ಮದುವೆಗೆ ಒಪ್ಪದ ರಂಜಿತಾ: ಚಾಕು ಚುಚ್ಚಿದ ರಫೀಕ!
January 3, 2026
ಸಂತೆಯೂ ಇಲ್ಲ.. ಸಾಮಗ್ರಿಯೂ ಸಿಗಲ್ಲ: ಭಾನುವಾರ ಯಲ್ಲಾಪುರ ಬಂದ್!
January 3, 2026
ರಂಜಿತಾ ಕೊಂದ ರಫೀಕ್ ಇನ್ನಿಲ್ಲ!
January 4, 2026
ಶಿರಸಿಯಲ್ಲಿ ಸುರಿದ ಮಳೆಗೆ ಗಣೇಶನಗರದ ಎರಡನೇ ವಾರ್ಡಿನ ಐದನೆಯ ತಿರುವಿನ ರಸ್ತೆ ಕುಸಿದಿದೆ. ಮಳೆಯ ನೀರು ರಸ್ತೆ ಮೇಲೆ ಹರಿದಿದ್ದು, ರಸ್ತೆ ಕೊಚ್ಚಿ ಹೋಗಿದೆ. ಇಲ್ಲಿನ ತಡೆಗೋಡೆಯೂ ಕುಸಿಯುವ ಆತಂಕ ಎದುರಾಗಿದೆ.
ಈ ಭಾಗದ ನಿವಾಸಿಗಳು ಹಲವು ವರ್ಷಗಳಿಂದ ಸರಿಯಾದ ರಸ್ತೆ ಹಾಗೂ ಗಟಾರ ವ್ಯವಸ್ಥೆ ಇಲ್ಲದೇ ತೊಂದರೆ ಅನುಭವಿಸುತ್ತಿದ್ದರು. ಕೆಲ ತಿಂಗಳ ಹಿಂದೆ ಶಾಸಕ ಭೀಮಣ್ಣ ನಾಯ್ಕ ಸ್ಥಳಕ್ಕೆ ಭೇಟಿ ನೀಡಿ ಅಲ್ಲಿನ ದುಸ್ಥಿತಿ ಪರಿಶೀಲಿಸಿದ್ದರು. ಅದಾದ ನಂತರ ರಸ್ತೆ, ಗಟಾರ ಹಾಗೂ ತಡೆಗೋಡೆ ನಿರ್ಮಾಣಕ್ಕೆ ನಗರಸಭೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದರು. ಅದರಂತೆ ಮೊದಲ ಹಂತದಲ್ಲಿ ತಡೆಗೋಡೆ ನಿರ್ಮಿಸಿ ರಸ್ತೆ ಮೇಲೆ ಮಣ್ಣು ಹಾಕಲಾಗಿತ್ತು. ಆದರೆ, ಕಳಪೆ ಕಾಮಗಾರಿ ಕಾರಣ ಸುರಿದ ಮಳೆಗೆ ರಸ್ತೆ ಕುಸಿದಿದೆ.
ಶನಿವಾರ ರಾತ್ರಿ ಸುರಿದ ಮಳೆಗೆ ಈ ಅವಾಂತರ ನಡೆದಿದೆ. ಗಟಾರ ವ್ಯವಸ್ಥೆ ಇಲ್ಲದ ಕಾರಣ ಮಳೆ ನೀರು ರಸ್ತೆ ಮೇಲೆ ಸಂಚರಿಸಿದ್ದು, ಜನ ಆತಂಕವ್ಯಕ್ತಪಡಿಸಿದ್ದಾರೆ. ರಸ್ತೆ ಅಂಚಿನಲ್ಲಿದ್ದ ಓಮಿನಿಯೊಂದು ಮಣ್ಣಿನಲ್ಲಿ ಸಿಲುಕಿದ್ದು, ಮಳೆ ಮುಂದುವರಿದರೆ ತಡೆಗೋಡೆ ಸಂಪೂರ್ಣ ಕುಸಿದು ಸಮೀಪದ ಏಳೆಂಟು ಮನೆಗಳಿಗೆ ಹಾನಿಯಾಗುವ ಸಾಧ್ಯತೆಗಳಿವೆ. ಸದ್ಯ ರಸ್ತೆ ಕುಸಿತದಿಂದ ಕೆಲವು ನಿವಾಸಿಗಳು ಮನೆಯಿಂದ ಹೊರಬರಲೂ ಸಾಧ್ಯವಾಗದ ಸಮಸ್ಯೆಯಲ್ಲಿದ್ದಾರೆ.
You cannot copy content of this page