ಕಂಠಪೂರ್ತಿ ಸರಾಯಿ ಕುಡಿದ ವ್ಯಕ್ತಿಯೊಬ್ಬ ಆತನ ಮಗಳ ಮೇಲೆ ಅತ್ಯಾಚಾರವೆಸಗಿದ್ದು, ಅಂಕೋಲಾ ಪೊಲೀಸರು ಪಾಪಿ ತಂದೆಯನ್ನು ಬಂಧಿಸಿದ್ದಾರೆ. ಅತ್ಯಾಚಾರಕ್ಕೆ ಒಳಗಾದ 13 ವರ್ಷದ ಬಾಲಕಿ ಅಸ್ವಸ್ಥರಾಗಿದ್ದು, ಆಕೆಯ ಆರೈಕೆ ಮುಂದುವರೆದಿದೆ.
ಕೇರಳ ಮೂಲದ ರವಿ ರಾಮ ಕಲ್ಕತ್ತು ಎಂಬಾತರು ಭಟ್ಕಳ ಶಿರಾಲಿಯ ಮಹಿಳೆಯೊಬ್ಬರನ್ನು ಮದುವೆ ಆಗಿದ್ದರು. ಈ ದಂಪತಿ ಅಂಕೋಲಾದ ಹೊಸಗದ್ದೆಯಲ್ಲಿ ವಾಸವಾಗಿದ್ದರು. ಆ ದಂಪತಿಗೆ ಹೆಣ್ಣು ಮಗುವಿದ್ದು, ಆ ಮಗು 13 ವರ್ಷದ ಪ್ರಾಯದಲ್ಲಿತ್ತು. ನಾಲ್ಕು ದಿನದ ಹಿಂದೆ ತನ್ನದೇ ಮಗುವಿನ ಮೇಲೆ ರವಿ ರಾಮ ಕಲ್ಕತ್ತು ಕಾಮದೃಷ್ಠಿ ಹಾಯಿಸಿದ್ದಾರೆ. ಒಂದೇ ದಿನ ಐದು ಬಾರಿ ಮಗಳ ಮೇಲೆ ಅತ್ಯಾಚಾರ ಮಾಡಿದ್ದಾರೆ.
ಆರೋಪಿ ರವಿ ರಾಮ ಕಲ್ಕತ್ತು ಅವರ ಪತ್ನಿ ಸಹ ವ್ಯಸನಿಯಾಗಿದ್ದಾರೆ. ಹೀಗಾಗಿ ಮಗಳ ಮೇಲೆ ಆಕೆಯ ತಂದೆಯಿAದಲೇ ಅತ್ಯಾಚಾರ ನಡೆದಿದ್ದರೂ ಆ ವಿಷಯ ಮೊದಲು ತಾಯಿಯ ಗಮನಕ್ಕೆ ಬಂದಿಲ್ಲ. ಅಸ್ವಸ್ಥಳಾದ ಮಗು ತನ್ನ ನೋವನ್ನು ಪಕ್ಕದ ಮನೆಯವರಲ್ಲಿ ಹೇಳಿದಾಗ ಈ ವಿಷಯ ಹೊರ ಬಿದ್ದಿದೆ. ಅದಾಗಲೇ ಅತ್ಯಾಚಾರ ನಡೆದು ನಾಲ್ಕು ದಿನಗಳಾಗಿದ್ದು, ವಿಷಯ ಅರಿತ ಪೊಲೀಸರು ವಿಚಾರಣೆ ನಡೆಸಿದ್ದಾರೆ. ಮಗುವಿನ ತಾಯಿಯನ್ನು ವಿವಿಧ ಬಗೆಯಲ್ಲಿ ವಿಚಾರಣೆಗೆ ಒಳಪಡಿಸಿದಾಗ ಸತ್ಯ ಹೊರ ಬಿದ್ದಿದೆ. ಮಗಳ ಮೇಲೆ ಕ್ರೌರ್ಯ ಮೆರೆದ ರವಿ ರಾಮ ಕಲ್ಕತ್ತು ಮೇಲೆ ಪೊಲೀಸರು ಕಾನೂನು ಕ್ರಮ ಜರುಗಿಸಿದ್ದಾರೆ.