ಶಿರಸಿಯ ಸಾಲ್ಕಣಿಯಿಂದ ಜಡ್ಡಿಗದ್ದೆ ಹೋಗುವ ರಸ್ತೆ ಅಂಚಿನಲ್ಲಿ ಎಂಟು ಜನ ಗುಂಪು ಕಟ್ಟಿಕೊಂಡಿದ್ದು, ಪಿಸೈ ಸಂತೋಷಕುಮಾರ್ ಎಂ ಅವರು ಆ ಗುಂಪನ್ನು ಚದುರಿಸಿದ್ದಾರೆ. ಈ ವೇಳೆ ಆ ಎಂಟು ಜನ ಹಣ ಹೂಡಿ ಅಂದರ್ ಬಾಹರ್ ಆಟವಾಡುತ್ತಿರುವುದು ಗಮನಕ್ಕೆ ಬಂದಿದೆ.
ಮೇ 21ರ ರಾತ್ರಿ 12 ಗಂಟೆ ವೇಳೆಗೆ ಸಾಲ್ಕಣಿಯಿಂದ ಜಡ್ಡಿಗದ್ದೆ ಬದಿಯ ಕಾಡಿನಲ್ಲಿ ಹಾಸಣಗಿ ಬಳಿಯ ಕಡಬಾಳದ ಕೃಷಿಕ ಮಂಜುನಾಥ ದೇವು ಗೌಡ ಅವರು ಜನರನ್ನು ಸೇರಿಸಿದ್ದರು. ಅದೇ ಊರಿನಲ್ಲಿ ಕೂಲಿ ಕೆಲಸ ಮಾಡುವ ಯಂಕು ತಿಮ್ಮಾ ಗೌಡ, ಅರ್ಜುನ ಕೇಶವ ಗೌಡ, ಮಂಜುನಾಥ ಕೃಷ್ಣೇ ಗೌಡ, ದೇವನಳ್ಳಿಯ ಕೇಶವ ಬೀರಾ ಗೌಡ,
ಹುಣಸೆಕೊಪ್ಪ ಕುಂಟೆಮನೆಯ ಯೋಗೇಶ ಸೀತಾರಾಮ ಗೌಡ ಅವರ ಜೊತೆ ಹಾಸಣಗಿಯ ಮಂಜುನಾಥ ನೇತ್ರಾವತಿ ಗೌಡ ಹಾಗೂ ರಾಘವೇಂದ್ರ ಮಂಜುನಾಥ ಗೌಡ ಅವರು ಅಲ್ಲಿ ಧಾವಿಸಿ ಬಂದಿದ್ದರು. ಅವರೆಲ್ಲರೂ ಸೇರಿ ರಾತ್ರಿಯಿಡೀ ಅಲ್ಲಿ ಹಣ ಹೂಡಿಕೆಯ ಆಟವಾಡುತ್ತಿದ್ದರು.
ಪ್ಲಾಸ್ಟಿಕ್ ತಾಡಪತ್ರೆ ಹಾಸಿ ಅದರ ಮೇಲೆ ಕುಳಿತ ಈ ಎಂಟು ಜನ ಚಿಮ್ಮಣಿ ಬೆಳಕಿನಲ್ಲಿ ಅಂದರ್ ಬಾಹರ್ ಆಟ ಶುರು ಮಾಡಿದ್ದರು. ಎಂಟು ಸಾವಿರ ರೂ ಹಣವನ್ನು ಹರಡಿಕೊಂಡಿದ್ದರು. ಅದೇ ಮಾರ್ಗವಾಗಿ ಹೋಗಿದ್ದ ಶಿರಸಿ ಗ್ರಾಮೀಣ ಠಾಣೆ ಪಿಸೈ ಸಂತೋಷಕುಮಾರ್ ಎಂ ಅವರು ಆ ಗುಂಪಿನ ಬಳಿ ಹೋದರು. ಚಿಮಣಿ ಬೆಳಕಿನಲ್ಲಿ ಅವರೆಲ್ಲರೂ ಅಂದರ್ ಬಾಹರ್ ಆಡುತ್ತಿರುವುದನ್ನು ಗಮನಿಸಿದರು. ತಮ್ಮ ಸಿಬ್ಬಂದಿ ಜೊತೆ ದಾಳಿ ಮಾಡಿ ಅವರೆಲ್ಲರನ್ನು ಬಂಧಿಸಿದರು.
`ಇಸ್ಪಿಟ್ ಆಡಬೇಡಿ. ಬದುಕು ಹಾಳು ಮಾಡಿಕೊಳ್ಳಬೇಡಿ’