ಹೃದಯ ರೋಗಕ್ಕೆ ಒಳಗಾಗಿದ್ದ ಹಳಿಯಾಳದ ಮಹಿಳೆಯೊಬ್ಬರು ನೇಣಿಗೆ ಶರಣಾಗಿದ್ದಾರೆ. ರೋಗವನ್ನು ಎದುರಿಸಲು ಧೈರ್ಯ ಸಾಲದೇ ಅವರು ಸಾವನಪ್ಪಿದ್ದಾರೆ.
ಹಳಿಯಾಳದ ಮುರ್ಕುವಾಡದಲ್ಲಿ ಹೀನಾಕೌಸರ್ ಮಹಮದ್ ಸಾಬ್ ಮುಲ್ಲಾನವರ್ ಅವರು ವಾಸವಾಗಿದ್ದರು. 34 ವರ್ಷದ ಅವರಿಗೆ ಎದೆನೋವು ಕಾಣಿಸಿಕೊಂಡಿದ್ದು, ತಪಾಸಣೆ ನಡೆಸಿದಾಗ ಹೃದಯ ರೋಗವಿರುವುದು ಗೊತ್ತಾಗಿತ್ತು. ಅದೇ ನೋವಿನಲ್ಲಿ ಅವರು ಮಾನಸಿಕವಾಗಿಯೂ ಕುಗ್ಗಿದ್ದರು.
ಮೇ 23ರಂದು ರಾತ್ರಿ 11.45ಕ್ಕೆ ಅವರು ತಮ್ಮ ಬದುಕು ಅಂತ್ಯಗೊಳಿಸುವ ನಿರ್ಣಯ ಮಾಡಿದರು. ವಾಸದ ಮನೆಯ ಕೋಣೆಯಲ್ಲಿದ್ದ ಫ್ಯಾನಿಗೆ ವೇಲು ಕಟ್ಟಿದ ಅವರು ಅದಕ್ಕೆ ಕೊರಳು ಸಿಕ್ಕಿಸಿ ನೇತಾಡಿದರು. ಅಕ್ಕನ ಸಾವಿನ ಬಗ್ಗೆ ಹಳಿಯಾಳ ಶಿವಪುರದ ರಾಜಸಾಬ್ ಮೆಹಬೂಬ್‌ಸಾಬ್ ಮುಲ್ಲಾನವರ್ ಮಾಹಿತಿ ನೀಡಿದ್ದು, ಪೊಲೀಸರು ಪ್ರಕರಣ ದಾಖಲಿಸಿದರು. ಮರಣೋತ್ತರ ಪರೀಕ್ಷೆ ನಂತರ ಶವವನ್ನು ಕುಟುಂಬಕ್ಕೆ ಹಸ್ತಾಂತರಿಸಿದರು.