ಭಟ್ಕಳ ಪುರವರ್ಗದ ಬೀಬಿ ಇನ್ಸಿಯಾ ಅವರ ಮನೆಗೆ ನುಗ್ಗಿ 3.49 ಲಕ್ಷ ರೂ ಮೌಲ್ಯದ ಚಿನ್ನಾಭರಣ ಕದ್ದ ಕಳ್ಳರು ಎಂಟು ತಾಸಿನೊಳಗೆ ಸಿಕ್ಕಿ ಬಿದ್ದಿದ್ದಾರೆ.
ಭಟ್ಕಳ ಪುರವರ್ಗದ ಗಣೇಶನಗರ ಬಳಿಯ ಬೀಬಿ ಇನ್ಸಿಯಾ ಅವರ ಮನೆಯಲ್ಲಿ ಕಳ್ಳತನ ನಡೆದಿತ್ತು. ಮೇ 20ರಂದು ಕಳ್ಳತನ ನಡೆದಿರುವುದು ಅವರ ಗಮನಕ್ಕೆ ಬಂದಿತ್ತು. ಬೀಗ ಮುರಿದು ಮನೆಯೊಳಗೆ ನುಗ್ಗಿದ ಕಳ್ಳರು ಕಪಾಟಿನಲ್ಲಿದ್ದ 10 ಗ್ರಾಂ ತೂಕದ ಒಂದು ಬಂಗಾರದ ನೆಕ್ಲೆಸ್, 14 ಗ್ರಾಂ ತೂಕದ ಎರಡು ಕಿವಿಯೋಲೆಗಳು ಸೇರಿ 24 ಗ್ರಾಂ ಚಿನ್ನದ ಆಭರಣ ದೋಚಿದ್ದರು. ಜೊತೆಗೆ ಮನೆಯಲ್ಲಿದ್ದ 37 ಸಾವಿರ ರೂ ಹಣವನ್ನು ಕದ್ದಿದ್ದರು.
ಕಳ್ಳತನದ ಬಗ್ಗೆ ಬೀಬಿ ಇನ್ಸಿಯಾ ಅವರು ಪೊಲೀಸ್ ದೂರು ನೀಡಿದ್ದು, ಕಳ್ಳರ ಶೋಧ ನಡೆಸಿದ ಪೊಲೀಸರು 8 ತಾಸಿನ ಒಳಗೆ ಕಳ್ಳರಿಬ್ಬರನ್ನು ಬಂಧಿಸಿದರು. ಭಟ್ಕಳ ಪುರವರ್ಗ ಗಣೇಶನಗರದ ಮಹಮದ್ ರಾಹೀಲ್ ಮಹಮದ್ ರೀಬಾ ಸಾಬ್ ನೌಶಾದ್ ಮುಕ್ತಾರ್ ಅಹಮದ್ ಹಂಚಿ ಕಳ್ಳತನ ಮಾಡಿದನ್ನು ಒಪ್ಪಿಕೊಂಡಿದ್ದು, 17 ಗ್ರಾಂ ಚಿನ್ನಾಭರಣವನ್ನು ಪೊಲೀಸರಿಗೆ ಒಪ್ಪಿಸಿದರು. ಅದರ ಜೊತೆ 22860ರೂ ಹಣವನ್ನು ಮರಳಿಸಿದರು. ಅವರಿಬ್ಬರನ್ನು ಪೊಲೀಸರು ನ್ಯಾಯಾಲಯಕ್ಕೆ ಒಪ್ಪಿಸಿದರು.
ಪೊಲೀಸ್ ಅಧೀಕ್ಷಕ ದೀಪನ್ ಎಂ ಎನ್, ಹೆಚ್ಚುವರಿ ಪೊಲೀಸ್ ಅಧೀಕ್ಷಕ ಎಂ ಕೃಷ್ಣಮೂರ್ತಿ, ಡಿವೈಎಸ್ಪಿ ಗಿರೀಶ ಬಿ ಅವರ ಜೊತೆ ಪಿಐ ದಿವಾಕರ್ ಪಿ ಎಂ, ಪಿಸೈ ನವೀನ್ ನಾಯ್ಕ, ಸಿಬ್ಬಂದಿ ದಿನೇಶ ನಾಯಕ, ಸತೀಶ ಭಟ್ಟ, ರವಿ ಪಟಗಾರ, ಜಗದೀಶ ನಾಯ್ಕ, ಕಿರಣ ಪಾಟೀಲ, ಕಾಶಿನಾಥ ಕೋಟಗುಣಿ, ಮಲ್ಲಿಕಾರ್ಜುನ ಉಟಗಿ, ವಿದ್ಯಾ ಆಚಾರಿ ಅವರು ಈ ಕಾರ್ಯಾಚರಣೆಯಲ್ಲಿದ್ದರು.