ಭಟ್ಕಳದ ಶಿರಾಲಿ ತಟ್ಟಿಹಕ್ಕಲ ಬಳಿಯ ನದಿಯಲ್ಲಿ ಸೋಮವಾರ ಮಾದೇವ ಜಟ್ಟಪ್ಪ ನಾಯ್ಕ ಅವರ ಶವ ಸಿಕ್ಕಿದೆ. ಹೀಗಾಗಿ ಚಿಪ್ಪೆಕಲ್ಲು ಆರಿಸಲು ಹೋಗಿ ಸಾವನಪ್ಪಿದವರ ಸಂಖ್ಯೆ 11ಕ್ಕೆ ಏರಿಕೆಯಾಗಿದೆ.
ಭಾನುವಾರ ನಡೆದಿದ್ದ ಭೀಕರ ದುರಂತದಲ್ಲಿ 8 ಜನ ಜಲ ಸಮಾಧಿಯಾಗಿದ್ದರು. ಅದಾದ ನಂತರ ಮತ್ತೊಬ್ಬರ ಶವ ಸಿಕ್ಕಿತ್ತು. ನಂತರ ಮತ್ತಿಬ್ಬರು ಸಾವನಪ್ಪಿದ್ದು, ಭಾನುವಾರ ರಾತ್ರಿಯೊಳಗೆ 10 ಜನ ಶವವಾಗಿದ್ದು ಖಚಿತವಾಗಿತ್ತು. ಸೋಮವಾರ ನೀರಿನ ಆಳದಲ್ಲಿ ಮಾದೇವ ನಾಯ್ಕ ಅವರು ಶವವಾಗಿ ಕಾಣಿಸಿಕೊಂಡಿದ್ದಾರೆ.
ಭಾನುವಾರ ಬೆಳಿಗ್ಗೆ ಪಡುಶಿರಾಲಿಯ ಮಾದೇವ ಬೈರಪ್ಪ ನಾಯ್ಕ (52 ವರ್ಷ) ಅವರ ಶವವನ್ನು ಸ್ಥಳೀಯರು ನೋಡಿದ್ದಾರೆ. ಮಾದೇವ ಬೈರಪ್ಪ ನಾಯ್ಕ (52 ವರ್ಷ) ಅವರ ಜೊತೆ ಲಕ್ಷ್ಮಿ ಮಾದೇವ ನಾಯ್ಕ (38), ಲಕ್ಷ್ಮಿ ಮಹಾದೇವ ನಾಯ್ಕ (42) ಲಕ್ಷ್ಮಿ ಶಿವರಾಮ ನಾಯ್ಕ (39), ಉಮೇಶ ಮಂಜುನಾಥ ನಾಯ್ಕ (25), ಮಾಸ್ತಮ್ಮ ಮಂಜುನಾಥ ನಾಯ್ಕ (43), ಲಕ್ಷ್ಮಿ ಅಣ್ಣಪ್ಪ ನಾಯ್ಕ (44), ಮಾಲತಿ ಜಟ್ಟಪ್ಪ ನಾಯ್ಕ (38), ಮಂಜಮ್ಮ ಗೊಯ್ದಾ ನಾಯ್ಕ (50), ನಾಗರತ್ನ ಪರಮೇಶ್ವರ ನಾಯ್ಕ (40) ಹಾಗೂ ಜ್ಯೋತಿ ನಾಗಪ್ಪ ನಾಯ್ಕ (37 ) ಅವರ ಶವ ಸಂಸ್ಕಾರ ಈ ದಿನ ಒಟ್ಟಿಗೆ ನಡೆದಿದೆ.
ಮೃತಪಟ್ಟವರೆಲ್ಲರೂ ಭಟ್ಕಳ ತಾಲೂಕಿನ ಸಾರದಹೊಳೆಯ ಪಡುಶಿರಾಲಿ ಹಾಗೂ ಹಿರೆಹಿತ್ಲು ಗ್ರಾಮಗಳಿಗೆ ಸೇರಿದವರಾಗಿದ್ದಾರೆ.ನೀರಿನಲ್ಲಿ ಮುಳುಗಿ ತೀವ್ರವಾಗಿ ಅಸ್ವಸ್ಥರಾಗಿದ್ದ ನಾಗರತ್ನ ಈಶ್ವರ ನಾಯ್ಕ, ಮಾದೇವಿ ನಾಯ್ಕ ಹಾಗೂ ಲಲಿತಾ ಜಗದೀಶ ನಾಯ್ಕರನ್ನು ರಕ್ಷಿಸಿ ಉಡುಪಿಯ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಸದ್ಯ ಈ ಮೂವರೂ ಚೇತರಿಸಿಕೊಳ್ಳುತ್ತಿದ್ದಾರೆ.