಹೋಗಿದ್ದಾರೆ. ಅಲ್ಲಿಯೂ ಮಾಹಿತಿ ಸಿಗದ ಕಾರಣ ಅವರಿಗೆ ಕೆಟ್ಟದಾಗಿ ನಿಂದಿಸಿ ಮರಳಿದ್ದಾರೆ. ಅದಾದ ನಂತರವೂ ವಿವಿಧ ಬಿಲ್ ಒದಗಿಸದೇ ಇದ್ದರೆ ಬ್ಲಾಕ್‌ಮೇಲ್ ಮಾಡುವೆ ಎಂದು ಹೆದರಿಸಿದ್ದಾರೆ. ಇದಾದ ಬಳಿಕ ಮೇ 18ರಂದು ಮಧ್ಯಾಹ್ನ ಸಂಗಮೇಶ್ವರ ಕಟ್ಟಿ ಅವರು ಕಚೇರಿಯಲ್ಲಿ ಪುನೀತ ಭರತನಳ್ಳಿ ಅವರು ಇಲ್ಲದಿರುವಾಗ ಅಲ್ಲಿಗೆ ಹೋಗಿದ್ದಾರೆ. ಈ ವೇಳೆ ಅಸಭ್ಯ ವರ್ತನೆ ತೋರಿದ್ದು, ಸಹದ್ಯೋಗಿಗಳ ಮೂಲಕ ಪುನೀತ ಭರತನಳ್ಳಿ ಅವರಿಗೆ ಬೆದರಿಕೆ ಹಾಕಿದ್ದಾರೆ.