ಮದುವೆಗೆ ಒಪ್ಪದ ರಂಜಿತಾ: ಚಾಕು ಚುಚ್ಚಿದ ರಫೀಕ!
January 3, 2026
ಸಂತೆಯೂ ಇಲ್ಲ.. ಸಾಮಗ್ರಿಯೂ ಸಿಗಲ್ಲ: ಭಾನುವಾರ ಯಲ್ಲಾಪುರ ಬಂದ್!
January 3, 2026
ರಂಜಿತಾ ಕೊಂದ ರಫೀಕ್ ಇನ್ನಿಲ್ಲ!
January 4, 2026
ಕೆಲ ದಿನದ ಹಿಂದೆ ಸಿಇಟಿ ಪರೀಕ್ಷೆ ಬರೆಯಲು ತೆರಳಿದ ವಿದ್ಯಾರ್ಥಿಯೊಬ್ಬರ ಜನಿವಾರ ಕತ್ತರಿಸಿದ ಕ್ರಮವನ್ನು ಸ್ವರ್ಣವಲ್ಲಿಯ ಶ್ರೀ ಗಂಗಾಧರೇoದ್ರ ಸರಸ್ವತಿ ಸ್ವಾಮೀಜಿ ಖಂಡಿಸಿದ್ದಾರೆ. `ಜನಿವಾರ ತುಂಡರಿಸಬಹುದು.. ಆದರೆ, ಸಂಸ್ಕಾರ ತುಂಡರಿಸಲು ಸಾಧ್ಯವಿಲ್ಲ’ ಎಂದವರು ಹೇಳಿದ್ದಾರೆ.
ಅಖಿಲ ಹವ್ಯಕ ಮಹಾಸಭಾ ಆಶ್ರಯದಲ್ಲಿ ಯಲ್ಲಾಪುರದ ಕಾರ್ಮಿಕ ಭವನದಲ್ಲಿ ನಡೆದ `ಸಂಸ್ಕಾರೋತ್ಸವ’ ಕಾರ್ಯಕ್ರಮದಲ್ಲಿ ಮಾತನಾಡಿದ ಶ್ರೀಗಳು `ಬ್ರಾಹ್ಮಣರು ಮಾತ್ರ ಜನಿವಾರ ಧರಿಸುವುದಿಲ್ಲ. ಬ್ರಾಹ್ಮಣರಿಗಿಂತಲೂ ಬೇರೆ ಬೇರೆ ಸಮುದಾಯದವರೇ ಹೆಚ್ಚಿನ ಸಂಖ್ಯೆಯಲ್ಲಿ ಜನಿವಾರ ಧರಿಸುತ್ತಿದ್ದು, ಅಂಥ ಜನಿವಾರ ಕತ್ತರಿಸುವ ಕ್ರಮ ಸರಿಯಲ್ಲ’ ಎಂದು ಹೇಳಿದ್ದಾರೆ. `ಸಂಸ್ಕಾರದಲ್ಲಿಯೇ ಬ್ರಾಹ್ಮಣರದ ಶ್ರೇಷ್ಠತೆಯಿದೆ. ಬ್ರಾಹ್ಮಣ ಸಂಸ್ಕಾರಗಳಿಗೆ ತನ್ನದೇ ಆದ ಮಹತ್ವವಿದ್ದು, ಹುಟ್ಟುವ ಮೊದಲೇ ಬೆಳೆದು ಬಂದ ಸಂಸ್ಕಾರವನ್ನು ತುಂಡರಿಸಲು ಸಾಧ್ಯವಿಲ್ಲ’ ಎಂದು ಹೇಳಿದರು.
`ಈಚೆಗೆ ಪರೀಕ್ಷೆಗೆ ಕುಳಿತ ಬ್ರಾಹ್ಮಣ ವಿದ್ಯಾರ್ಥಿಯ ಜನಿವಾರ ಕೊಯ್ದರು. ಜನಿವಾರ ಕೊಯ್ದ ಮಾತ್ರಕ್ಕೆ ವಿದ್ಯಾರ್ಥಿಯ ಸಂಸ್ಕಾರ ಎಂದಿಗೂ ಹೋಗುವುದಿಲ್ಲ. ಸಂಸ್ಕಾರ ಎಂಬುದು ಜೀವಕ್ಕೆ ಸಂಬoಧಿಸಿದ್ದಾಗಿದ್ದು, ಒಂದು ಜನಿವಾರ ಕೊಯ್ದರೆ ಮತ್ತೊಂದು ಹಾಕಲು ಅವಕಾಶವಿದೆ’ ಎಂದರು. `ಬ್ರಾಹ್ಮಣರು ಮಾತ್ರ ಜನಿವಾರ ಹಾಕುವುದಿಲ್ಲ. ಕ್ಷತ್ರಿಯ, ವೈಶ್ಯ ಸೇರಿ ಲಿಂಗಾಯತರು ಜನಿವಾರ ಹಾಕುತ್ತಾರೆ. ಬ್ರಾಹ್ಮಣರಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಅವರು ಜನಿವಾರ ಧರಿಸುತ್ತಿದ್ದು, ಜನಿವಾರ ಕೊಯ್ದು ಅಪಮಾನ ಮಾಡಲು ಉದ್ದೇಶಿಸಿದ್ದರೆ ಅದು ಎಲ್ಲರಿಗೂ ಮಾಡಿದ ಅಪಮಾನದ ಹಾಗೇ’ ಎಂದು ಅಭಿಪ್ರಾಯಪಟ್ಟರು. `ನಮ್ಮದು ಧಾರ್ಮಿಕ ಸ್ವಾತಂತ್ರö್ಯವಿರುವ ದೇಶ. ಪ್ರತಿಯೊಬ್ಬರಿಗೂ ಕಾನೂನು ಪ್ರಕಾರವೇ ಧರ್ಮ ಆಚರಣೆಗೆ ಅವಕಾಶವಿದೆ. ಹೀಗಿರುವಾಗ ವೈಯಕ್ತಿಕ ವಿಷಯದಲ್ಲಿ ಸರ್ಕಾರಗಳು ಕೈ ಹಾಕಬಾರದು. ಮುಂದಿನ ಸರ್ಕಾರ ಈ ರೀತಿ ಆಗದ ಹಾಗೇ ಕ್ರಮ ಜರುಗಿಸಬೇಕು’ ಎಂದು ಆಗ್ರಹಿಸಿದರು.
You cannot copy content of this page